: ಸಿಎಂ ಬದಲಾವಣೆ ಪ್ರಸ್ತಾಪ ಹೈಕಮಾಂಡ್ ಮುಂದೆ ಇಲ್ಲ. ಅಂತಹ ಪ್ರಸ್ತಾವನೆ ಇದ್ದಿದ್ರೆ ಸ್ವಲ್ಪನಾದ್ರೂ ನಮಗೂ ಗೊತ್ತಾಗುತ್ತಿತ್ತಲ್ಲ. ಸಿಎಂ ಬದಲಾವಣೆ ಊಹಾಪೋಹ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದರು.
ಕಲಬುರಗಿ (ಸೆ.9): ಸಿಎಂ ಬದಲಾವಣೆ ಪ್ರಸ್ತಾಪ ಹೈಕಮಾಂಡ್ ಮುಂದೆ ಇಲ್ಲ. ಅಂತಹ ಪ್ರಸ್ತಾವನೆ ಇದ್ದಿದ್ರೆ ಸ್ವಲ್ಪನಾದ್ರೂ ನಮಗೂ ಗೊತ್ತಾಗುತ್ತಿತ್ತಲ್ಲ. ಸಿಎಂ ಬದಲಾವಣೆ ಊಹಾಪೋಹ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದರು.
ಇಂದು ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಎಂ.ಬಿ ಪಾಟೀಲ್ ಅವರು ಹೇಳಿದ್ದೇ ಬೇರೆ ಮಾಧ್ಯಮಗಳು ಅರ್ಥಸಿಕೊಂಡಿದ್ದೇ ಬೇರೆ. ಮುಂದೆ ಮುಖ್ಯಮಂತ್ರಿಯಾಗಬೇಕೆಂಬ ಆಸೆ ವ್ಯಕ್ತಪಡಿಸಿದ್ದಾರಷ್ಟೆ. ಆದರೆ ಸಿಎಂ ಬದಲಾವಣೆ ಅನ್ನೋದು ಕೇವಲ ಮಾಧ್ಯಮಗಳಿಗಷ್ಟೇ ಸೀಮಿತವಾಗಿದೆ ಎಂದರು.
undefined
ಕಲಬುರಗಿಯಲ್ಲಿ ಮುಂದಿನ ಸಚಿವ ಸಂಪುಟ ಸಭೆ: ಸಚಿವ ಪ್ರಿಯಾಂಕ್ ಖರ್ಗೆ
ಇನ್ನು ಹನಿಟ್ರ್ಯಾಪ್ ಜಾಲದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ತನಿಖೆ ಸೆನ್ ಎಸಿಪಿ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ. ತಪ್ಪಿತಸ್ಥರು ಯಾರೇ ಇರಲಿ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ. ಈ ಪ್ರಕರಣದಲ್ಲಿ ಈಗಾಗಲೇ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಸಾಕ್ಷ್ಯಾಧಾರ ಪರಿಗಣಿಸಿ ಇನ್ನಿತರ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುತ್ತೇವೆ. ಅಂತವರಿಂದ ಮತ್ಯಾರೇ ಅನ್ಯಾಯಕ್ಕೊಳಗಾಗಿದ್ರೆ ಧೈರ್ಯವಾಗಿ ಮುಂದೆ ದೂರು ಕೊಡಲಿ. ದೂರುದಾರರ ಮಾಹಿತಿ ಗೌಪ್ಯವಾಗಿಟ್ಟು ತನಿಖೆ ನಡೆಸಲಾಗುತ್ತದೆ ಎಂದರು.
Nasscom Summit 2024: ಕಾರು ಬಿಟ್ಟು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ ಸಚಿವ ಪ್ರಿಯಾಂಕ್ ಖರ್ಗೆ!
ಸೆ.17ರಂದು ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಬಹಳ ವರ್ಷಗಳ ನಂತರ ಸಭೆ ನಡೆಯುತ್ತಿದೆ. ಸಭೆಗೆ ಸಂಬಂಧಿಸಿದಂತೆ ಶಾಸಕರು, ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತೇವೆ. ಕ್ಯಾಬಿನೆಟ್ ಸಭೆಗೆ ಸಂಬಂಧಿಸಿದಂತೆ ನಾಳೆ ಡಿಸಿಎಂ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಯುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಈ ಸಚಿವ ಸಂಪುಟ ಸಭೆ ರಾಜ್ಯಕ್ಕೆ ಸಂಬಂಧಿಸಿದ್ದಾದ್ರೂ ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಪ್ರಾಧಾನ್ಯತೆ ಸಿಗುವ ನಿರೀಕ್ಷೆಗಳಿವೆ ಎಂದರು.