'ಡಿಕೆ ಶಿವಕುಮಾರ್ ಬದಲು ಡಿಕೆ ಶರೀಫ್ ಅಂತಾ ಇಟ್ಕೊಳ್ಳಿ'; ರಾಮನಗರ ಹೆಸರು ಬದಲಾವಣೆಗೆ ಮುತಾಲಿಕ್ ಕೆಂಡ!

Published : Jul 27, 2024, 04:10 PM ISTUpdated : Jul 29, 2024, 03:41 PM IST
'ಡಿಕೆ ಶಿವಕುಮಾರ್ ಬದಲು ಡಿಕೆ ಶರೀಫ್ ಅಂತಾ ಇಟ್ಕೊಳ್ಳಿ'; ರಾಮನಗರ ಹೆಸರು ಬದಲಾವಣೆಗೆ ಮುತಾಲಿಕ್ ಕೆಂಡ!

ಸಾರಾಂಶ

ರಾಮನಗರ ಜಿಲ್ಲೆ ಹೆಸರು ಬದಲಾವಣೆಮಾಡಿ ಬೆಂಗಳೂರು ದಕ್ಷಿಣ ಅಂತಾ ಮಾಡಿರೋದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶಕ್ಕೆ ಕಾರಣವಾಗಿದೆ.. 

ಗದಗ (ಜು.27) : ರಾಮನಗರ ಜಿಲ್ಲೆ ಹೆಸರು ಬದಲಾವಣೆಮಾಡಿ ಬೆಂಗಳೂರು ದಕ್ಷಿಣ ಅಂತಾ ಮಾಡಿರೋದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶಕ್ಕೆ ಕಾರಣವಾಗಿದೆ.. 

ಗದಗನಲ್ಲಿ ಮಾತ್ನಾಡಿದ ಪ್ರಮೋದ್ ಮುತಾಲಿಕ್, ರಾಮನಗರ ಹೆಸರು(Ramanagara renaming dispute) ಇದ್ರೆ ನಿಮಗೆ ತೊಂದರೆ ಅಂತಾ ಸರ್ಕಾರವನ್ನ ಮುತಾಲಿಕ್ ಪ್ರಶ್ನೆ‌ಸಿದ್ರು. ರಾಮನಗರ ಜಿಲ್ಲೆಯ ಹೆಸರು ಪರಿವರ್ತನೆ ಮಾಡಿದ್ದು ಹಿಂದೂ ದ್ರೋಹಿ ಕೃತ್ಯ. ಕಾಂಗ್ರೆಸ್ ಮೊದಲಿನಿಂದಲೂ ಇದೇ ಕೆಲಸ ಮಾಡುತ್ತಾ ಬಂದಿದೆ. ರಾಮ ಮಂದಿರ ನಿರ್ಮಾಣ ವಿರೋಧಿಸಿ ಕಾಂಗ್ರೆಸ್ ಬಾಬರ್ ನ ಬೆಂಬಲಿಸಿದೆ. ನಿಮಗೆ ನಿಜವಾಗಲೂ ಭದಲಾವಣೆ ಮಾಡುವುದಿದ್ದರೆ ಬ್ರಿಟಿಷರು ಇಟ್ಟ ಹೆಸರು ಬದಲಾವಣೆ ಮಾಡಿ. ಬೆಂಗಳೂರಿನ 32 ಜಾಗದಲ್ಲಿ ಬ್ರಿಟೀಷರು ಇಟ್ಟ ಹೆಸರು ಇವೆ. ವಿಕ್ಟೋರಿ, ಮೆಂಟೊ ಹಾಸ್ಪಿಟಲ್, ಕಬ್ಬನ್ ಪಾರ್ಕ್ ಬ್ರಿಟಿಷರ ಹೆಸರು ಇವುಗಳನ್ನ ಏಕೆ ಬದಲಾವಣೆ ಮಾಡಲ್ಲ..? ಅಂತಾ ಮುತಾಲಿಕ್ ಪ್ರಶ್ನಿಸಿದ್ರು.

ಬೆಂಗಳೂರಲ್ಲಿ ನಾಯಿ ಮಾಂಸ ಮಾರಾಟ ಪ್ರಕರಣ; ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ಮೇಲೆ ಪೊಲೀಸರಿಂದ ಹಲ್ಲೆ! ವಕೀಲ ಹೇಳಿದ್ದೇನು?

ಕನ್ನಡ ಅಭಿಮಾನ, ದೇಶಾಭಿಮಾನ ಇದ್ದರೆ ಇದನ್ನ ಬದಲಾವಣೆ ಮಾಡಿ ಸುಲ್ತಾನ್ಪುರ, ಟಿಪ್ಪು ನಗರ ಹೆಸರು ಬದಲಾವಣೆ ಮಾಡಿ ಅಂತಾ ಸವಾಲು ಹಾಕಿದ್ರು. ಬೇಕಿದ್ರೆ ನಿಮ್ಮ ಹೆಸರು ಬದಲಾವಣೆ ಮಾಡಿ ರಾಮನಗರಕ್ಕೆ ತನ್ನದೇ ಆದ ಇತಿಹಾಸ ಇದೆ ಅಂತಾ  ಬದಲಾವಣೆ ಮಾಡಲು ನೀವು ಯಾರು ಎಂದು ಪ್ರಶ್ನಿಸಿದರು.

ಮುಸಲ್ಮಾನರ ಹೋಟೆಲ್ ಗಳಲ್ಲಿ ಮಾಂಸ ತಿನ್ನುವ ಮುನ್ನ ಯೋಚಿಸಿ:

ಮಟನ್ ಮಾಫಿಯಾ(Bengaluru mutton mafia) ವಿರುದ್ಧ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗುಡುಗಿದ್ದು, ಲಾಭಕ್ಕಾಗಿ ಮಾರಾಟ ಮಾಡ್ತಿದಾರಾ. ಹಿಂದೂಗಳನ್ನ ರೋಗಗ್ರಸ್ತ ಮಾಡಲು ಮಾರಾಟ ಮಾಡ್ತಾರಾ ಅನ್ನೋ ಅನುಮಾನ ಇದೆ. ಯಾವುದೋ ಒಂದು ಷಡ್ಯಂತ್ರ.. ದೊಡ್ಡ ಪ್ರಮಾಣದಲ್ಲಿ ಹಿಂದೂಗಳಿಗೆ ಅನಾಹುತ ಮಾಡುವ ಉದ್ದೇವವಿದೆ ಅಂತಾ ಏಷ್ಯ ನೆಟ್ ಸುವರ್ಣ ನ್ಯೂಸ್ ಗೆ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ರು. ಹಲಾಲ್, ಉಗುಳಿದ್ದು, ಕತ್ತೆ, ನರಿ, ಬೆಕ್ಕಿನ ಮಾಂಸ ಎಲ್ಲವನ್ನೂ ಹಾಕಿರುತ್ತಾರೆ‌‌. ಹಿಂದೂ ಸಮಾಜ ಎಚ್ಚರಿಕೆಯಿಂದಿರಬೇಕು.  ರುಚಿ ಇದೆ ಅಂತಾ ಏನೇನೋ ತಿಂದು ಹಾಳಾಗ್ಬೇಡಿ. ಹಿಂದೂಗಳು ಎಚ್ಚರಿಕೆಯಿಂದಿರಿ ಅಂತಾ ಕಿವಿ ಮಾತು ಹೇಳಿದ್ರು. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಿ ಅಬ್ದುಲ್ ರಜಾಕ್ ನನ್ನ ಬಂಧಿಸ್ಬೇಕು.  ಪ್ರಕರಣ ಹೊರ ಬಂದಿದ್ದು ಒಳ್ಳೆಯದು.. ಇನ್ನೂ ಏನೇನಾಗ್ತಿದೆಯೋ ಗೊತ್ತಿಲ್ಲ. ಮಾಂಸದ ಹೆಸರಲ್ಲಿ ಮೋಸ ಮಾಡಿ‌ ದುಡ್ಡು ಮಾಡಲಾಗ್ತಿದೆ. ಹಿಂದೂಗಳಿಗೆ ವಿಷಯುಕ್ತ ಮಾಂಸ ತಿನ್ನಿಸುವ ವ್ಯವಸ್ಥಿತಿ ಜಾಲ ಇದಾಗಿದೆ. ನಿನ್ನೆ ಬಾಕ್ಸ್ ಓಪನ್ ಮಾಡಿದಾಗ ನಾಯಿ ಬಾಲ ಇರುವ ಮಾಂಸ ಸಿಕ್ಕಿದೆ. 

ಬೆಂಗಳೂರಲ್ಲಿ ನಾಯಿ ಮಾಂಸ ಮಾರಾಟ ಪ್ರಕರಣ: ಸ್ಟೇಷನ್ ಬೇಲ್ ಮೇಲೆ ಪುನೀತ್ ಕೆರೆಹಳ್ಳಿ ಬಿಡುಗಡೆ?

ಕರ್ನಾಟಕದಲ್ಲಿ‌ ಕುರಿಗಳಿಲ್ಲವಾ? ರಾಜಸ್ಥಾನದಿಂದ ತರುವ ಅವಶ್ಯಕತೆ ಏನಿದೆ. ನಿಮಗೆ ಅನುಮತಿ ಕೊಟ್ಟವರಾರು. ಇದು 15 ವರ್ಷ ದೊಡ್ಡ ಮಾಫಿಯಾ ಇದಾಗಿದೆ. ಪ್ರಕರಣದ ತನಿಖೆ ಮಾಡಬೇಕು.. ಕೂಡ್ಲೆ 90 ಬಾಕ್ಸ್ ಸೀಜ್ ಮಾಡಿ. ಅಬ್ದುಲ್ ರಜಾಕ್ ನನ್ನ ಬಂಧನ ಮಾಡಬೇಕು. ಅಬ್ದುಲ್ ರಜಾಕ್, ಎಂಎಲ್ ಎ ಖಾಸ್ ವ್ಯಕ್ತಿ ಬಲಗೈ  ಬಂಟ. ಕಾಂಗ್ರೆಸ್ ಸರಕಾರ ಇದೆ ಮುಸ್ಲಿಂಮರ ಪರ ಇದೆ. ಕೇಸ್ ಮುಚ್ಚಿಹಾಕಬಹುದು. ಕೇಸ್ ಮುಚ್ಚಿಹಾಕಲು ಬಿಡಬಾರದು, ನಾವೂ ಹೋರಾಟ ಮಾಡ್ತೀವಿ.. ಮುಸ್ಲೀಮರೇ ಅಬ್ದುಲ್ ರಜಾಕ್ ತರುವ ಮಾಂಸಕ್ಕೆ ವಿರೋಧ ಮಾಡಿದ್ದಾರೆ. ನಾಯಿ ಮಾಂಸವನ್ನ ಕುರಿ ಮಾಂಸ ಅಂತಾ ಮಾರಾಟ ಮಾಡೋದು ಅಕ್ಷಮ್ಯ. ಅನಾರೋಗ್ಯಕ್ಕೆ ಕಾರಣವಾಗುವ ಮಾಂಸ ಇದು. ಜನರ ಆರೋಗ್ಯ ದೃಷ್ಟಿಯಿಂದ ಸರ್ಕಾರ ಗಮನಿಸಬೇಕು. ಕರ್ನಾಟಕದಲ್ಲಿ 700, 800 ರೂಪಾಯಿಗೆ ಕೆಜಿ ಮಟನ್ ಸಿಗುತ್ತೆ.‌ ಅವ್ರು 500 ರೂಪಾಯಿಗೆ ಮಾರಾಟ ಮಾಡ್ತಾರೆ ಅಂದ್ರೆ ಯೋಚನೆ ಮಾಡಬೇಕು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೇವೆಯಲ್ಲಿಯೇ ಸಾರ್ಥಕತೆ ಪಡೆಯುವ ಗೃಹ ರಕ್ಷಕರು
ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್