Shivamogga: ಕ್ವಿಂಟಲ್‌ಗೆ 56 ಸಾವಿರ ತಲುಪಿದ ರಾಶಿ ಕೆಂಪಡಕೆ: ಅಡಕೆ ವಲಯದಲ್ಲಿ ಆತಂಕ ಮಿಶ್ರಿತ ಸಂತೋಷ

By Kannadaprabha News  |  First Published Jul 10, 2023, 12:59 PM IST

ಶಿವಮೊಗ್ಗ ಮಾರುಕಟ್ಟೆ ಕೇಂದ್ರವಾಗಿರುವ ಕೆಂಪಡಿಕೆ ಧಾರಣೆ ಇದೀಗ ನಾಗಾಲೋಟದತ್ತ ದಾಂಗುಡಿಯಿಟ್ಟಿದೆ. ಕೆಂಪಡಕೆಯ ಪ್ರಮುಖ ಮಾದರಿಗಳಲ್ಲಿ ಒಂದಾದ ರಾಶಿ ಇಡಿ ಅಡಕೆ ಧಾರಣೆ ಸಧ್ಯ ಪ್ರತಿ ಕ್ವಿಂಟಲ್‌ಗೆ 56 ಸಾವಿರ ರು. ದಾಟಿದ್ದು, ಅಡಕೆ ವಲಯದಲ್ಲಿ ಆತಂಕ ಮಿಶ್ರಿತ ಸಂತೋಷ ಕಾಣಿಸಿದೆ. 


ಗೋಪಾಲ್‌ ಯಡಗೆರೆ

ಶಿವಮೊಗ್ಗ (ಜು.10): ಶಿವಮೊಗ್ಗ ಮಾರುಕಟ್ಟೆ ಕೇಂದ್ರವಾಗಿರುವ ಕೆಂಪಡಿಕೆ ಧಾರಣೆ ಇದೀಗ ನಾಗಾಲೋಟದತ್ತ ದಾಂಗುಡಿಯಿಟ್ಟಿದೆ. ಕೆಂಪಡಕೆಯ ಪ್ರಮುಖ ಮಾದರಿಗಳಲ್ಲಿ ಒಂದಾದ ರಾಶಿ ಇಡಿ ಅಡಕೆ ಧಾರಣೆ ಸಧ್ಯ ಪ್ರತಿ ಕ್ವಿಂಟಲ್‌ಗೆ 56 ಸಾವಿರ ರು. ದಾಟಿದ್ದು, ಅಡಕೆ ವಲಯದಲ್ಲಿ ಆತಂಕ ಮಿಶ್ರಿತ ಸಂತೋಷ ಕಾಣಿಸಿದೆ. ಪ್ರತಿ ಬಾರಿ ಅಡಕೆಯ ಧಾರಣೆಯ ಒಮ್ಮುಖ ಏರಿಕೆಯ ಸಂದರ್ಭದಲ್ಲಿ ಇದೇ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಕಾರಣ ಈ ಧಾರಣೆ ಹೆಚ್ಚಳದಿಂದ ಭವಿಷ್ಯದಲ್ಲಿ ಏನೇನು ಸಮಸ್ಯೆಗಳು ಎದುರಾಗುತ್ತದೆಯೋ ಎಂಬ ಆತಂಕ! 

Tap to resize

Latest Videos

ವಾರಾಂತ್ಯದಲ್ಲಿ ಶಿವಮೊಗ್ಗ ಮಾರುಕಟ್ಟೆಯಲ್ಲಿ ದಾಖಲಾದ ಧಾರಣೆಯಲ್ಲಿ ರಾಶಿ ಇಡಿ ಅಡಕೆಗೆ ಪ್ರತಿ ಕ್ವಿಂಟಲ್‌ಗೆ 39201-56299 ದರ ದಾಖಲಾಗಿದೆ. ಕಳೆದ ವರ್ಷ ಒಂದು ಸಂದರ್ಭದಲ್ಲಿ ರಾಶಿಇಡಿ ಅಡಕೆ ಧಾರಣೆ ಪ್ರತಿ ಕ್ವಿಂಟಲ್‌ಗೆ ಸುಮಾರು 64 ಸಾವಿರ ತಲುಪಿದ್ದು ಮತ್ತು ದಶಕದ ಹಿಂದೆ ಪ್ರತಿ ಕ್ವಿಂಟಲ್‌ಗೆ 80 ಸಾವಿರ ದಾಟಿದ್ದು ದಾಖಲೆಯಾಗಿತ್ತು. ಇದನ್ನು ಹೊರತುಪಡಿಸಿ ಅಡಕೆ ಇತಿಹಾಸದಲ್ಲಿ ಮೂರನೇ ಬಾರಿಗೆ ಅಡಕೆ ಏರಿಕೆ ಹಾದಿಯಲ್ಲಿ ಸಾಗುತ್ತಿದೆ. ಆದರೆ, ಇದು ಎಲ್ಲಿಯವರೆಗೆ ಹೋಗುತ್ತದೆ ಎಂಬುದು ಯಾವ ಅಡಕೆ ಮಾರುಕಟ್ಟೆತಜ್ಞರಿಗೂ ಅರ್ಥವಾಗುತ್ತಿಲ್ಲ. 

ರಾಜ್ಯದಲ್ಲಿ ಡ್ರಗ್ಸ್‌ ಮಾಫಿಯಾ ನಿರ್ಮೂಲನೆಗೆ ನಿರ್ಧಾರ: ಸಚಿವ ಪರಮೇಶ್ವರ್‌

ಈ ಬಾರಿಯಲ್ಲ, ಅಡಕೆ ಧಾರಣೆಯನ್ನು ಊಹಿಸುವುದು ಪ್ರತಿ ಸಲವೂ ಕಷ್ಟದ ಕೆಲಸವೇ ಆಗಿದ್ದು, ಇದುವರೆಗೆ ಈ ರೀತಿಯ ಧಾರಣೆಯನ್ನು ಊಹಿಸುವ ಯತ್ನ ಯಶ ಕಂಡ ದಾಖಲೆಯಿಲ್ಲ. 2023ರ ಜನವರಿಯಿಂದ ಏಪ್ರಿಲ್‌ವರೆಗೆ ಬಹುತೇಕ ಸ್ಥಿರವಾಗಿದ್ದ ಧಾರಣೆ ಮೇ ಬಳಿಕ ಏರಿಕೆಯ ಹಾದಿಯಲ್ಲಿ ನಡೆಯಿತು. ಜೂನ್‌ ಮೊದಲ ವಾರ 50 ಸಾವಿರ ತಲುಪಿದ ಧಾರಣೆ ಬಳಿಕ ಇನ್ನಷ್ಟುಏರಿತು. ಜೂನ್‌ 20ರ ಹೊತ್ತಿಗೆ .53 ಸಾವಿರ ಮತ್ತು ಜೂನ್‌ ಕೊನೆಯ ವಾರಕ್ಕೆ 55 ಸಾವಿರ ತಲುಪಿದ್ದು, ಜುಲೈ ಮೊದಲ ವಾರದ ಕೊನೆಗೆ 56 ಸಾವಿರ ದಾಟಿತು.

ಸಾಮಾನ್ಯ ರೈತರಿಗೆ ಸಿಕ್ಕಿಲ್ಲ ಏರಿಕೆಯ ಲಾಭ: ಈ ಬಾರಿಯ ಅಡಕೆ ಧಾರಣೆಯ ಏರಿಕೆ ಬಹುತೇಕ ರೈತರಿಗೆ ಸಿಕ್ಕಿಲ್ಲ. ಬಹಳಷ್ಟುರೈತರು ಮಾಚ್‌ರ್‍ ತಿಂಗಳಲ್ಲಿ ತಮ್ಮ ಅಡಕೆಯನ್ನು ಮಾರಾಟ ಮಾಡುತ್ತಾರೆ. ಉಳಿದವರು .50 ಸಾವಿರ ತಲುಪಿದ ತಕ್ಷಣ ಮಾರಾಟಕ್ಕೆ ಮುಂದಾದದರು. ಹೀಗಾಗಿ .56 ಸಾವಿರ ಧಾರಣೆಯ ದರ ಕೆಲವರಿಗಷ್ಟೇ ಸಿಗಲು ಸಾಧ್ಯ. ಇದೀಗ ಈ ಏರಿಕೆ .60 ಸಾವಿರ ದಾಟುವ ನಿರೀಕ್ಷೆ ಇದೆಯಾದರೂ ಮಾರುಕಟ್ಟೆಏನಾದೀತು ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಆದರೆ, ಈ ಧಾರಣೆಯ ಏರಿಕೆ ಅಡಕೆ ಕೃಷಿ ಉತ್ಪಾದನಾ ವೆಚ್ಚದ ಮೇಲೆ ಮಾತ್ರ ಖಂಡಿತ ಪರಿಣಾಮ ಬೀರುತ್ತದೆ ಎಂದು ರೈತರು ಹೇಳುತ್ತಾರೆ. ಕೂಲಿಯಿಂದ ಹಿಡಿದು ಕೃಷಿ ಪರಿಕರಗಳ ದರವೂ ಏರಿಕೆ ಹಾದಿಯಲ್ಲಿ ಸಾಗುತ್ತಿದೆ. ಆದರೆ ಅಡಕೆ ದರ ಇಳಿದರೂ ಈ ವೆಚ್ಚದಲ್ಲಿ ಇಳಿಕೆ ಕಾಣುವುದಿಲ್ಲ ಎನ್ನುತ್ತಾರೆ.

ಬೆಟ್ಟೆ ಅಡ​ಕೆಯನ್ನು ಮೀರಿಸಿ 2ನೇ ಸ್ಥಾನಕ್ಕೆ: ಆದರೆ ಸರಕು ಮಾದರಿಯ ಅಡಕೆ ಇದಕ್ಕೆ ಪೂರಕವಾಗಿ ಏರಿಕೆ ಕಂಡಿಲ್ಲ. ಇದೇ ರೀತಿ ಎರಡನೇ ಉತ್ತಮ ಅಡಕೆ ಎಂದು ಗುರುತಿಸಿಕೊಳ್ಳುವ ಬೆಟ್ಟೆಮಾದರಿಯ ಅಡಕೆ ಕೂಡ ಏರಿಕೆ ಕಂಡಿಲ್ಲ. ಇದೇ ಮೊದಲ ಬಾರಿಗೆ ರಾಶಿ ಇಡಿ ಮಾದರಿಯ ಅಡಕೆ ಎರಡನೇ ಉತ್ತಮ ಮಾದರಿ ಎಂದು ಗುರುತಿಸಿಕೊಳ್ಳುವ ಬೆಟ್ಟೆಮಾದರಿಯ ಅಡಕೆಯ ಬೆಲೆಯನ್ನು ಮೀರಿ ಮುಂದಡಿಯಿಟ್ಟಿದೆ. ಕೆಂಪಡಕೆಯಲ್ಲಿ ಶೇ.75ರಷ್ಟು ರಾಶಿಇಡಿ ಅಡಕೆಯ ಉತ್ಪಾದನೆಯೇ ಇದೆ. ಸರಕು ಮತ್ತು ಗೊರಬಲು ಸರಿ ಸುಮಾರು ಶೇ.5 ಮತ್ತು ಬೆಟ್ಟೆಮಾದರಿಯ ಅಡಕೆ ಶೇ.15 ರಷ್ಟು ಉತ್ಪಾದನೆ ಆಗುತ್ತಿದೆ. ಹೀಗಾಗಿ, ರಾಶಿಇಡಿ ಮಾದರಿಯ ಅಡಕೆ ಧಾರಣೆಯನ್ನು ಮಾರುಕಟ್ಟೆಯ ಏರಿಳಿತದ ಅಳತೆಗೋಲನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ಇದರ ಬೆಲೆಯ ಮೇಲೆಯೇ ಅರ್ಥಿಕ ಹರಿವು ಕಾಣುತ್ತದೆ.

ಜೈನಮುನಿ ಹತ್ಯೆ ಕೇಸ್‌ನಲ್ಲಿ ರಾಜಕಾರಣ ಬೆರೆಸುವ ಪ್ರಯತ್ನ ಬೇಡ: ಶಾಸಕ ಲಕ್ಷ್ಮಣ ಸವದಿ

ತಜ್ಞ​ರ ಲೆಕ್ಕಾ​ಚಾ​ರಕ್ಕೂ ನಿಲು​ಕಿ​ಲ್ಲ?: ಈ ಬಗ್ಗೆ ಅಡಕೆ ಉದ್ಯಮ ವಲಯವು ಏನನ್ನೂ ಸ್ಪಷ್ಟವಾಗಿ ಹೇಳುವುದಿಲ್ಲ. 2 ಸಾವಿರ ನೋಟುಗಳ ಹಿಂಪಡೆಯುವ ಪ್ರಕ್ರಿಯೆಯೂ ಈ ಧಾರಣೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಜೊತೆಗೆ ವಿದೇಶದ ಅಡಕೆ ಆಮದು ತೆರಿಗೆ ಹೆಚ್ಚಳ ಮಾಡಿರುವುದು, ಅಡಕೆ ಉತ್ಪಾದನೆಯಲ್ಲಿನ ಕೊರತೆ, ಎಲೆಚುಕ್ಕಿ ರೋಗದಿಂದ ಮುಂದಿನ ವರ್ಷ ಅಡಕೆ ಫಸಲು ಕಡಿಮೆಯಾಗುವ ಸಾಧ್ಯತೆಯ ದಟ್ಟವದಂತಿ ಸೇರಿ ಹಲವು ಕಾರಣ ಎಂದು ಹೇಳಲಾಗುತ್ತಿದೆಯಾದರೂ, ಯಾವುದನ್ನೂ ತಜ್ಞರು ಹೀಗೆಯೇ ಎಂದು ನಿಖ​ರ​ವಾಗಿ ಗುರುತಿಸಿಲ್ಲ.

click me!