ಜೈನ ಮುನಿಗಳ ಹತ್ಯೆ ಹಿಂದೆ ಉಗ್ರರ ಕೈವಾಡ ಎಂದ ಶಾಸಕ ಸವದಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

By Gowthami K  |  First Published Jul 10, 2023, 12:21 PM IST

ಚಿಕ್ಕೋಡಿ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸಿದ್ದು ಸವದಿ ಅವರು ಜೈನ ಮುನಿ ಹತ್ಯೆಯಲ್ಲಿ ಐಸಿಸ್ ಪಿತೂರಿ ಇದೆ ಅಂತ ಹೇಳಿಕೆ ನೀಡಿದ್ದಾರೆ.


ಬೆಂಗಳೂರು (ಜು.10): ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಹಿರೆಕೋಡಿ ಗ್ರಾಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸಿದ್ದು ಸವದಿ ಅವರು ಜೈನ ಮುನಿಗಳನ್ನ ಟಾರ್ಗೆಟ್ ಮಾಡಿದ್ದಾರೆ ಅಂದ್ರೆ ಇದರಲ್ಲಿ ಐಸಿಸ್ ಪಿತೂರಿ ಇದೆ ಅಂತ ಅನ್ನಿಸ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಸ್ವಾಮೀಜಿಯನ್ನು ಇಷ್ಟೊಂದು ಉಗ್ರವಾಗಿ ಹತ್ಯೆ ಮಾಡಿದ್ದಾರೆ ಅವರನ್ನ ಕರೆಂಟ್ ಶಾಕ್ ಕೊಟ್ಟು ತುಂಡು ತುಂಡಾಗಿ ಮಾಡಿ ಬೋರ್ ವೆಲ್ ಗೆ ಹಾಕಿದ್ದಾರೆ. ಇದರಿಂದ ಜೈನ ಮುನಿಗಳೆಲ್ಲರಿಗೂ ಆತಂಕ ಶುರುವಾಗಿದೆ. ಈ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ ಸಿಬಿಐ ತನಿಖೆಯಾಗಬೇಕು. ಬಡ್ಡಿ ವ್ಯವಹಾರ ಇರಲಿಲ್ಲ ಅವರು ಟ್ರಸ್ಟ್ ಓಪನ್ ಮಾಡಿ ಕಾಲೇಜು ಆಸ್ಪತ್ರೆ ನಿರ್ಮಾಣ ಮಾಡಬೇಕೆಂದಿದ್ದರು. ಇದಕ್ಕೆ ಹಲವರ ಬಳಿ ಹಣ ಕೇಳಿದ್ದಾರೆ. ನಮ್ಮ ಆಗ್ರಹ ಇಷ್ಟೆ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಬೇಕು ಎಂದಿದ್ದಾರೆ.

ಜೈನ ಮುನಿ ಬಡ್ಡಿ ವ್ಯವಹಾರ ಮಾಡ್ತಿದ್ರು ಅಂತಾರೆ, ಅವರ ಬಳಿ 41 ಎಕರೆ ಜಮೀನಿದೆ : ಅಭಯ್

Latest Videos

undefined

ಸವದಿ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಉತ್ತರ:  ಇನ್ನು ಜೈನ ಮುನಿ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರಿಗೆ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಬಿಜೆಪಿ ನಾಯಕರಿಗೆ ಎಲ್ಲರಿಗೂ ಮನವಿ ಮಾಡ್ತೇನೆ. ದಯವಿಟ್ಟು ಮುನಿ ಹತ್ಯೆ ಬಗ್ಗೆ ತಮ್ಮ ಬಳಿ ಮಾಹಿತಿ ಇದ್ರೆ ಗೃಹ ಇಲಾಖೆಗೆ ತಂದು ದಾಖಲೆ ಸಲ್ಲಿಸಿ. ಮಾಧ್ಯಮಗಳ ಮುಂದೆ ಬಂದು ಅವರ ಇವರ ನಂಟಿದೆ ಅಂತ ಹೇಳೋದು ಬೇಡ. ಸಿದ್ದು ಸವದಿ ಐಸಿಸ್ ಕೈವಾಡ ಇದೆ ಅಂತ ಹೇಳ್ತಾರೆ. ದಯವಿಟ್ಟು ನಿಮ್ಮತ್ರ ದಾಖಲೆ ಇದ್ರೆ ಸಂಬಂಧ ಪಟ್ಟ ಇಲಾಖೆಗೆ ಕೊಡಿ. ತನಿಖೆ ಮಾಡುತ್ತಾರೆ ಅದನ್ನು ಬಿಟ್ಟು ಬಾಯಿಗೆ ಬಂದಂತೆ ಹೇಳಬಾರದು. ಸರ್ಕಾರ ಏನನ್ನ ಮುಚ್ಚಿಡುತ್ತಿದೆ ಅನ್ನೋದನ್ನು ಸ್ಪಷ್ಟವಾಗಿ ಹೇಳಬೇಕು ಎಂದಿದ್ದಾರೆ.

ಜೈನಮುನಿ ಹತ್ಯೆ ಕೇಸ್‌ನಲ್ಲಿ ರಾಜಕಾರಣ ಬೆರೆಸುವ ಪ್ರಯತ್ನ ಬೇಡ: ಶಾಸಕ ಲಕ್ಷ್ಮಣ ಸವದಿ

ತನಿಖಾ ಸಂದರ್ಭದಲ್ಲಿ ಎಲ್ಲವನ್ನೂ ಹೇಳಲು ಆಗುವುದಿಲ್ಲ. ತನಿಖಾ ಹಂತದಲ್ಲಿ ಎಷ್ಟು ಹೇಳಬೇಕೊ ಅಷ್ಟು ಹೇಳ್ತಾರೆ. ಚಾರ್ಜ್ ಶೀಟ್ ಆಗೊವರೆಗೂ ತಾಳ್ಮೆ ಇರಬೇಕು ಆಮೇಲೆ ಎಲ್ಲರಿಗೂ ಮಾಹಿತಿ ಸಿಗತ್ತೆ ಅಲ್ವಾ. ಇದು ಪ್ರಾಥಮಿಕ ತನಿಖಾ ಹಂತದಲ್ಲಿ ವೈಯಕ್ತಿಕ ಅಂತ ಕಾಣುತ್ತಿದೆ. ಬಿಜೆಪಿಯವುರು ಇದರಲ್ಲಿ ರಾಜಕೀಯ ಮಾಡ್ತಿದ್ದಾರೆ. ವಿರೋಧ ಪಕ್ಷದ ನಾಯಕರಿಲ್ಲದೇ ಸದನ  ನಡೆಯುತ್ತಿರುವುದು ಕೇಂದ್ರ ನಾಯಕರು ಮಾಡ್ತಾಯಿರುವಂತ ಅವಮಾನ. ಸದನಕ್ಕೆ ಒಂದು ಗೌರವಿದೆ ಅದಕ್ಕೆ ಕಪ್ಪು ಚುಕ್ಕಿ ಇಟ್ಟಿದ್ದಾರೆ. ಬಜೆಟ್ ಬಗ್ಗೆ ತೀವ್ರ ಚರ್ಚೆಯಾಗಬೇಕಿದೆ. ಐದು ಗ್ಯಾರಂಟಿ ಯಲ್ಲಿ ಮೂರು ಜಾರಿಗೆ ತಂದಿದ್ದೇವೆ. ರಾಜ್ಯದಲ್ಲಿ ಹಲವು ತೊಂದರೆಗಳಿವೆ ಇದರ ಬಗ್ಗೆ ಚರ್ಚೆ ಮಾಡಲು ವಿರೋಧ ಪಕ್ಷದ ನಾಯಕರೇ ಇಲ್ಲ. ಮೊದಲು ವಿರೋಧ ಪಕ್ಷದ ನಾಯಕರನ್ನು ನೇಮಕ ಮಾಡಲಿ ಎಂದಿದ್ದಾರೆ.

 

click me!