
ಕಲಬುರಗಿ(ನ.11): ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಸೆರೆ ಸಿಕ್ಕ ಕೆಇಎ ಪರೀಕ್ಷಾ ಅಕ್ರಮದ ಕಿಂಗ್‌ಪಿನ್ ಆರ್.ಡಿ.ಪಾಟೀಲ್‌ನನ್ನು ಕಲಬುರಗಿಯ ಅಶೋಕ ನಗರ ಠಾಣೆಯಲ್ಲಿ ಇರಿಸಲಾಗಿದ್ದು, ಶುಕ್ರವಾರ ಇಡೀ ರಾತ್ರಿ ಆತ ಲಾಕಪ್‌ನಲ್ಲೇ ಕಳೆದ.
ಲಾಕಪ್‌ನಲ್ಲಿ ಚಾಪೆ ಇದ್ದರೂ ಸಹ ಈತ ಫರಸಿ ಮೇಲೆಯೇ ಮಲಗಿದ್ದ. ಇಡೀ ರಾತ್ರಿ ಲಾಕಪ್‌ನಲ್ಲಿ ಇದ್ದ. ಅಲ್ಲೇ ಮಾತ್ರೆಗಳನ್ನು ಸೇವಿಸಿದ. ಅಲ್ಲದೆ, ಆತನಲ್ಲಿ ಚಿಂತೆ, ಆತಂಕದ ಮುಖಭಾವ ಇತ್ತು ಎಂದು ಮೂಲಗಳು ಹೇಳಿವೆ.
ಲಾಕಪ್ ಒಳಗೆ ಪ್ರವೇಶ ಮಾಡುತ್ತಿದ್ದಂತಯೇ ಆರ್.ಡಿ,ಪಾಟೀಲ್, ತನಗೆ ಎದೆ ನೋವು, ತಲೆ ನೋವು, ಮೈಕೈ ನೋವು ಎಂದು ದೂರಿದ. ಅಲ್ಲದೆ, ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಲು ಆಗ್ರಹಿಸಿದ. ಆದರೆ, ಪೊಲೀಸರು ಈತನ ಯಾವುದೇ ನೆಪಗಳಿಗೆ ಸೊಪ್ಪು ಹಾಕದೆ ತಕ್ಷಣ ವೈದ್ಯರೊಬ್ಬರನ್ನು ಇಲ್ಲಿಗೆ ಕರೆಸಿ, ಆತನ ಆರೋಗ್ಯ ಸಂಬಂಧಿ ದೂರುಗಳಿಗೆಲ್ಲ ಅಲ್ಲೇ ಚಿಕಿತ್ಸೆ ಕೊಡಿಸಿದ್ದಾರೆ.
ಕೆಇಎ ಪರೀಕ್ಷೆ ಅಕ್ರಮ: ಪೊಲೀಸ್ ಠಾಣೆಯಲ್ಲಿ ಆರ್‌ಡಿ ಪಾಟೀಲ್ ಸ್ಥಿತಿ ಕಂಡು ಪತ್ನಿ ಕಣ್ಣೀರು!
ಆತನ ಆರೋಗ್ಯದ ಬಗ್ಗೆ ಸಂಪೂರ್ಣವಾಗಿ ವೈದ್ಯರ ಸಲಹೆ ಪಡೆದಿರುವ ಪೊಲೀಸರು, ವೈದ್ಯರ ಸಲಹೆಯನ್ನು ಪಾಲಿಸುತ್ತಿದ್ದಾರೆ ಎಂದು ಗೊತ್ತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ