ಈ ಚೆಂದಕ್ಕೆ ನಿಮ್ಗೆ ಮಿನಿಸ್ಟರ್ ಗಿರಿ ಬೇಕಾ ಜಾರಕಿಹೊಳಿ ಸಾಹೇಬ್ರೇ..?

By Ramesh BFirst Published Nov 20, 2018, 4:41 PM IST
Highlights

ಇವರು ಹೆಸರಿಗೆ ಸಚಿವರು. ಇವರಿಗೆ ಸರ್ಕಾರಿ ಕಾರು, ಬಂಗಲೆ ಬೇಕು. ಆದ್ರೆ ಅಭಿವೃದ್ಧಿ, ಜನರ ಕಷ್ಟಗಳು ಮಾತ್ರ ಕೇಳಲ್ವಂತೆ. ಕೈಯಲ್ಲಿ ಮಿನಿಸ್ಟರ್ ಗಿರಿ ಇಟ್ಟುಕೊಂಡು ಸರ್ಕಾರಕ್ಕೂ ತಮಗೂ ಯಾವುದೇ ಸಂಬಂಧವಿಲ್ಲದಂತೆ ದೂರ-ದೂರ ಓಡಾಡುತ್ತಿದ್ದಾರೆ. ಇವರಿಗೆಲ್ಲ ಮಂತ್ರಿಗಿರಿ ಬೇಕಾ? ಯಾವ ಪುರುಷಾರ್ಥಕ್ಕೆ ಮಂತ್ರಿ ಸ್ಥಾನದಲ್ಲಿದ್ದಾರೋ ಗೊತ್ತಿಲ್ಲ.

ಬೆಂಗಳೂರು, [ನ.20]: ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಸುಮಾರು 5 ತಿಂಗಳಗಳು ಕಳೆದಿವೆ. ಈ ಐದು ತಿಂಗಳಲ್ಲಿ ಏನಿಲ್ಲ ಅಂದ್ರೂ ಸುಮಾರು 10ಕ್ಕೂ ಹೆಚ್ಚು ಸಚಿವ ಸಂಪುಟ ಸಭೆಗಳು ನಡೆದಿವೆ. 

ಆದ್ರೆ.ಮಾನ್ಯ ಗೌರವಾನ್ವಿತ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಮಾತ್ರ ಇದ್ಯಾವುದು ನನಗೆ ಸಂಬಂಧವಿಲ್ಲದಂತೆ, ಸರ್ಕಾರ ಕೊಟ್ಟ ಕಾರು, ನಿವಾಸವನ್ನ ಉಪಯೋಗಿಸುತ್ತಾ ಮಜಾ ಮಾಡುತ್ತಿದ್ದಾರೆ.

ದರ್ಗಾದಿಂದಲೇ ದಂಗಲ್: ಇದು ಪ್ರವಾಸವೋ? ಶಕ್ತಿ ಪ್ರದರ್ಶನವೋ?

ರಮೇಶ್ ಜಾರಕಿಹೊಳಿ ನಡೆ ನೋಡಿದ್ರೆ ಕೆಲಸಕ್ಕೆ ನೋ.. ಊಟಕ್ಕೆ ಹಾಜರ್ ಎಂಬಂತಿದೆ. ಯಾಕಂದ್ರೆ ತಮ್ಮ ಸ್ವಕ್ಷೇತ್ರದಲ್ಲಿ ಕಬ್ಬು ಬೆಳಗಾರರ ಕಿಚ್ಚು ಕೊತ ಕೊತ ಅಂತ ಕುದಿಯುತ್ತಿದ್ರೆ, ಸಚಿವರು ಮಾತ್ರ ಡೋಂಟ್ ಕೇರ್ ಅಂದಿದ್ದಾರೆ.

ಅಷ್ಟೇ ಅಲ್ಲದೇ ನಿನ್ನೆ [ಸೋಮವಾರ] ತಮ್ಮ ಜಿಲ್ಲೆಯ ಸಾವಿರಾರೂ ರೈತರು ಬೆಂಗಳೂರಿನಲ್ಲಿ ನಮ್ಮ ಕಬ್ಬಿನ ಬಾಕಿ ಹಣ ಕೊಡಿಸಿ ಎಂದು ಅಂಗಲಾಚಿ ಬೇಡಿಕೊಂಡ್ರು. ರಮೇಶ್ ಜಾರಕಿಹೊಳಿ ಮಾತ್ರ ರೈತರ ಬಳಿ ಸುಳಿಯಲೇ ಇಲ್ಲ.

ರಮೇಶ್‌ ಜಾರಕಿಹೊಳಿ ಸಚಿವ ಸ್ಥಾನಕ್ಕೆ ಕುತ್ತು?

ರೈತರ ಬಳಿ ಹೋಗುವುದು ಒಂದು ಕಡೆ ಇರಲಿ, ರೈತರ ಪರವಾಗಿ ನಡೆದ ಸಚಿವ ಸಂಪುಟ ಸಭೆಯಿಂದ ಅರ್ಧಕ್ಕೆ ಹೊರ ನಡೆದು ಉದ್ಘಟತನ ಮೆರೆದಿದ್ದಾರೆ. ಇದ್ರಿಂದ ರಮೇಶ್ ಜಾರಕಿಹೊಳಿ ನಡೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಅಸಮಾಧನಗೊಂಡಿದ್ದಾರೆ.

ಬೆಳಗಾವಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದು, ಉಸ್ತುವಾರಿ ಸಚಿವರಾಗಿರುವ ರಮೇಶ್ ಜಾರಕಿಹೊಳಿ ಅವರು ಸಕ್ಕರೆ ಕಾರ್ಖಾನೆ ಮಾಲಿಕರೂ ಆಗಿದ್ದು, ಸಮಸ್ಯೆ ಕೇಳದೇ ತಲೆ ಮರೆಸಿಕೊಂಡಿದ್ದಾರೆ.

"

ಹೀಗೆ ಸಭೆ ಬೇಡ, ರೈತರ ಗೋಳು ಕೇಳೊದಿಲ್ಲ, ಅತ್ತ ಕ್ಷೇತ್ರದ ಜನರ ಭಾವನೆಗಳಿಗೆ ಸ್ಪಂದನೆಗಳಿಲ್ಲ ಅಂದ್ರೆ ಯಾಕ್ರೀ ಬೇಕು ಇವರಿಗೆಲ್ಲ ರಾಜಕೀಯ, ಮಂತ್ರಿಗಿರಿ ಎನ್ನುವುದು ಸಾಮಾನ್ಯ ಜನರ ಮಾತು.

ಒಂದು ಸಮುದಾಯದ ಹೆಸರಿನ ಮೇಲೆ ಪಕ್ಷದಲ್ಲಿ ಗುಂಪುಗಾರಿಕೆ ಮಾಡಿಕೊಂಡು ಹೈಕಮಾಂಡ್ ಗೆ ಬ್ಲಾಕ್ ಮೇಲ್ ರಾಜಕೀಯ ಮಾಡುವುದೊಂದೇ ಕಾಯಕ ನಾ? 

ಇನ್ನು ತಮ್ಮ ಸಹೋದರ ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಿಲ್ಲವೆಂದು ಮುನಿಸಿಕೊಂಡಿರೋ ರಮೇಶ್ ಜಾರಕಿಹೊಳಿ, ತಮ್ಮ ಕೈಯಲ್ಲಿ ಮಿನಿಸ್ಟರ್ ಸ್ಥಾನ ಇಟ್ಟುಕೊಂಡು ಸರ್ಕಾರಕ್ಕೂ ನನಗೂ ಸಂಬಂಧವಿಲ್ಲದಂತೆ ತಿರುಗಾಡುತ್ತಿದ್ದಾರೆ. 

ಇದು ಎಷ್ಟರ ಮಟ್ಟಿಗೆ ಸರಿ? ಇದನ್ನ ಮುಖ್ಯಮಂತ್ರಿಗಳಾಗಲಿ ಅಥವಾ ಪಕ್ಷದ ಹೈಕಮಾಂಡ್ ಆಗಲಿ ಯಾಕೆ ರಮೇಶ್ ನಡೆ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಇಂತ ಸಚಿವರು ಇದ್ರೆಷ್ಟು ಹೋದ್ರೆಷ್ಟು. ಇಂತವರ ಮುಖಕ್ಕೆ ಮಿನಿಸ್ಟರ್ ಗಿರಿ ಒಂದು ಕೇಡು.

click me!