ಬಿಸಿಲಿನ ತಾಪಕ್ಕೆ ಬಿಎಂಟಿಸಿ ಎಲೆಕ್ಟ್ರಿಕಲ್ ಬಸ್ ನಲ್ಲಿ ಬೆಂಕಿ!

By Ravi JanekalFirst Published Apr 5, 2024, 5:52 PM IST
Highlights

ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸೊಂದು ಬಿಸಿಲಿಗೆ ನಿಂತ ಪರಿಣಾಮ ಬೆಂಕಿ ಹೊತ್ತಿಕೊಂಡ ಘಟನೆ ಬೆಂಗಳೂರಿನ ಹೊರವಲಯದ ಬಿಡದಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಪೋದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

ಬೆಂಗಳೂರು (ಏ.5): ದಿನೇದಿನೆ ತಾಪಮಾನ ಹೆಚ್ಚಳದಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ, ಕಟ್ಟಡಗಳಲ್ಲಿ ಬೆಂಕಿ, ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಸ್ಫೋಟದಂತಹ  ಅವಘಡಗಳು ಹೆಚ್ಚಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.

ಇದೀಗ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸೊಂದು ಬಿಸಿಲಿಗೆ ನಿಂತ ಪರಿಣಾಮ ಬೆಂಕಿ ಹೊತ್ತಿಕೊಂಡ ಘಟನೆ ಬೆಂಗಳೂರಿನ ಹೊರವಲಯದ ಬಿಡದಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಪೋದಲ್ಲಿ ನಡೆದಿದೆ.

Latest Videos

ಚಿಕ್ಕಮಗಳೂರು: ಬಿಸಿಲು ಝಳ, ಚುನಾವಣಾ ಕಾವು ಜನರು ಸುಸ್ತೋ ಸುಸ್ತು!

ಬೆಳಗ್ಗೆಯಿಂದ ಎಲೆಕ್ಟ್ರಿಕ್ ಬಸ್ ಬಿಸಿಲಲ್ಲಿ ನಿಲ್ಲಿಸಿದ್ದರಿಂದ ಬ್ಯಾಟರಿ ಓವರ್ ಹೀಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. ನೋಡನೋಡುತ್ತಿದ್ದಂತೆ ಇಡೀ ಬಸ್‌ಗೆ ಆವರಿಸಿದ ದಟ್ಟ ಹೊಗೆ. ಸಿಬ್ಬಂದಿ ಕ್ಷಣಕಾಲ ಆತಂಕಕ್ಕೊಳಗಾದರೂ, ಅದೃಷ್ಟವಶಾತ್ ಬಸ್ ನಲ್ಲಿ ಯಾವುದೇ ಸಿಬ್ಬಂದಿ, ಪ್ರಯಾಣಿಕರು ಇಲ್ಲದ್ದರಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ. ಬಸ್‌ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ ಸಿಬ್ಬಂದಿ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿ ಬ್ಯಾಟರಿ ಹೊರತೆಗೆದಿದ್ದಾರೆ.

ರಾಜ್ಯದಲ್ಲಿ ರಣಬಿಸಿಲು: ಉಷ್ಣಮಾರುತಕ್ಕೆ ಮೊದಲ ಸಾವು?

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಳವಾಗಿದ್ದು, ಒಂದು ಬಿಸಲಿಗೆ ಜನರು ಹೊರಗಡೆ ಓಡಾಡಲು ಹೆದರುವಂತಾಗಿದೆ ಬಿಸಲಿನ ಝಳಕ್ಕೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಿದೆ. ಇತ್ತ ಎಲೆಕ್ಟ್ರಿಕ್ ವಾಹನಗಳು ಸಹ ತಾಪಮಾನ ಹೆಚ್ಚಳದ ಪರಿಣಾಮ ಬೆಂಕಿ ಹೊತ್ತಿಕೊಳ್ಳುತ್ತಿವೆ. ಒಟ್ಟಿನಲ್ಲಿ ಹಿಂದೆಂದೂ ಕಂಡರಿಯದ ಬಿಸಲಿನ ಅನಾಹುತಗಳಿಂದ ಜನರು ಬೆಚ್ಚಿಬಿದ್ದಿರುವುದಂತೂ ದಿಟ.

click me!