ಕರ್ನಾಟಕದಲ್ಲಿ ಬಿಸಿಲಿನ ಝಳಕ್ಕೆ 2 ಸಾವು, 521 ಹೀಟ್‌ ಸ್ಟ್ರೋಕ್‌ ಪಕರಣ ದಾಖಲು!

By Suvarna NewsFirst Published Apr 5, 2024, 5:51 PM IST
Highlights

ಕರ್ನಾಟಕದ ಅನೇಕ ಭಾಗಗಳಲ್ಲಿ ಬಿಸಿಲ ಝಳಕ್ಕೆ ಜನ ತತ್ತರಿಸಿ ಹೋಗಿದ್ದು, ತಾಪದ ಏರಿಕೆ ಜನ ಹೈರಾಣರಾಗಿದ್ದಾರೆ. ಈವರೆಗೆ 2 ಸಾವಿನ ಪ್ರಕರಣ ದಾಖಲಾಗಿದೆ.

ಬೆಂಗಳೂರು (ಏ.5): ಕರ್ನಾಟಕದ ಅನೇಕ ಭಾಗಗಳಲ್ಲಿ ತಾಪಮಾನವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಬಿಸಿಲ ಝಳಕ್ಕೆ ಜನ ತತ್ತರಿಸಿ ಹೋಗಿದ್ದು, ತಾಪದ ಏರಿಕೆ ಜನ ಹೈರಾಣರಾಗಿದ್ದಾರೆ. ಬಿಸಿಲಿನ ಬೇಗೆಗೆ ಹೀಟ್‌ ಸ್ಟ್ರೋಕ್‌ ಆಗಿರುವ 521 ಪ್ರಕರಣಗಳನ್ನು ಅಧಿಕಾರಿಗಳು ವರದಿ ಮಾಡಿದ್ದಾರೆ. ಮಾರ್ಚ್‌ನಿಂದ ಈವರೆಗೆ ರಾಜ್ಯದಲ್ಲಿ ಎರಡು ಸಾವಿನ ಪ್ರಕರಣಗಳು ದಾಖಲಾಗಿದೆ.

ಮಾರ್ಚ್ 1 ರಿಂದ ಏಪ್ರಿಲ್ 3 ರ ಅವಧಿಯಲ್ಲಿ ಬಾಗಲಕೋಟೆ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ತಲಾ ಒಂದೊಂದು ಸಾವು ಬಿಸಿಲಿನ ತಾಪದಿಂದ ಆಗಿದೆ ಎಂದು ವರದಿ ತಿಳಿಸಿದೆ.

ಏ.8ಕ್ಕೆ ಹೈಕೋರ್ಟ್‌ನಲ್ಲಿ ವಾದ ಮಂಡಿಸಿ ಶ್ರವಣದೋಷದ ಬೆಂಗಳೂರು ವಕೀಲೆ ಸಾರಾ ಸನ್ನಿ ಇತಿಹಾಸ

ಚಿಕ್ಕಬಳ್ಳಾಪುರ, ಬಾಗಲಕೋಟೆ, ಚಿತ್ರದುರ್ಗ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಬಿಸಿಗಾಳಿ ತಡೆಯಲಾಗದೆ  ಹೀಟ್‌ ಸ್ಟ್ರೋಕ್‌ ಪ್ರಕರಣಗಳು ಕಂಡುಬಂದಿದೆ. ಕ್ರಮವಾಗಿ 102, 69, 56 ಮತ್ತು 54  ಹೀಟ್‌ ಸ್ಟ್ರೋಕ್‌  ಪ್ರಕರಣಗಳು ವರದಿಯಾಗಿವೆ ಎಂದು ಪ್ರಕಟಣೆ ತಿಳಿಸಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತನ್ನ ದೈನಂದಿನ ಹವಾಮಾನ ವರದಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಸರಾಸರಿ ಗರಿಷ್ಠ ತಾಪಮಾನ 42.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ತಿಳಿಸಿದೆ.  ರಾಜ್ಯದ ಭೌಗೋಳಿಕ ಪ್ರದೇಶದ ಶೇಕಡಾ 75 ರಷ್ಟು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನವು 36 ರಿಂದ 42 ಡಿಗ್ರಿ ಸೆಲ್ಸಿಯಸ್ ನಷ್ಟು ದಾಖಲಾಗಿದೆ. ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ 43 ರಿಂದ 45 ಡಿಗ್ರಿ ಸೆಲ್ಸಿಯಸ್ ನಷ್ಟು ಗರಿಷ್ಠ ತಾಪಮಾನ ದಾಖಲಾಗಿದೆ.

ರಾಜ್ಯದ 12 ಕಡೆಗಳಲ್ಲಿ ಗುರುವಾರ ಗರಿಷ್ಠ ತಾಪಮಾನ ದಾಖಲಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಹೆಚ್ಚೂ ಕಡಿಮೆ ಜೂನ್‌ ವರೆಗೂ ಇದೇ ತಾಪಮಾನ ಮುಂದುವರೆಯುವ ನಿರೀಕ್ಷೆಯಿದೆ. ಕೊಪ್ಪಳದಲ್ಲಿ 41.8, ಬಾಗಲ ಕೋಟೆ 41.1, ಬೀದರ್ 39.2, ಕಲಬುರಗಿಯಲ್ಲಿ 42.8, ಗದಗ 40.6, ವಿಜಯಪುರ 40, ಧಾರವಾಡ 39.8, ದಾವಣಗೆರೆ 40.5, ಹಾಸನ 37.4, ಮಂಡ್ಯ 38.2, ಮೈಸೂರು 37, ಬೆಂಗಳೂರು 37 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.

ಇದರ ನಡುವೆ ಚಾಮರಾಜನಗರ, ಕೊಡಗು ಮತ್ತು ರಾಮನಗರ ಜಿಲ್ಲೆಗಳಲ್ಲಿ ಲಘು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಸಂಸ್ಥೆಗಳು ನೀಡಿದ್ದು, ಬಾಗಲಕೋಟೆ, ಗದಗ, ಕಲಬುರಗಿ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಅನ್ನು ಸಹ ಘೋಷಿಸಿವೆ.

Rameshwaram Cafe Blast Case: ತೀರ್ಥಹಳ್ಳಿ ಬಿಜೆಪಿ ಕಾರ್ಯಕರ್ತ ಎನ್ ಐಎ ವಶಕ್ಕೆ!

ಸೂರ್ಯನ ಶಾಖಕ್ಕೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ವಿಶೇಷ ಸಲಹೆ ಸೂಚನೆಯನ್ನು  ನೀಡಿದೆ. ಜನರು ಗರಿಷ್ಠ ತಾಪಮಾನದಲ್ಲಿ, ವಿಶೇಷವಾಗಿ ಮಧ್ಯಾಹ್ನ ಮತ್ತು 3 ಗಂಟೆಯ ನಡುವೆ ಮನೆಯೊಳಗೆ ಇರಬೇಕು ಎಂದು ಹೇಳಿದೆ. ಜನರು  ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಬೇಕೆಂದು ಸಲಹೆ ನೀಡಿದೆ.

ಸನ್ಗ್ಲಾಸ್, ಛತ್ರಿ ಮತ್ತು ಟೋಪಿಗಳ ಬಳಕೆಯನ್ನು ಶಿಫಾರಸು ಮಾಡಿದೆ ಮತ್ತು ಜನರು ದೇಹವನ್ನು ತಂಪಾಗಿಡುವ ಪಾನೀಯಗಳನ್ನು ಸೇವಿಸಿ. ವೇಗವಾಗಿ ನಿರ್ಜಲೀಕರಣಗೊಳಿಸುವ ಕೆಫೀನ್, ಕಾರ್ಬೊನೇಟೆಡ್ ಮತ್ತು ಆಲ್ಕೊಹಾಲು ಪಾನೀಯಗಳನ್ನು ಸೇವಿಸದಿರುವುದು ಉತ್ತಮ ಎಂದು ಸಲಹೆ ನೀಡಿದೆ. ಏಕೆಂದರೆ ಬಿಸಿಲಿನ ತಾಪಕ್ಕೆ ಈ ಸಮಯದಲ್ಲಿ ತಲೆ ತಿರುಗುವುದು, ನಿರ್ಜಲೀಕರಣ, ನಿತ್ರಾಣವಾಗುವುದು ಅತೀ ಹೆಚ್ಚು. ಅನಾರೋಗ್ಯವಾದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಎಂದಿದೆ.

click me!