Bengaluru News: ರಸ್ತೆಗೆ ಕೊಳಚೆ ನೀರು ಹರಿಸಿದ ಬ್ಯಾಪ್ಟಿಸ್ಟ್‌ ವಿರುದ್ಧ ಪ್ರತಿಭಟನೆ

By Kannadaprabha NewsFirst Published Sep 12, 2022, 7:34 AM IST
Highlights

ನಗರದ ಬಳ್ಳಾರಿ ರಸ್ತೆಯಲ್ಲಿರುವ ಬ್ಯಾಪ್ಟಿಸ್ಟ್‌ ಆಸ್ಪತ್ರೆಯ ಕೊಳಚೆ ನೀರನ್ನು ಆನಂದನಗರ ಮುಖ್ಯರಸ್ತೆಗೆ ಹರಿಸದಂತೆ ಆಗ್ರಹಿಸಿ ಸ್ಥಳೀಯರು ಭಾನುವಾರ ಮೌನ ಪ್ರತಿಭಟನೆ ನಡೆಸಿದ್ದಾರೆ.ಆನಂದ ನಗರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಆನಂದನಗರ ಮುಖ್ಯ ರಸ್ತೆಯ ಹಾಪ್‌ಕಾಮ್ಸ್‌ನಿಂದ ಬ್ಯಾಪ್ಟಿಸ್ಟ್‌ ಆಸ್ಪತ್ರೆವರೆಗೆ ಮೌನಪ್ರತಿಭಟನೆ ನಡೆಸಿ ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು (ಸೆ.12) : ನಗರದ ಬಳ್ಳಾರಿ ರಸ್ತೆಯಲ್ಲಿರುವ ಬ್ಯಾಪ್ಟಿಸ್ಟ್‌ ಆಸ್ಪತ್ರೆಯ ಕೊಳಚೆ ನೀರನ್ನು ಆನಂದನಗರ ಮುಖ್ಯರಸ್ತೆಗೆ ಹರಿಸದಂತೆ ಆಗ್ರಹಿಸಿ ಸ್ಥಳೀಯರು ಭಾನುವಾರ ಮೌನ ಪ್ರತಿಭಟನೆ ನಡೆಸಿದ್ದಾರೆ.ಆನಂದ ನಗರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಆನಂದನಗರ ಮುಖ್ಯ ರಸ್ತೆಯ ಹಾಪ್‌ಕಾಮ್ಸ್‌ನಿಂದ ಬ್ಯಾಪ್ಟಿಸ್ಟ್‌ ಆಸ್ಪತ್ರೆವರೆಗೆ ಮೌನಪ್ರತಿಭಟನೆ ನಡೆಸಿ ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Bengaluru Rain: ರೈನ್‌ಕೋಟು ಧರಿಸಿ ನಾಯಿಮರಿ ವಾಕಿಂಗ್ ವೀಡಿಯೋ ವೈರಲ್

ಬ್ಯಾಪ್ಟಿಸ್ಟ್‌ ಆಸ್ಪತ್ರೆ,(Baptist Hospital) ನರ್ಸಿಂಗ್‌ ಕಾಲೇಜು(Nursing Collage) ಹಾಗೂ ನಿವಾಸಿಗಳು ಬಳಸಿದ ನೀರನ್ನು ಆನಂದ ನಗರದ ಮುಖ್ಯ ರಸ್ತೆಗೆ ನಿರಂತರವಾಗಿ ಹರಿಸಲಾಗುತ್ತಿದ್ದು, ಅನೇಕ ಬಾರಿ ತ್ಯಾಜ್ಯ ನೀರನ್ನು ಹರಿಸದಂತೆ ಮನವಿ ಮಾಡಿದರೂ ಆಸ್ಪತ್ರೆಯ ಆಡಳಿತ ಮಂಡಳಿ ಕ್ರಮ ವಹಿಸದ ಕಾರಣ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಬಿಬಿಎಂಪಿ(BBMP) ಮತ್ತು ಬೆಂಗಳೂರು ಜಲಮಂಡಳಿ(Bangalore Water Board)ಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಅನಿವಾರ್ಯವಾಗಿ ಪ್ರತಿಭಟನೆ (Protest)ನಡೆಸಲಾಗಿದೆ. ತ್ಯಾಜ್ಯ ನೀರನ್ನು ರಸ್ತೆ ಬಿಡುವುದರಿಂದ ವಾತಾವರಣ ಕಲುಷಿತವಾಗಿದೆ. ಕೆಟ್ಟವಾಸನೆ ಬರುತ್ತಿದೆ, ವಾಹನಗಳು ಸಂಚಾರಿಸುವ ವೇಳೆ ಕೊಳಚೆ ನೀರು ಪಾದಚಾರಿಗಳಿಗೆ ಹಾಗೂ ಬೈಕ್‌ ಸವಾರರ ಮೈ ಮೇಲೆ ಸಿಡಿಯುತ್ತದೆ ಎಂದು ಆನಂದ ನಗರ ಕ್ಷೇಮಾಭಿವೃದ್ಧಿ ಸಂಘದ ಉಮಾಶಂಕರ್‌ ದೂರಿದ್ದಾರೆ.

ಆರ್ ಆರ್ ನಗರದಲ್ಲಿ ಉರುಳಿಬಿದ್ದ ಬೃಹತ್ ಬಂಡೆ: ಆತಂಕ

ರಾಜರಾಜೇಶ್ವರಿ ನಗರದ ಗಿರಿಧಾಮ ಬಡಾವಣೆಯಲ್ಲಿ ಸುಮಾರು 20 ಟನ್‌ ತೂಕದ ಬಂಡೆ ಉರುಳಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಆರ್‌ಆರ್‌ ನಗರದ ಗಿರಿಧಾಮ ಬಡಾವಣೆಯಲ್ಲಿ ಗುರುವಾರ ಗುಡ್ಡ ಕುಸಿದು ಭಾರೀ ಗಾತ್ರದ ಬಂಡೆಯೊಂದು ಉರುಳಿದೆ. ಇದರಿಂದ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ. ಈ ಕುರಿತು ನಿವಾಸಿಗಳು ಬಿಬಿಎಂಪಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿಯ ಆರ್‌ಆರ್‌ ನಗರ ವಲಯದ ಮುಖ್ಯ ಎಂಜಿನಿಯರ್‌ ವಿಜಯ್‌ ಕುಮಾರ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಬಸವರಾಜ್‌ ಪರಿಶೀಲನೆ ನಡೆಸಿದ್ದಾರೆ.

ಗುಡ್ಡದಿಂದ ಸುಮಾರು 30 ರಿಂದ 40 ಮೀಟರ್‌ ದೂರದಲ್ಲಿ ಒಂದು ಮನೆ ಇದ್ದು, ಮತ್ತೆ ಗುಡ್ಡ ಕುಸಿದರೂ ನಿವಾಸಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಸುಮಾರು ಎರಡು ಮೀಟರ್‌ ಆಳದ ದೊಡ್ಡ ಕಾಲುವೆ (ಟ್ರಂಚ್‌) ನಿರ್ಮಿಸಲಾಗಿದೆ. ಜತೆಗೆ ಎರಡು ಮೀಟರ್‌ ಎತ್ತರದ ಬಂಡು (ಬದು) ನಿರ್ಮಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Bengaluru: ಆರ್ಥಿಕವಾಗಿ ಹಿಂದುಳಿದವರಿಗೆ ಅಪಾರ್ಟ್‌ಮೆಂಟ್ ಖರೀದಿಗೆ 5 ಲಕ್ಷ ಸಹಾಯಧನ

ಬಂಡೆ ಉರುಳದಂತೆ ಪರಿಹಾರಕ್ಕೆ ಒತ್ತಾಯ: ಸುಮಾರು 20 ವರ್ಷದ ಹಿಂದೆಯೇ ಸರ್ಕಾರವು ಈ ಗುಡ್ಡವನ್ನು ಹರಾಜು ಮಾಡಿದೆ. ಇದೀಗ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಗುಡ್ಡ ಕುಸಿಯುವುದಕ್ಕೆ ಆರಂಭಗೊಂಡಿದ್ದು, ಬಂಡೆಗಳು ಉರುಳುವುದಕ್ಕೆ ಶುರು ಮಾಡಿವೆ. ಗುಡ್ಡದ ಮೇಲ್ಭಾಗದಲ್ಲಿ ಬಹಳಷ್ಟುಬಂಡೆಗಳಿದ್ದು, ಮುಂದಿನ ದಿನದಲ್ಲಿ ಉರುಳುವ ಸಾಧ್ಯತೆ ಇದೆ. ಹಾಗಾಗಿ, ಸರ್ಕಾರ ಮತ್ತು ಬಿಬಿಎಂಪಿ ಈ ಬಗ್ಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿ ಕಿಶೋರ್‌ ಹೊಂಬೇಗೌಡ ಒತ್ತಾಯಿಸಿದ್ದಾರೆ.

click me!