ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧಿಸಿದ ಐಎಸ್‌ಡಿ ತಂಡ

Published : Feb 11, 2023, 10:37 AM ISTUpdated : Feb 11, 2023, 11:42 AM IST
ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧಿಸಿದ ಐಎಸ್‌ಡಿ ತಂಡ

ಸಾರಾಂಶ

ಬೆಂಗಳೂರಿನ ಧಣೀಸಂದ್ರದಲ್ಲಿ ಶಂಕಿತ ಉಗ್ರನನ್ನು ಐಎಸ್‍ಡಿ ಅಧಿಕಾರಿಗಳು ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರ ಅರೀಫ್ ನಗರದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿಯರ್ ಕೆಲಸ ಮಾಡುತ್ತ ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಬಗ್ಗೆ ಮಾಹಿತಿ ಕಲೆಹಾಕಿ ಇಂದು ಬೆಳಗ್ಗೆ ಐಎಸ್‌ಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಬೆಂಗಳೂರು (ಫೆ.11) ಶಂಕಿತ ಉಗ್ರನೋರ್ವನನ್ನು ಐಎಸ್‍ಡಿ ಹಾಗೂ ಎನ್‌ಐಎ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ನಗರದ ತಣಿಸಂದ್ರದ ಮಂಜುನಾಥ್ ನಗರದಲ್ಲಿ ನಡೆದ ಕಾರ್ಯಾಚರಣೆ..  

ಉತ್ತರ ಪ್ರದೇಶ ಮೂಲದ ಅರೀಫ್ ಅಲಿಯಾಸ್ ಮಹಮದ್ ಆರಿಫ್(Mohammad Arif) ಬಂಧಿತನಾಗಿರುವ ಉಗ್ರ. ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದುಕೊಂಡು  ಟೆಲಿಗ್ರಾಮ್(Telegram) ಹಾಗೂ ಡಾರ್ಕ್‌ನೆಟ್(Darkweb)  ಮೂಲಕ ಆಲ್ ಖೈದಾ ಗ್ರೂಪ್ ಗಳಲ್ಲಿ ಸಕ್ರಿಯ ಅಗಿದ್ದ ಉಗ್ರ. ಬೆಂಗಳೂರಿನಲ್ಲಿ ಇರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆ  ಧಣೀಸಂದ್ರದಲ್ಲಿ ಐಎಸ್‍ಡಿ ಹಾಗೂ ಎನ್‍ಐಎ ಅಧಿಕಾರಿಗಳು ಇಂದು (ಶನಿವಾರ) ಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ ಬಂಧಿಸಿದ್ದಾರೆ. ಐಎಸ್‍ಡಿ(ISD Team) ಅಧಿಕಾರಿಗಳು ಆರೀಫ್‌ನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ನಗರದ ಥಣಿಸಂದ್ರ(Thanisandra)ದಲ್ಲಿ ವಾಸವಾಗಿದ್ದುಕೊಂಡು ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಶಂಕಿತ ಉಗ್ರ ಅರೀಫ್(Arif terrorist). ಐಸಿಸ್( ಜೊತೆ ನಿರಂತರ ಸಂಪರ್ಕದಲ್ಲಿ ಇರೋದ್ರ ಬಗ್ಗೆ ಮಾಹಿತಿ ಕಲೆಹಾಕಿದ್ದ ಐಎಸ್ ಡಿ ತಂಡ(ISD Team). ಬಳಿಕ ಶಂಕಿತ ಉಗ್ರನ ಬಗ್ಗೆ ಎನ್ ಐ ಎ(NIA) ಅಧಿಕಾರಿಗಳಿಗೂ ಮಾಹಿತಿ ನೀಡಿದ್ದರು. ಐಎಸ್ ಡಿ ಹಾಗೂ ಎನ್ ಐ ಎ ಜಂಟಿಯಾಗಿ ಈತನ ಮೇಲೆ ಕಣ್ಣಿಟ್ಟಿತ್ತು. ಐಸಿಸ್ ಗೆ ಹೋಗಲು ಎಲ್ಲಾ ತಯಾರಿ ಮಾಡಿಕೊಂಡಿದ್ದ ಶಂಕಿತ ಉಗ್ರ ಅರೀಫ್. ಇಂದು ಮುಂಜಾನೆ ಐಎಸ್‌ಡಿ ಹಾಗೂ ಎನ್ ಐ ಎ ಅಧಿಕಾರಿಗಳಿಂದ ಬಂಧನ

ತಾಲಿಬಾನ್ ಹೆಸರಲ್ಲಿ NIAಗೆ ಬಂತು ಉಗ್ರ ದಾಳಿ ಮೇಲ್, ಮುಂಬೈ ಸೇರಿ ಹಲವು ನಗರದಲ್ಲಿ ಹೈ ಅಲರ್ಟ್!

ಅಲ್‌ಖೈದ ಜತೆ ಸಂಪರ್ಕ:

ನಗರದಲ್ಲಿ ಟೆಕ್ಕಿಯಾಗಿದ್ದುಕೊಂಡು ಅಲ್‌ಕೈದಾ(Al Qaeda) ಜತೆ ನಿರಂತರ ಸಂಪರ್ಕದಲ್ಲಿದ್ದ ಉಗ್ರ ಅರೀಫ್ ಈ ಹಿಂದೆ ಸಿರಿಯಾಕ್ಕೆ ಇರಾಕ್ ಮೂಲಕ ತೆರಳಲು ಯತ್ನಿಸಿದ್ದ. ಆದರೆ ಎರಡೂ ದೇಶಗಳಿಂದ ಒಪ್ಪಿಗೆ ಇಲ್ಲದ ಕಾರಣ  ಹೋಗಲು ಸಾದ್ಯವಾಗಿರಲಿಲ್ಲ. ಮುಂದಿನ ತಿಂಗಳು ಮಾರ್ಚ್‌ನಲ್ಲಿ ಇರಾಕ್ ಮೂಲಕ ಸಿರಿಯಾ, ಅಫ್ಘಾನ್‌ಗೆ ತೆರಳಲು ಸಿದ್ಧತೆ ನಡೆಸಿದ್ದ. ವಿಮಾನದ ಟಿಕೆಟ್ ಕೂಡ ಬುಕ್ ಮಾಡಿದ್ದ ಶಂಕಿತ ಉಗ್ರ. ಕಳೆದ ಎರಡು ವರ್ಷಗಳಿಂದ ಅಲ್‌ಖೈದಾ ಜತೆಗೆ ಸಂಪರ್ಕದಲ್ಲಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿರುವ ಎನ್‌ಐಎ ತಂಡ. ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಅರೀಫ್ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ವರ್ಕ್ ಫ್ರಂ ಹೋಂ ಮೂಲಕ ಮನೆಯಿಂದಲೇ ಕೆಲಸ ಮಾಡುತ್ತಿದ್ದ.

ಈ ಹಿಂದೆ ಐಸಿಸ್  ಬಗ್ಗೆ  ಒಲವನ್ನು ಹೊಂದಿದ್ದ ಮೊಹಮ್ಮದ್ ಅರೀಫ್ ಆದರೆ  ನಂತರ ಆಫ್ಘಾನಿಸ್ತಾನದದಲ್ಲಿ ಆಲ್ ಖೈದಾ ಮತ್ತು ತಾಲಿಬಾನ್ ಪ್ರವರ್ಧಮಾನಕ್ಕೆ ಬಂದಿತ್ತು ಬಂದ ಬಳಿಕ ಅಲ್‌ಖೈದಾ ಸಂಘಟನೆ ಸೇರಲು ಬಯಸಿದ್ದ. ಅದೇ ಕಾರಣ ಟೆಲಿಗ್ರಾಂ, ಡಾರ್ಕ್ ವೆಬ್ ಮೂಲಕ ನಿರಂತರ ಸಂಪರ್ಕದಲ್ಲಿ ಉಗ್ರ. ಈ ಹಿಂದೆ  ಟ್ವಿಟರ್ ನಲ್ಲಿ ಉಗ್ರ ಸಂಘಟನೆ ಪರವಾಗಿ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ ಪೋಸ್ಟ್ ಮಾಡಿದ್ದ. ಟ್ವೀಟರ್ ಸಂಸ್ಥೆ ಅದನ್ನು ಬ್ಲಾಕ್ ಮಾಡಿತ್ತು. ಬಳಿಕ ಉಗ್ರ ಟ್ವೀಟರ್‌ನಲ್ಲಿ ಸಕ್ರಿಯನಾಗಿರಲಿಲ್ಲ. 

ಎರಡು ದಿನದಲ್ಲಿ ಮನೆ ಖಾಲಿ ಮಾಡಲು ಸಿದ್ಧತೆ ನಡೆಸಿದ್ದ ಉಗ್ರ ಅರೀಫ್. ಸೋಮವಾರದೊಳಗೆ ಮನೆ ಬಿಡುವುದಾಗಿ ಮನೆ ಮಾಲೀಕರಿಗೆ ತಿಳಿಸಿದ್ದ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉತ್ತರ ಪ್ರದೇಶಕ್ಕೆ ಬಿಟ್ಟು ಪರಾರಿಯಾಗಲು ರೆಡಿಯಾಗಿದ್ದ. ಈ ಹಿನ್ನಲೆ ಇಂದು ಬೆಳಗ್ಗೆ 4 ಗಂಟೆಗೆ ಉಗ್ರ ವಾಸವಿದ್ದ ಮನೆ ಮೇಲೆ ಐಎಸ್ ಡಿ ತಂಡ ಮಿಂಚಿನ ದಾಳಿ ಮಾಡಿದೆ. ದಾಳಿ ನಡೆದ ವೇಳೆ ಮನೆಯಲ್ಲಿ ಮಲಗಿದ್ದ ಉಗ್ರ ಅರೀಫ್. ಇದೆಲ್ಲ ಮಾಹಿತಿ ಪಡೆದ ಐಎಸ್‌ಡಿ ಎನ್‌ಐಎ ಅಧಿಕಾರಿಗಳು ಇಂದು ಬೆಳಗ್ಗೆಯೇ ಮಿಂಚಿನ ಕಾರ್ಯಾಚರಣೆ ನಡೆಸಿ ಉಗ್ರ ಅರೀಫ್ ನ ಬಂಧಿಸಿದ್ದಾರೆ. ಈ ವೇಳೆ ಲ್ಯಾಪ್‌ಟಾಪ್ ಎರಡು ಹಾರ್ಡ್ ಡಿಸ್ಕ್ ವಶಕ್ಕೆ ಪಡೆಯಲಾಗಿದೆ.  ದ್ಯ ಐಎಸ್‌ಡಿ ತಂಡ ಉಗ್ರನನ್ನು ಬಂಧಿಸಿದ್ದು ತೀವ್ರ ವಿಚಾರಣೆ ನಡೆಸುತ್ತಿದೆ.

ಒಂದೂವರೆಗೆ ವರ್ಷದ ಹಿಂದೆ ಬಾಡಿಗೆ ಮನೆ ಮಾಡಿಕೊಂಡಿದ್ದ ಉಗ್ರ ಅರೀಫ್. ಈ ಮೊದಲು ಪಿಜಿಯಲ್ಲಿದ್ದುಕೊಂಡು ಕೆಲಸ ಮಾಡುತ್ತಿದ್ದ. ಬಳಿಕ ಥಣಿಸಂದ್ರದ ಮಂಜುನಾಥ ನಗರದಲ್ಲಿ ಬಾಡಿಗೆ ಮನೆ ಮಾಡಿ ಹೆಂಡತಿ ಮಕ್ಕಳನ್ನು ಕರೆಸಿಕೊಂಡಿದ್ದ ಉಗ್ರ ಅರೀಫ್.

ವಿಚಾರಣೆ ವೇಳೆ ಬಾಯಿ ಬಿಡದ ಉಗ್ರ:

ಅರಿಫ್ ಬಂಧನ ಹಿನ್ನೆಲೆ ಅವನ ಪತ್ನಿ ಸಫಾಳನ್ನು ಎನ್‌ಐಎ ತಂಡ ತೀವ್ರ ವಿಚಾರಣೆ ನಡೆಸಿದೆ. ಆದರೆ ಏನೂ ಬಾಯಿಬಿಡದ ಪತ್ನಿ ಸಫಾ. ಹೀಗಾಗಿ ಇಬ್ಬರನ್ನೂ ವಶಕ್ಕೆ ಪಡೆದು ಎನ್ ಐಎ ಕಚೇರಿಗೆ ಕರೆದೊಯ್ಯಲಿರೋ ಅಧಿಕಾರಿಗಳು

ಜಮ್ಮು ಕಾಶ್ಮೀರದಲ್ಲಿ ಮೊದಲ ಬಾರಿಗೆ ಪರ್ಫ್ಯೂಮ್‌ ಬಾಂಬ್‌ ಪತ್ತೆ: ಉಗ್ರನ ಬಳಿ ಇತ್ತು ಸುಗಂಧ ಬಾಟಲ್‌ ಬಾಂಬ್‌..!

ಸುಮಾರು ನಾಲ್ಕು ಗಂಟೆಗಳ ಕಾಲ ಆರೀಪ್ ವಿಚಾರಣೆ ಮಾಡಿದ ಎನ್ ಐಎ.  ದಾಳಿ ಆದ ಬಳಿಕ ಸುಮಾರು ಒಂದು ಗಂಟೆ ಐಎಸ್‌ಡಿ ವಿಚಾರಣೆ ಮಾಡಲಾಗಿತ್ತು ಆದರೆ ಈ ವೇಳೆಯೂ ಏನು ಬಾಯಿಬಿಡದ ಆರೀಫ್. ನಂತ್ರ ಗಂಡ ಹೆಂಡತಿ ಇಬ್ಬರನ್ನು ವಿಚಾರಣೆ ಮಾಡಿದ ಎನ್‌ಐಎ ಈಗ ವಿಚಾರಣೆ ವೇಳೆ ಬಾಯಿಬಿಡದ ಹಿನ್ನೆಲೆ ಎನ್‌ಐಎ ಕಚೇರಿಗೆ ಕರೆದೊಯ್ದ ಅಧಿಕಾರಿಗಳು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೂರು ವರ್ಷಗಳಲ್ಲಿ 57,733 ಸೈಬರ್ ಅಪರಾಧ, ₹5,473 ಕೋಟಿ ವಂಚನೆ: ಗೃಹ ಸಚಿವ ಪರಮೇಶ್ವರ್
ಮೇಕೆದಾಟು, ಭದ್ರಾ, ಕೃಷ್ಣಾ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ವಿಳಂಬ: ಡಿ.ಕೆ.ಶಿವಕುಮಾರ್ ಆಕ್ರೋಶ