ಪಿಎಸೈ ಅಕ್ರಮದಲ್ಲಾದಂತೆ ಇಲ್ಲಿಯೂ ಕೂಡ ಪ್ರತಿ ಹುದ್ದೆಗೆ 8ರಿಂದ 22 ಲಕ್ಷ ರು.ವರೆಗೆ ನಿಗದಿ ಮಾಡಲಾಗಿತ್ತು. ಎಫ್‌ಡಿಎ ಹುದ್ದೆಗೆ 22 ಲಕ್ಷ ರು.ಗಳಾದರೆ, ಎಸ್‌ಡಿಎ ಹುದ್ದೆಗೆ 8 ಲಕ್ಷ ರು.ನೀಡಿದರೆ ಅಕ್ರಮದಿಂದ ಆಯ್ಕೆಯಾಗಲು ಅನುಕೂಲ ಮಾಡಿಕೊಡುವ ಸಂಚು ನಡೆದಿತ್ತು ಎಂದು ಬಂಧಿತರು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಆನಂದ್.ಎಂ . ಸೌದಿ
ಯಾದಗಿರಿ(ನ.11): ಸರ್ಕಾರದ ವಿವಿಧ ನಿಗಮ-ಮಂಡಳಿಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಳೆದ ತಿಂಗಳು ಅ.28 ಹಾಗೂ ಅ.29 ರಂದು ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ನಡೆಸಿದ್ದು ಪತ್ತೆಯಾದ ಬೆನ್ನಲ್ಲೇ, ಈ ಅಕ್ರಮದಲ್ಲಿ 25 ಕೋಟಿ ರು.ಅವ್ಯವಹಾರವಾಗಿರುವ ಮಾಹಿತಿ ಪೊಲೀಸರಿಗೆ ತನಿಖೆ ವೇಳೆ ತಿಳಿದು ಬಂದಿದೆ ಎನ್ನಲಾಗಿದೆ.
undefined
ಪಿಎಸೈ ಅಕ್ರಮದಲ್ಲಾದಂತೆ ಇಲ್ಲಿಯೂ ಕೂಡ ಪ್ರತಿ ಹುದ್ದೆಗೆ 8ರಿಂದ 22 ಲಕ್ಷ ರು.ವರೆಗೆ ನಿಗದಿ ಮಾಡಲಾಗಿತ್ತು. ಎಫ್‌ಡಿಎ ಹುದ್ದೆಗೆ 22 ಲಕ್ಷ ರು.ಗಳಾದರೆ, ಎಸ್‌ಡಿಎ ಹುದ್ದೆಗೆ 8 ಲಕ್ಷ ರು.ನೀಡಿದರೆ ಅಕ್ರಮದಿಂದ ಆಯ್ಕೆಯಾಗಲು ಅನುಕೂಲ ಮಾಡಿಕೊಡುವ ಸಂಚು ನಡೆದಿತ್ತು ಎಂದು ಬಂಧಿತರು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
KEA ಪರೀಕ್ಷೆ ಅಕ್ರಮ: ಕೊನೆಗೂ ಸಿಐಡಿ ತನಿಖೆಗೆ ಆದೇಶಿಸಿದ ಗೃಹ ಇಲಾಖೆ
ಪಿಎಸೈ ಅಕ್ರಮ ಹಾಗೂ ನಂತರದ ಕ್ರಮಗಳಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇನ್ಮುಂದೆ ಇಂತಹ ಕಳ್ಳಾಟ ನಡೆಯಲಿಕ್ಕಿಲ್ಲ ಎಂದು ಭಾವಿಸಲಾಗಿತ್ತು. ಆದರೆ, ಕೆಇಎ ಪರೀಕ್ಷೆ ವೇಳೆ ಮೂರ್ನಾಲ್ಕು ತಿಂಗಳ ಮೊದಲೇ ಯಾದಗಿರಿ, ಕಲಬುರಗಿ, ವಿಜಯಪುರ, ಹುಬ್ಬಳ್ಳಿ ಸೇರಿ ರಾಜ್ಯದ ವಿವಿಧೆಡೆಯಿಂದ ಸುಮಾರು 300ಕ್ಕೂ ಹೆಚ್ಚು ಅಭ್ಯರ್ಥಿಗಳು ಅಡ್ವಾನ್ಸ್ ಬುಕ್ಕಿಂಗ್ ಮಾಡಿದ್ದರು. ಇದಕ್ಕಾಗಿ 20 ರಿಂದ 25 ಕೋಟಿ ರು.ಅವ್ಯವಹಾರದ ಸಂಚು ನಡೆಸಲಾಗಿತ್ತು. ಸುಮಾರು 12 ಜನರ ತಂಡ ತಲಾ 20 ಜನ ಅಭ್ಯರ್ಥಿಗಳ ಆಯ್ಕೆ ಮಾಡಿಕೊಂಡು ಈ ಬಗ್ಗೆ ರೂಪುರೇಷೆ ಸಿದ್ಧಪಡಿಸಿತ್ತು ಎನ್ನುವ ಮಾಹಿತಿಯನ್ನು ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆಂದು ವಿಶ್ವಾಸಾರ್ಹ ಪೊಲೀಸ್ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಗೈರಾದವರ ಮೇಲೆ ಖಾಕಿ ಕಣ್ಣು!
ಎಫ್‌ಡಿಎ ಪರೀಕ್ಷೆ ವೇಳೆ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆದರೂ, ಬೆಳಗ್ಗೆ ಪರೀಕ್ಷೆಯಲ್ಲಿ ಅಕ್ರಮ ಪತ್ತೆಯಾಗಿ, ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ, ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಬಳಸಲಾಗುತ್ತಿದ್ದ ಬ್ಲೂಟೂತ್ ಡಿವೈಸ್‌ಗಳನ್ನು ಹೊರಗಡೆ ಬಿಸಾಡಿದ್ದು ಕಂಡು ಬಂದಿತ್ತು. ಈ ಮಧ್ಯೆ, ಬೆಳಗ್ಗೆ ಪರೀಕ್ಷೆಗೆ ಬಂದ ಕೆಲವರು ಮಧ್ಯಾಹ್ನ ಹಾಗೂ ಮರುದಿನ ಬಂದಿರಲಿಲ್ಲ. ಹೀಗಾಗಿ, ಗೈರಾದ ಶಂಕಿತರ ಮಾಹಿತಿ ಕಲೆ ಹಾಕಲಾಗುತ್ತಿದೆ. ನಂತರ ನಡೆದ ಕೆಪಿಎಸ್ಸಿಯ ಗ್ರೂಪ್ ‘ಸಿ’ ಪರೀಕ್ಷೆಯಲ್ಲಿಯೂ ಪರೀಕ್ಷೆಗೆ ಗೈರಾದ ಕೆಲವರ ಮೇಲೆ ಅನುಮಾನಗಳು ಮೂಡಿವೆ. ಎರಡೂ ಪರೀಕ್ಷೆಗಳಲ್ಲಿ ಅಕ್ರಮ ಪ್ರಯತ್ನ ನಡೆದಿತ್ತೇ ಎನ್ನುವ ಶಂಕೆ ಪೊಲೀಸರಿಗೆ ಮೂಡಿದ್ದು, ಈ ಬಗ್ಗೆ ತನಿಖೆಗಿಳಿದಿದ್ದಾರೆ.