ದಸರಾ ಅಂಬಾರಿ ಹೊತ್ತಿದ್ದ ಆನೆಗೆ ಗುಂಡು ಹೊಡೆದವನ ಬಂಧನ!

By Santosh NaikFirst Published Dec 17, 2022, 9:01 AM IST
Highlights

ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿಯನ್ನು 14 ಬಾರಿ ಅಂಬಾರಿಯಲ್ಲಿ ಹೊತ್ತು ತಿರುಗಾಡಿದ್ದ ಬಲರಾಮ ಆನೆಗೆ ಗುಂಡು ಹೊಡೆದಿದ್ದ ಜಮೀನಿನ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
 

ಮೈಸೂರು (ಡಿ. 17): ಮೈಸೂರಿನ ವಿಶ್ವವಿಖ್ಯಾತ ಜಂಬೂ ಸವಾರಿಯಲ್ಲಿ 14 ಬಾರಿ ದೇವಿ ಚಾಮುಂಡೇಶ್ವರಿಯನ್ನು ಹೊತ್ತಿದ್ದ ಬಲರಾಮನಿಗೆ ಗುಂಡು ಹಾಕಿದ್ದ ಜಮೀನಿನ ಮಾಲೀಕನ್ನು ಪೊಲೀಸರು ಬಂದಿದ್ದಾರೆ.  ಆನೆಗೆ ಗುರುವಾರ ರಾತ್ರಿ ಜಮೀನಿನ ಮಾಲೀಕ ಸುರೇಶ್ ಎಂಬಾತ ಗುಂಡು ಹಾರಿಸಿದ್ದ. ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಆತನನ್ನು ಬಂಧಿಸಿದ್ದಾರೆ.  ಪಿರಿಯಾಪಟ್ಟಣ ತಾಲ್ಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪವಿರುವ ಜಮೀನಿನ ಮಾಲೀಕನಾಗಿರುವ ಸುರೇಶ್‌, ತಮ್ಮ ಜಮೀನಿಗೆ ಆನೆ ಬಂದಿದ್ದರಿಂದ ಸಿಟ್ಟಾಗಿದ್ದ. ಆತನಿಗೆ ಇದು ಮೈಸೂರಿನ ದಸರಾ ಆನೆ ಎನ್ನುವುದು ಗೊತ್ತಿರಲಿಲ್ಲ. ಬಂದೂಕಿನಿಂದ ಆತ ಹಾರಿಸಿದ್ದ ಗುಂಡು, ಬಲರಾಮನ ತೊಡೆಗೆ ಹೊಕ್ಕಿತ್ತು. ಆ ಬಳಿಕ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶುವೈದ್ಯಾಧಿಕಾರಿ ಡಾ.ರಮೇಶ್ ಆನೆಗೆ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರಸ್ತುತ ಬಲರಾಮ‌ ಚೇತರಿಸಿಕೊಂಡಿದ್ದಾನೆ. 

ಕಾಡಾನೆ ಜೊತೆ ಕಾದಾಟದಲ್ಲಿ ಗಂಭೀರ ಗಾಯ: ದಸರಾ ಆನೆ ಗೋಪಾಲಸ್ವಾಮಿ ಸಾವು

ಇನ್ನೊಂದೆಡೆ ಜಮೀನಿನ ಮಾಲೀಕ ವನ್ಯ ಜೀವಿ ಕಾಯ್ದೆ ಉಲ್ಲಂಘನೆ ಆರೋಪದ ಅಡಿಯಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ಬಂಧಿಸಿ,‌ ಸಿಂಗಲ್ ಬ್ಯಾರಲ್ ಬಂದೂಕು, ಕಾರ್ಟ್ರಿಜ್ ವಶಪಡಿಸಿಕೊಳ್ಳಲಾಗಿದೆ.  ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಈ ಬಾರಿಯ ದಸರೆಗೆ 28.74 ಕೋಟಿ ರು. ವೆಚ್ಚ

click me!