ಪಿಎಸ್‌ಐ ಅಕ್ರಮ ಆರೋಪಿಗಳಿಗೆ ಇನ್ನೆಂದೂ ಪೊಲೀಸ್‌ ಕೆಲಸ ಸಿಗಲ್ಲ!

Published : Feb 11, 2023, 08:11 AM IST
ಪಿಎಸ್‌ಐ ಅಕ್ರಮ ಆರೋಪಿಗಳಿಗೆ ಇನ್ನೆಂದೂ ಪೊಲೀಸ್‌ ಕೆಲಸ ಸಿಗಲ್ಲ!

ಸಾರಾಂಶ

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಸಿಕ್ಕಿಬಿದ್ದ 53 ಅಭ್ಯರ್ಥಿಗಳಿಗೆ (ಇದುವರೆಗಿನ ತನಿಖೆಯಲ್ಲಿ) ಭವಿಷ್ಯದಲ್ಲಿ ಪೊಲೀಸ್‌ ನೇಮಕಾತಿಯಲ್ಲಿ ಅವಕಾಶ ಸಿಗದಂತೆ ಮಾಡಲು ಆಧಾರ್‌ ಸಂಖ್ಯೆಯನ್ನು ಆಧರಿಸಿ ರಾಜ್ಯ ಪೊಲೀಸ್‌ ನೇಮಕಾತಿ ವಿಭಾಗವು ನಿರ್ಬಂಧ ವಿಧಿಸಿದೆ.

ಬೆಂಗಳೂರು (ಫೆ.11) : ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಸಿಕ್ಕಿಬಿದ್ದ 53 ಅಭ್ಯರ್ಥಿಗಳಿಗೆ (ಇದುವರೆಗಿನ ತನಿಖೆಯಲ್ಲಿ) ಭವಿಷ್ಯದಲ್ಲಿ ಪೊಲೀಸ್‌ ನೇಮಕಾತಿಯಲ್ಲಿ ಅವಕಾಶ ಸಿಗದಂತೆ ಮಾಡಲು ಆಧಾರ್‌ ಸಂಖ್ಯೆಯನ್ನು ಆಧರಿಸಿ ರಾಜ್ಯ ಪೊಲೀಸ್‌ ನೇಮಕಾತಿ ವಿಭಾಗವು ನಿರ್ಬಂಧ ವಿಧಿಸಿದೆ.

ನೇಮಕಾತಿ ಅಕ್ರಮ(PSI Recruitment is illegal case) ಪ್ರಕರಣ ಸಂಬಂಧ ಬಂಧಿತ ಅಭ್ಯರ್ಥಿಗಳ ಕುರಿತು ರಾಜ್ಯ ಅಪರಾಧ ತನಿಖಾ ದಳ(State Crime Investigation Department)ದಿಂದ (ಸಿಐಡಿ) ಮಾಹಿತಿ ಪಡೆಯಲಾಗಿದೆ. ಆರೋಪಿತ ಅಭ್ಯರ್ಥಿಗಳಿಗೆ ಮುಂದೆ ಯಾವುದೇ ಪೊಲೀಸ್‌ ನೇಮಕಾತಿಯಲ್ಲಿ ಅವಕಾಶ ನೀಡುವುದಿಲ್ಲ. ಇದಕ್ಕಾಗಿ ಆರೋಪಿಗಳ ಆಧಾರ್‌ ನಂಬರ್‌ ಅನ್ನು ಇಲಾಖೆಯ ವೆಬ್‌ಸೈಟ್‌ಗೆ ಲಿಂಕ್‌ ಮಾಡಲಾಗಿದ್ದು, ನೇಮಕಾತಿಗೆ ಅವರ ಅರ್ಜಿಯೇ ಸ್ವೀಕೃತವಾಗದಂತೆ ನಿರ್ಬಂಧಿಸಲಾಗಿದೆ ಎಂದು ನೇಮಕಾತಿ ವಿಭಾಗದ ಡಿಜಿಪಿ ಕಮಲ್‌ ಪಂತ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

PSI Recruitment Scam: ಪಿಎಸ್‌ಐ ಪರೀಕ್ಷೆ ಅಕ್ರಮಕ್ಕೆ 43 ಸಿಮ್‌ ಖರೀದಿಸಿದ್ದ ಭೂಪ..!

ಪೊಲೀಸ್‌ ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಒಮ್ಮೆ ಅಕ್ರಮದಲ್ಲಿ ತೊಡಗುವವರಿಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡದಿರುವ ನಿರ್ಧಾರಕ್ಕೆ ಬರಲಾಗಿದೆ. ಅಂತೆಯೇ 545 ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಅಭ್ಯರ್ಥಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗಿದ್ದು, ಅವರನ್ನು ಡಿಬಾರ್‌ ಕೂಡಾ ಮಾಡಲಾಗಿದೆ ಎಂದು ಹೇಳಿದ್ದಾರೆ.

ಪೊಲೀಸ್‌ ಇಲಾಖೆ ಹಾಗೂ ನೇಮಕಾತಿ ವಿಭಾಗದ ವೆಬ್‌ಸೈಟ್‌ಗೆ ಆರೋಪಿತ ಅಭ್ಯರ್ಥಿಗಳ ನಂಬರ್‌ ಅನ್ನು ಲಿಂಕ್‌ ಮಾಡಲಾಗಿದೆ. ಪೊಲೀಸ್‌ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸುವಾಗ ಆಧಾರ್‌ ಕಾರ್ಡ್‌ ನಂಬರ್‌ ಅನ್ನು ಸಹ ನಮೂದಿಸಬೇಕಾಗುತ್ತದೆ. ಆಗ ಆರೋಪಿತ ಅಭ್ಯರ್ಥಿಗಳ ಅರ್ಜಿ ಸ್ವೀಕೃತವಾಗುವುದಿಲ್ಲ. ಇದರಿಂದ ಮುಂದೆ ಅಕ್ರಮದಲ್ಲಿ ತೊಡುವವರಿಗೆ ಎಚ್ಚರಿಕೆ ಪಾಠವಾಗಲಿದೆ ಎಂದು ಹೇಳಿದ್ದಾರೆ.

ಪಿಎಸ್‌ಐ ನೇಮಕಾತಿ ಅಕ್ರಮ: ಲಂಚ ಆರೋಪದ ಹಿಂದೆ ತನಿಖಾಧಿಕಾರಿ ಬದಲು ಸಂಚು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೊಸದಾಗಿ 545 ಪಿಎಸ್‌ಐ ಶೀಘ್ರ ಸೇವೆಗೆ ನಿಯೋಜನೆ: ಗೃಹ ಸಚಿವ ಪರಮೇಶ್ವರ್‌
Karnataka News Live: ಮಾಟಗಾತಿಯ ಮಾತು ಕೇಳಿ ಗಂಡು ಮಗುವಿಗಾಗಿ ಪತ್ನಿಯ ತಲೆ ಕೂದಲು ಕತ್ತರಿಸಿದ ಪತಿ