Rameshwaram Cafe Blast Case Sai Prasad Not Arrested ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್‌ನಲ್ಲಿ ಎನ್‌ಐಎ ವಶಕ್ಕೆ ಪಡೆದುಕೊಂಡಿರುವ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ಪ್ರಕರಣದ ಆರೋಪಿಯಲ್ಲ. ಸಾಕ್ಷಿಯಾಗಿ ಪರಿಗಣಿಸಲಾಗಿದೆ ಎಂದು ಎನ್‌ಐಎ ಸ್ಪಷ್ಟೀಕರಣ ನೀಡಿದೆ.
ಬೆಂಗಳೂರು (ಏ.5): ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಹತ್ವದ ಗೊಂದಲವನ್ನು ಎನ್‌ಐಎ ಸ್ಪ್ಟಪಡಿಸಿದೆ. ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್‌ರನ್ನು ಬಂಧಿಸಲಾಗಿದೆ ಎಂದು ಸುದ್ದಿಯಾಗಿತ್ತು. ಕಾಂಗ್ರೆಸ್ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ರಾಷ್ಟ್ರೀಯ ಕಾಂಗ್ರೆಸ್‌ನ ಹ್ಯಾಂಡಲ್‌ಗಳು ಕೂಡ ಈ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತನ ಪಾತ್ರವಿದೆ ಎಂದೂ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲಿಯೇ ರಾಷ್ಟ್ರೀಯ ತನಿಖಾ ಸಂಸ್ಥೆ, ಪ್ರಕಟಣೆ ನೀಡಿ ಸ್ಪಷ್ಟೀಕರಣ ನೀಡಿದ್ದು, ಸಾಕ್ಷಿಯಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ. ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ಹಾಗೂ ಮೊಬೈಲ್ ಅಂಗಡಿ ಮಾಲೀಕನನನ್ನು ಈಗಾಗಲೇ ಎನ್‌ಐಎ ವಿಚಾರಣೆ ಮಾಡಿದೆ. ಇಬ್ಬರನ್ನು ಪ್ರಕರಣ ಸಾಕ್ಷಿಗಳನ್ನಾಗಿ ಮಾಡಲು ಎನ್ ಐ ಎನಿಂದ ವಿಚಾರಣೆ ನಡೆಸಲಾಗಿದೆ. ಸಾಯಿ ಪ್ರಸಾದ್ ಹಳೆಯ ಮೊಬೈಲ್ ಒಂದನ್ನ ಮೊಬೈಲ್ ಅಂಗಡಿ ಮಾಲೀಕನಿಗೆ ಮಾರಾಟ ಮಾಡಿದ್ದ. ಇದನ್ನ ಅಂಗಡಿ ಮಾಲೀಕ ಚಿಕ್ಕಮಗಳೂರಿನ ಮುಝಮ್ಮಿಲ್ ಷರೀಫ್‌ಗೆ ಮಾರಾಟ ಮಾಡಿದ್ದ. ಇದೇ ಮೊಬೈಲ್ ನಲ್ಲಿ ಮುಜಾಮಿಲ್ ತಲೆ ಮರೆಸಿಕೊಂಡ ಆರೋಪಿಗಳ ಜೊತೆ ಸಂಪರ್ಕ ಮಾಡಿದ್ದ ಎಂದು ವರದಿಯಾಗಿದೆ.
ಅಬ್ದುಲ್ ಮತೀನ್ ತಾಹ ಹಾಗೂ ಮುಸಾವೀರ್ ಹುಸೇನ್ ಜೊತೆ ಇದೇ ಮೊಬೈಲ್‌ನಿಂದ ಸಂಪರ್ಕ ಸಾಧಿಸಿದ್ದ. ಮುಜಾಮಿಲ್ ಬಂಧನದ ವೇಳೆ ಮೊಬೈಲ್ಅನ್ನು ಎನ್‌ಐಎ ವಶಪಡಿಸಿಕೊಂಡಿತ್ತು. ಈ ವೇಳೆ ಮೊಬೈಲ್ ಜಾಡು ಹಿಡಿದಾಗ ಸಾಯಿ ಪ್ರಸಾದ್ ಅವರ ಮೊಬೈಲ್ ಎನ್ನುವ ಮಾಹಿತಿ ಸಿಕ್ಕಿದೆ. ಇದೇ ಕಾರಣಕ್ಕೆ ಇಬ್ಬರನ್ನೂ ಸಾಕ್ಷಿ ಮಾಡಲು ಎನ್ ಐ ಎನಿಂದ ಇಬ್ಬರ ವಿಚಾರಣೆ ಮಾಡಲಾಗಿದೆ ಎಂದು ತಿಳಿಸಿದೆ.
ಬಾಂಬ್ ಇಟ್ಟ ಮುಸಾವೀರ್ ಹಾಗೂ ಇದಕ್ಕೆ ರೂಪುರೇಶೆ ಸಿದ್ದಪಡಿಸಿದ ಅಬ್ದುಲ್ ಮತೀನ್ ತಾಹ ಇಬ್ಬರು ಕೂಡ ತೀರ್ಥಹಳ್ಳಿಯವರಾಗಿದ್ದಾರೆ. ಇವರಿಗೆ ಸಹಾಯ ಮಾಡಿದ ಮುಜಾಮಿಲ್ ಷರೀಫ್ ಎಂಬಾತನ ಬಂಧನ ಮಾಡಲಾಗಿದೆ. ಅಲ್ಲದೆ ದೇಶದ 18 ಕಡೆ ದಾಳಿ ಮಾಡಿ ಪರಿಶೀಲನೆ ಮಾಡಲಾಗಿದೆ ಎಂದು ಎನ್‌ಐಎ ತಿಳಿಸಿದೆ.
Rameshwaram Cafe Blast Case: ತೀರ್ಥಹಳ್ಳಿ ಬಿಜೆಪಿ ಕಾರ್ಯಕರ್ತ ಎನ್ ಐಎ ವಶಕ್ಕೆ, ಸಾಕ್ಷಿಯಾಗಿ ಪರಿಗಣನೆ!
ಈಗಾಗಲೆ ಇಬ್ಬರು ಆರೋಪಿಗಳ ಸುಳಿವಿಗೆ ತಲಾ 10ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ. ಎನ್ ಐ ಎ ಎಲ್ಲಾ ಆಯಾಮ ದಲ್ಲೂ ಪ್ರಕರಣದ ತನಿಖೆ ಮಾಡುತ್ತಿದೆ. ತನಿಖೆಯ ಭಾಗವಾಗಿ ಆರೋಪಿಗಳ ಸಹಪಾಠಿಗಳಿ ಸ್ನೇಹಿತರು, ಬಂಧಿತ ಆರೋಪಿಗಳು ಎಲ್ಲರ ವಿಚಾರಣೆ ನಡೆಯುತ್ತಿದೆ. ಇದು ಭಯೋತ್ಪಾದಕ ಕೃತ್ಯ ಆಗಿರುವುದರಿಂದ ವಿಚಾರಣೆ ಮಾಡುವವರ ವಿವರಗಳನ್ನ ಬಹಿರಂಗಪಡಿಸುವುದು ತನಿಖೆಗೆ ಹಿನ್ನಡೆ ಆಗುತ್ತೆ. ಹೀಗಾಗಿ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಸಹಕರಿಸಲು ಎನ್ ಐ ಎ ಮನವಿ ಮಾಡಿದೆ.
ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ, ಹಿಂದೂಗಳ ಹೆಸರಿಟ್ಟುಕೊಂಡು ಸಂಚು..!