ರೇಣುಕಾಸ್ವಾಮಿಗೆ ಒಂಟಿ ವೃಷಣ, ತನಿಖೆ ವೇಳೆ ಅಂಗಾಂಗ ವೈಕಲ್ಯ ಬಯಲು!

By Chethan Kumar  |  First Published Sep 9, 2024, 11:36 AM IST

ದರ್ಶನ್ ಗ್ಯಾಂಗ್‌ನಿಂದ ಮೃತನಾದ ರೇಣುಕಾಸ್ವಾಮಿ ಅಂಗಾಂಗ ವೈಕಲ್ಯ ಒಂದು ಬಯಲಾಗಿದೆ.ಹುಟ್ಟಿನಿಂದಲೇ ರೇಣುಕಾಸ್ವಾಮಿ ಒಂಟಿ ವೃಷಣ ಹೊಂದಿರುವ ಮಾಹಿತಿ ಇದೀಗ ಬಯಲಾಗಿದೆ.


ಬೆಂಗಳೂರು(ಸೆ.09) ನಟ ದರ್ಶನ್ ಹಾಗೂ ಗ್ಯಾಂಗ್ ನಡೆಸಿದ ಹತ್ಯೆ ಪ್ರಕರಣದ ಚಾರ್ಜ್ ಶೀಟ್ ಇದೀಗ ಬಾರಿ ಸದ್ದು ಮಾಡುತ್ತಿದೆ.ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿದೆ. ಇದರ ನಡುವೆ ಕೊಲೆಯಾದ ರೇಣುಕಾಸ್ವಾಮಿ ಕುರಿತ ಮಾಹಿತಿಗಳು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಪವಿತ್ರಾ ಗೌಡಗೆ ಮಾಡಿರುವ ಮೆಸೇಜ್ ಸೇರಿದಂತೆ ಹಲವು ಮಾಹಿತಿಗಳು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಸಾಕ್ಷಿ ಸಮೇತ ಉಲ್ಲೇಖಿಸಿದ್ದಾರೆ. ಇದೀಗ ತನಿಖೆ ವೇಳೆ ಮತ್ತೊಂದು ಮಾಹಿತಿ ಬಯಲಾಗಿದೆ. ರೇಣುಕಾಸ್ವಾಮಿ ಹುಟ್ಟಿನಿಂದಲೇ ಒಂಟಿ ವೃಷಣ ಹೊಂದಿದ್ದಾರೆ ಅನ್ನೋ ವೈಕಲ್ಯ ಮಾಹಿತಿಯೂ ಬಯಲಾಗಿದೆ. ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಉನ್ನತ ಮೂಲಗಳು ಮಾಹಿತಿ ನೀಡಿದೆ.

ಹುಟ್ಟಿನಿಂದಲೇ ರೇಣುಕಾಸ್ವಾಮಿ ಅಂಗಾಗ ವೈಕಲ್ಯದಿಂದ ಹುಟ್ಟಿದ್ದಾರೆ ಅನ್ನೋದು ರೇಣುಕಾಸ್ವಾಮಿ ತಾಯಿ ಕೂಡ ದೃಢಪಡಿಸಿದ್ದಾರೆ. ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯಲ್ಲಿ ಈ ಮಾಹಿತಿ ಬಯಲಾಗಿದೆ. ಸಿಂಗಲ್ ಟೆಸ್ಟಿಕಲ್ ಬೇಬಿ ಆಗಿ ರೇಣುಕಾಸ್ವಾಮಿ ಹುಟ್ಟಿದ್ದರು ಅನ್ನೋ ಮಾಹಿತಿ ಬಯಲಾಗಿದೆ.

Tap to resize

Latest Videos

ಬಳ್ಳಾರಿ ಜೈಲಿನಲ್ಲಿ ಗಣೇಶ ಹಬ್ಬ ಆಚರಿಸಿದರೂ ನಟ ದರ್ಶನ್‌ಗೆ ಸಿಗಲಿಲ್ಲ ದರ್ಶನ!

ಒಂಟಿ ವೃಷಣ ಹೊಂದಿರು ವ್ಯಕ್ತಿಗಳಲ್ಲಿ ಲೈಂಗಿಕ ಬಯಕೆ ಹೆಚ್ಚು ಅಥವಾ ಕಡಿಮೆ ಇರಲ್ಲ. ಲೈಂಗಿಕ ಆಸಕ್ತಿ ಹಾಗೂ ಬಯಕೆಯಲ್ಲಿ ಒಂಟಿ ವೃಷಣದ ಪಾತ್ರ ಹೆಚ್ಚಾಗಿರುವುದಿಲ್ಲ ಅನ್ನೋದು ತಜ್ಞ ವೈದ್ಯರ ಮಾತು. ಹುಟ್ಟಿದಾಗಲೇ ಕೆಲವರಲ್ಲಿ ಈ ರೀತಿ ಅಂಗಾಂಗ ವೈಕಲ್ಯ ಕಾಣಿಸಿಕೊಳ್ಳುತ್ತದೆ. ಭಾಗಶಃ ಒಂಟಿ ವೃಷಣ ಸಮಸ್ಯೆಯಿಂದ ಕೆಲವು ಬಾರಿ 3 ರಿಂದ 4 ತಿಂಗಳ ಒಳಗೆ ಮಗುವಿನಲ್ಲಿ ಒಂಟಿ ವೃಷಣ ಸಮಸ್ಯೆ ಸರಿಯಾದರೆ ಭವಿಷ್ಯದಲ್ಲಿ ಸಮಸ್ಯೆ ಇರುವುದಿಲ್ಲ. ಆದರೆ 4 ತಿಂಗಳ ಬಳಿಕ ಭಾಗಶಃ ಒಂಟಿ ವೃಷಣ ಸಮಸ್ಯೆಗಳು ಸರಿ ಹೋಗದಿದ್ದಲಿ ಶಾಶ್ವತ ಸಮಸ್ಯೆಯಾಗಲಿದೆ.

ಒಂಟಿ ವೃಷಣ ಹೊಂದಿದವರಿಗೆ ಭವಿಷ್ಯದಲ್ಲಿ ಕಾಡುವ ಅತೀ ದೊಡ್ಡ ಸಮಸ್ಯೆಯೆಂದರೆ ವೃಷಣ ಕ್ಯಾನ್ಸರ್. ಒಂಟಿ ವೃಷಣ ಹೊಂದಿದವರು ವೃಷಣ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಜೊತೆಗೆ ಒಂಟಿ ವೃಷಣ ಹೊಂದಿದವರಲ್ಲಿ ಆರೋಗ್ಯಕ ವೀರ್ಯ ಸೃಷ್ಟಿಯಲ್ಲೂ ಸಮಸ್ಯೆಯಾಗಲಿದೆ. ಸರ್ಜರಿ ಮೂಲಕ ಕ್ಯಾನ್ಸರ್ ಸಮಸ್ಯೆಯನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ಸಾಧ್ಯವಿಲ್ಲ. ಆದರೆ ರಿಸ್ಕ್ ಫ್ಯಾಕ್ಟರ್ ಕಡಿಮೆ ಮಾಡಲು ಸಾಧ್ಯವಿದೆ.

ರೇಣುಕಾಸ್ವಾಮಿ ನಕಲಿ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಮೆಸೇಜ್ ಮಾಡುತ್ತಿದ್ದ ಅನ್ನೋದಕ್ಕೆ ಈ ಅಂಗಾಂಗ ವೈಕಲ್ಯ ಕಾರಣವಾಗಲ್ಲ ಅನ್ನೋದು ವೈದ್ಯರ ಅಭಿಪ್ರಾಯ. ಹೀಗಾಗಿ ಒಂಟಿ ವೃಷಣ ರೇಣುಕಾಸ್ವಾಮಿ ಮೆಸೇಜ್‌‌ಗೂ ಸಂಬಂಧವಿಲ್ಲ.

ಪವಿತ್ರಾ ಗೌಡಾಗೆ ಹಲವು ಮೆಸೇಜ್ ಮಾಡಿದ್ದ ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನು ಫೋಟೋಗಳನ್ನು ಕಳುಹಿಸಿದ್ದ. ಇಷ್ಟೇ ಅಲ್ಲ ಪವಿತ್ರಾ ಜೊತೆ ಲಿವೀಂಗ್ ರಿಲೇಶನ್‌ಶಿಪ್‌ನಲ್ಲಿರಲು ರೇಣುಕಾಸ್ವಾಮಿ ಬಯಸಿದ್ದ ಅನ್ನೋದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ತನ್ನ ಜೊತೆಗಿದ್ದರೆ ತಿಂಗಳಿಗೆ 10,000 ರೂಪಾಯಿ ಕೊಡುವುದಾಗಿ ರೇಣುಕಾಸ್ವಾಮಿ ಮೆಸೇಜ್ ಮೂಲಕ ಪವಿತ್ರಾ ಗೌಡಗೆ ಹೇಳಿದ್ದ. ರೇಣುಕಾಸ್ವಾಮಿ ಮೆಸೇಜ್ ವಿಪರೀತವಾಗುತ್ತಿದ್ದಂತೆ ಪವಿತ್ರಾ ಗೌಡ, ದರ್ಶನ್ ಆಪ್ತರಿಗೆ ಸೂಚಿಸಿದ್ದಳು. 

ದರ್ಶನ್, ದರ್ಶನ್ ಆಪ್ತರು ಹಾಗೂ ಪವಿತ್ರಾ ಗೌಡ ರೇಣುಕಾಸ್ವಾಮಿಯನ್ನು ಟ್ರಾಪ್‌ನಲ್ಲಿ ಬೀಳಿಸಲು ಪ್ಲಾನ್ ಮಾಡಿದ್ದಾರೆ. ಬಳಿಕ ಪವಿತ್ರಾ ಗೌಡ ರೇಣುಕಾಸ್ವಾಮಿ ಜೊತೆ ಚಾಟಿಂಗ್ ಆರಂಭಿಸಿದ್ದಾಳೆ. ರೇಣುಕಾಸ್ವಾಮಿ ಮೆಸೇಜ್‌ಗೆ ಉತ್ತರಿಸಿ ಆತನಿಂದ ನಂಬರ್ ಪಡೆದುಕೊಂಡಿದ್ದಾಳೆ. ಈ ನಂಬರ್‌ನ್ನು ದರ್ಶನ್ ಆಪ್ತರಿಗೆ ನೀಡಿದ್ದಾಳೆ. ದರ್ಶನ್ ಆಪ್ತರು ತಮ್ಮ ಮೊಬೈಲ್ ಮೂಲಕ ತಾವೇ ಪವಿತ್ರಾ ಗೌಡ ಎಂದು ಚಾಟಿಂಗ್ ಆರಂಭಿಸಿದ್ದಾರೆ. ಬಳಿಕ ಆತನ ವಿಳಾಸ ಸೇರಿದಂತೆ ಎಲ್ಲಾ ಮಾಹಿತಿ ಪಡೆದುಕೊಂಡಿದ್ದಾರೆ. 

ಕೊಲೆ ಉದ್ದೇಶಕ್ಕಾಗಿ ದರ್ಶನ್ ಕಿಡ್ನಾಪ್ ಮಾಡಿಸಿದ್ದ ನಟ ದರ್ಶನ್, ಚಾರ್ಜ್‌ಶೀಟ್‌ನಲ್ಲಿ ಬಹಿರಂಗ!

ಬಳಿ ದರ್ಶನ್ ಭೇಟಿ ಮಾಡುವ ನೆಪ ಒಡ್ಡಿ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಬೆಂಗಳೂರಿನ ಪಟ್ಟಣಗೆರೆ ಶೆಡ್ಡೆಗೆ ಕರೆತಂದು ಕ್ರೂರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಈ ಘಟನೆಯ ಇಂಚಿಂಚು ಮಾಹಿತಿಗಳು ಪೊಲೀಸರ ಚಾರ್ಜ್‌ಶೀಟ್‌ನಲ್ಲಿ ಬಯಲಾಗಿದೆ.
 

click me!