ಆಟೋದಲ್ಲಿ ತೆರಳುವ ವೇಳೆ ಮಹಿಳೆಯೊಬ್ಬರು ಮರೆತು ಹೋಗಿದ್ದ ಚಿನ್ನಾಭರಣ ಮತ್ತು ಹಣವಿದ್ದ ಬ್ಯಾಗನ್ನು ಪತ್ತೆ ಹಚ್ಚಿ ಮರಳಿ ಕೊಡಿಸುವಲ್ಲಿ ಬಳ್ಳಾರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಳ್ಳಾರಿ (ಜು.10): ಆಟೋದಲ್ಲಿ ತೆರಳುವ ವೇಳೆ ಮಹಿಳೆಯೊಬ್ಬರು ಮರೆತು ಹೋಗಿದ್ದ ಚಿನ್ನಾಭರಣ ಮತ್ತು ಹಣವಿದ್ದ ಬ್ಯಾಗನ್ನು ಪತ್ತೆ ಹಚ್ಚಿ ಮರಳಿ ಕೊಡಿಸುವಲ್ಲಿ ಬಳ್ಳಾರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಂಬಂಧಿಕರ ಮದುವೆಗೆ ಬಳ್ಳಾರಿಗೆ ಬಂದಿದ್ದ ಚೆನ್ನೈ ಮೂಲದ ಅಖಿಲಾ ಎನ್ನುವ ಮಹಿಳೆ ಚಿನ್ನಾಭರಣ ಹಾಗೂ ಹಣವಿ ಬ್ಯಾಗನ್ನು ಜುಲೈ 8 ರಂದು ಆಟೋ ರಿಕ್ಷಾದಲ್ಲಿ ಬಿಟ್ಟು ಹೋಗಿದ್ದರು. ತಾವು ಉಳಿದುಕೊಂಡಿದ್ದ ಲಾಡ್ಜ್ ನಿಂದ ಕೆ.ಆರ್.ಎಸ್ - ಫಂಕ್ಷನ್ ಜುಲೈ 8 ರಂದು ಸಂಜೆ 7ಕ್ಕೆ ಆಟೊದಲ್ಲಿ ತೆರಳಿದ್ದಾರೆ. ಈ ವೇಳೆ 200ಗ್ರಾಂ ತೂಕದ ಬಂಗಾರದ ಆಭರಣಗಳು, ಬೆಳ್ಳಿ, ವಸ್ತುಗಳು ಮತ್ತು 15,000 ನಗದಿದ್ದ ಬ್ಯಾಗ್‌ನ್ನು ಮರೆತು ಹೋಗಿದ್ದರು. ಈ ಬ್ಯಾಗ್ ಪತ್ತೆ ಹಚ್ಚಿ ಕೊಡುವಂತೆ ಬ್ರೂಸ್‌ಪೇಟೆ ಪೊಲೀಸ್ ಠಾಣೆ ದೂರು ನೀಡಿದ್ದರು.
ಕೂಡಲೇ ಅಲರ್ಟ್ ಆದ ಪೊಲೀಸರು: ದೂರು ನೀಡುತ್ತಿದ್ದಂತೆಯೇ ಕೂಡಲೇ ಆಲಾರ್ಟ್ ಆದ ಪೊಲೀಸರು ಆಟೋ ಪತ್ತೆ ಹಚ್ಚುವಲ್ಲಿ ಯಶಸ್ಸಿಯಾಗಿದ್ದಾರೆ. ಇನ್‌ಸ್ಪೆಕ್ಟರ್, ಎಂ.ಎನ್. ಸಿಂಧೂರ ನೇತೃತ್ವದ ತಂಡ, ಜಿಲ್ಲಾ ಕಂಟ್ರೋಲ್ ರೂಂನ ಸಿಸಿ ಕ್ಯಾಮೆರಾಗಳ ಸಹಾಯದಿಂದ ಆಟೋ ಪತ್ತೆ ಹಚ್ಚಿದ್ದಾರೆ. ಬಳ್ಳಾರಿ ತಾಲ್ಲೂಕಿನ ಗೋಟೂರು ಗ್ರಾಮದ ಮಲ್ಲಿಕಾರ್ಜುನ ಸೇರಿದ ಆಟೋ ಸೇರಿದ್ದು ಎಂದು ಪತ್ತೆ ಹಚ್ಚಿದ್ದು, ಚಾಲಕನಿಂದ ಚಿನ್ನಾಭರಣ ಹಾಗೂ ನಗದ ಹಣ ವಶಪಡಿಸಿಕೊಂಡು ಅಖಿಲಾ ಅವರಿಗೆ ನೀಡಿದ್ದಾರೆ.
undefined
ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ನಿರ್ಮೂಲನೆಗೆ ನಿರ್ಧಾರ: ಸಚಿವ ಪರಮೇಶ್ವರ್
ಆನ್‌ಲೈನ್ ಬೆಟ್ಟಿಂಗ್ ಚಟಕ್ಕಾಗಿ ತನ್ನ ಮನೆಯಲ್ಲೇ ಚಿನ್ನ ಕದ್ದ!: ಆನ್‌ಲೈನ್ ಬೆಟ್ಟಿಂಗ್ ಹುಚ್ಚಿಗೆ ತನ್ನ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿ ಸಿದ್ದಾಪುರ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದ ಯುವಕನೊಬ್ಬ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರುವಂತಾಗಿದೆ. ಜಯನಗರ 1ನೇ ಹಂತದ ಪ್ರಜಾನ್ ಬಂಧಿತನಾಗಿದ್ದು, ಆರೋಪಿಯಿಂದ 78.3 ಗ್ರಾಂ ಚಿನ್ನ, 288 ಗ್ರಾಂ ಬೆಳ್ಳಿ ಹಾಗೂ ವಾಚ್ ಸೇರಿದಂತೆ .4.6 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಸಿದ್ದಾಪುರ ಪೊಲೀಸರಿಗೆ ಆತನ ಸೋದರ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಶಂಕೆ ಮೇರೆಗೆ ಪ್ರಜಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಸ್ತಿ ವಿವರ ಸಲ್ಲಿಸದ ಗ್ರಾ.ಪಂ ಸದಸ್ಯರನ್ನು ವಜಾಗೊಳಿಸಲು ಶೋಕಾಸ್ ನೋಟಿಸ್ ಅಗತ್ಯವಿಲ್ಲ: ಹೈಕೋರ್ಟ್
ಜಯನಗರದ 1ನೇ ಹಂತದಲ್ಲಿ ತನ್ನ ಪೋಷಕರ ಜತೆ ನೆಲೆಸಿದ್ದ ಪ್ರಜಾನ್, ಔಷಧ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ. ಆನ್‌ಲೈನ್ ಬೆಟ್ಟಿಂಗ್ ಹುಚ್ಚಿಗೆ ಬಿದ್ದು ಆತ ಹಣ ಕಳೆದುಕೊಂಡಿದ್ದ. ಇದಕ್ಕಾಗಿ ತನ್ನ ಮನೆಯಲ್ಲಿ ಆತ ಕಳವು ಮಾಡಿದ್ದ. ಮನೆಗಳ್ಳತನ ಕೃತ್ಯದ ಬಗ್ಗೆ ದೂರಿನ ಮೇರೆಗೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಯಿತು. ಆ ವೇಳೆ ಮನೆಯಲ್ಲೇ ಇದ್ದ ಪ್ರಜಾನ್ ಮೇಲೆ ಶಂಕೆ ಮೂಡಿತು. ಬಳಿಕ ಮನೆಯಲ್ಲಿ ಚಿನ್ನ ದೋಚಿದ್ದ ಬಾಕ್ಸ್ ಮೇಲಿದ್ದ ಬೆರಳ ಮುದ್ರೆಗೂ ಪ್ರಜಾನ್ ಬೆರಳಚ್ಚಿಗೂ ಹೋಲಿಕೆಯಾಯಿತು. ಈ ಸುಳಿವಿನ ಮೇರೆಗೆ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.