ಪಿಎಸ್‌ಐ ನೇಮಕಾತಿ ಅಕ್ರಮ: ಶೀಘ್ರ 5 ಚಾರ್ಜ್‌ಶೀಟ್‌ ಸಲ್ಲಿಕೆ

By Govindaraj S  |  First Published Oct 25, 2022, 3:26 AM IST

ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ಕಲಬುರಗಿಯ ವಿವಿಧೆಡೆ ದಾಖಲಾದ ಒಟ್ಟು 8 ಪ್ರಕರಣಗಳ ಪೈಕಿ ಮೂರು ಪ್ರಕರಣಗಳಲ್ಲಿ ಈಗಾಗಲೇ ದೋಷಾರೋಪ ಪಟ್ಟಿ(ಚಾರ್ಜ್‌ಶೀಟ್‌) ಸಲ್ಲಿಸಿರುವ ಸಿಐಡಿ ಅಧಿಕಾರಿಗಳು, ಇನ್ನುಳಿದ 5 ಪ್ರಕರಣಗಳಲ್ಲಿನ ದೋಷಾರೋಪ ಪಟ್ಟಿಗಳನ್ನೂ ಸದ್ಯದಲ್ಲೇ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.


ಆನಂದ್‌ ಎಂ. ಸೌದಿ

ಯಾದಗಿರಿ (ಅ.25): ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ಕಲಬುರಗಿಯ ವಿವಿಧೆಡೆ ದಾಖಲಾದ ಒಟ್ಟು 8 ಪ್ರಕರಣಗಳ ಪೈಕಿ ಮೂರು ಪ್ರಕರಣಗಳಲ್ಲಿ ಈಗಾಗಲೇ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್‌) ಸಲ್ಲಿಸಿರುವ ಸಿಐಡಿ ಅಧಿಕಾರಿಗಳು, ಇನ್ನುಳಿದ 5 ಪ್ರಕರಣಗಳಲ್ಲಿನ ದೋಷಾರೋಪ ಪಟ್ಟಿಗಳನ್ನೂ ಸದ್ಯದಲ್ಲೇ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ. 

Tap to resize

Latest Videos

undefined

ಅಶೋಕನಗರ ಪೊಲೀಸ್‌ ಠಾಣಾ ವ್ಯಾಪ್ತಿಯ, ಕಲಬುರಗಿಯ ಶ್ರೀಶರಣಬಸವೇಶ್ವರ ವಿವಿಯಲ್ಲಿನ ನಾಲ್ಕು ಪರೀಕ್ಷಾ ಕೇಂದ್ರಗಳ ಹಾಗೂ ಗುಲ್ಬರ್ಗ ವಿವಿ ಪೊಲೀಸ್‌ ವ್ಯಾಪ್ತಿಯ ಸರ್ಕಾರಿ ಡಿಗ್ರಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮದ ಕುರಿತು ದಾಖಲಾದ ಪ್ರಕರಣಗಳ ಬಗ್ಗೆ ಸುಮಾರು 800-900 ಪುಟಗಳಷ್ಟು ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ‘ಕನ್ನಡಪ್ರಭ’ಕ್ಕೆ ಮೂಲಗಳು ತಿಳಿಸಿವೆ.

PSI Recruitment Scam: ಪ್ರಿಯಾಂಕ್‌ ಖರ್ಗೆ ಕೊಟ್ಟ ಆಡಿಯೋದಿಂದ ಒಬ್ಬ ಬಲೆಗೆ..!

ಈ ಮಧ್ಯೆ, ಕೆಲ ದಿನಗಳ ಹಿಂದೆ ಬೆಂಗಳೂರು, ತುಮಕೂರು ಹಾಗೂ ಧಾರವಾಡದಲ್ಲಿ ದಾಖಲಾದ ಪ್ರಕರಣಗಳ ಆರೋಪಿಗಳನ್ನು ಪಂಚನಾಮೆಗೆಂದು ಕಲಬುರಗಿಗೆ ಕರೆತಂತಿದ್ದ ಸಿಐಡಿ ತಂಡ, ಎಲ್ಲ ಕಡೆ ಸ್ಥಳ ಮಹಜರು ನಡೆಸಿದೆ. ಪಿಎಸ್‌ಐ ಅಕ್ರಮಕ್ಕೆ ಕಲಬುರಗಿಯೇ ಕೇಂದ್ರ ಬಿಂದು. ಇಲ್ಲಿಂದಲೇ ಬ್ಲೂಟೂತ್‌ ಹಾಗೂ ಇನ್ನುಳಿದ ಅಕ್ರಮ ವಿಧಾನಗಳನ್ನು ಬಳಸಿಕೊಳ್ಳಲಾಗಿದೆ. ಬಂಧಿತರು ಪರೀಕ್ಷೆಗಳನ್ನು ರಾಜ್ಯದ ವಿವಿಧೆಡೆಯಿಂದ ಬರೆದಿದ್ದರೂ ಕಲಬುರಗಿಯೇ ಇವರ ಅಕ್ರಮದ ಮೂಲವಾಗಿತ್ತು ಅನ್ನುವ ಮಾಹಿತಿಯನ್ನು ಸಿಐಡಿ ತಂಡ ಪತ್ತೆ ಹಚ್ಚಿದೆ.

ಓಎಂಆರ್‌ಶೀಟ್‌ ತಿರುಚುವಿಕೆಯ ಪತ್ರಿಕೆ-2 ರಲ್ಲಿನ ಅಕ್ರಮದ ಪತ್ತೆಯಾದ ನಂತರ ಪತ್ರಿಕೆ-1ರಲ್ಲೂ (ಪ್ರಬಂಧ, ಸಾರಾಂಶ ಹಾಗೂ ಭಾಷಾಂತರ) ಅಕ್ರಮದ ಸುಳಿವು ಸಿಕ್ಕಿದೆ. ಧಾರವಾಡದಲ್ಲಿ ದಾಖಲಾದ ಪ್ರಕರಣದಲ್ಲಿ (0218/2022) ಈ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿರುವುದರಿಂದ ಇದರ ತನಿಖೆಯನ್ನೂ ನಡೆಸಲಾಗುವುದು ಎಂದು ಸಿಐಡಿ ತಂಡ ‘ಕನ್ನಡಪ್ರಭ’ಕ್ಕೆ ತಿಳಿಸಿದೆ.

PSI Recruitment Scam: ಇಡಿ ಮುಂದೆ ಹೇಳಿಕೆ ನೀಡುವ ಆದೇಶ ರದ್ದು

ಚಾರ್ಜ್‌ಶೀಟ್‌: ಪಿಎಸ್‌ಐ ಅಕ್ರಮಕ್ಕೆ ಸಂಬಂಧಿಸಿ ಮೊದಲ ದೂರು ದಾಖಲಾಗಿದ್ದ ಕಲಬುರಗಿಯ ಚೌಕ್‌ ಪೊಲೀಸ್‌ ಠಾಣೆಯ (48/2022) ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರದ ಪ್ರಕರಣದಲ್ಲಿ 34 ಆರೋಪಿಗಳ ವಿರುದ್ಧ ಜುಲೈ 5, 2022 ರಂದು 1974 ಪುಟಗಳ ಮೊದಲ ಚಾರ್ಜ್‌ಶೀಟ್‌ ಸಲ್ಲಿಸಲಾಗಿತ್ತು. ಕಲಬುರಗಿಯ ಸ್ಟೇಷನ್‌ ಬಜಾರ್‌ ಪೊಲೀಸ್‌ ವ್ಯಾಪ್ತಿಯ ಎಂಸ್‌ಐ ಕಾಲೇಜಿನ ಪರೀಕ್ಷಾ ಕೇಂದ್ರದ ಪ್ರಕರಣ (57/2022) ಬಗ್ಗೆ ಜು.29 ರಂದು 8 ಆರೋಪಿಗಳ ವಿರುದ್ಧ 1,609 ಪುಟಗಳ 2ನೇ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಿಐಡಿ ಸಲ್ಲಿಸಿದ್ದರೆ, ಕಲಬುರಗಿಯ ನೋಬಲ್‌ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿ ಕಲಬುರಗಿಯ ಸ್ಟೇಷನ್‌ ಬಜಾರಿನಲ್ಲಿ ದಾಖಲಾದ ದೂರಿನ (79/2022) ಬಗ್ಗೆ ಸೆ.1 ರಂದು 7 ಆರೋಪಿಗಳ ವಿರುದ್ಧ 2,060 ಪುಟಗಳ 3ನೇ ಚಾರ್ಜ್‌ಶೀಟ್‌ ಈಗಾಗಲೇ ಸಲ್ಲಿಸಿದೆ.

click me!