'ಓಹ್, ಸೂರಜ್ ರೇವಣ್ಣ ಕೂಡ ಅರೆಸ್ಟ್ ಆದ್ರಾ? ನಂಗೆ ಗೊತ್ತೇ ಇರಲಿಲ್ಲ' ಎಂದ ಜಿಟಿ ದೇವೇಗೌಡ!

By Ravi Janekal  |  First Published Jun 23, 2024, 1:23 PM IST

'ಓಹ್ ಏನಾಗಿದೆ, ಸೂರಜ್ ಕೂಡ ಅರೆಸ್ಟ್ ಆದ್ರಾ? ಅವರೂ ಹಗರಣದಲ್ಲಿ ಸಿಕ್ಕಿಬಿಟ್ರಾ? ಹಾಗಾದರೆ ಅವರಿಗೂ ಕಾದಿದೆ ಶಿಕ್ಷೆ' ಅಸಹಜ ಲೈಂಗಿಕ ಕಿರುಕುಳ ಪ್ರಕರಣ ವಿಚಾರಕ್ಕೆ ಮೈಸೂರಿನಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಪ್ರತಿಕ್ರಿಯಿಸಿದ್ದ ಹೀಗೆ.


ಮೈಸೂರು (ಜೂ.23): 'ಓಹ್ ಏನಾಗಿದೆ, ಸೂರಜ್ ಕೂಡ ಅರೆಸ್ಟ್ ಆದ್ರಾ? ಅವರೂ ಹಗರಣದಲ್ಲಿ ಸಿಕ್ಕಿಬಿಟ್ರಾ? ಹಾಗಾದರೆ ಅವರಿಗೂ ಕಾದಿದೆ ಶಿಕ್ಷೆ' ಅಸಹಜ ಲೈಂಗಿಕ ಕಿರುಕುಳ ಪ್ರಕರಣ ವಿಚಾರಕ್ಕೆ ಮೈಸೂರಿನಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಪ್ರತಿಕ್ರಿಯಿಸಿದ್ದ ಹೀಗೆ.

ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಬಂಧನ ವಿಚಾರ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸೂರಜ್ ರೇವಣ್ಣ ಬಂಧನದ ಬಗ್ಗೆ ನನಗೆ ಮಾಹಿತಿ ಇಲ್ಲ. ನಿನ್ನೆಯಿಂದ ನಾನು ಹಲವು ಕಾರ್ಯಕ್ರಮಗಳಲ್ಲಿ ಬ್ಯುಸಿ ಇದ್ದಿದ್ರಿಂದ ಬೆಳಗ್ಗೆ ಪತ್ರಿಕೆ, ಟಿವಿ ನೋಡಿಲ್ಲ. ಹೀಗಾಗಿ ಸೂರಜ್ ಬಂಧನ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದರು.

Tap to resize

Latest Videos

undefined

ಪ್ರಜ್ವಲ್, ಸೂರಜ್‌, ಯಡಿಯೂರಪ್ಪ ಇವರಿಗೆಲ್ಲ ಏನು ಅನಿಸೊಲ್ವ? ಮುಜುಗರ ಆಗೊಲ್ವ? ಪ್ರಿಯಾಂಕ್ ಖರ್ಗೆ

ಪ್ರಜ್ವಲ್ ರೇವಣ್ಣ ವಿಚಾರದಲ್ಲೂ ನಮ್ಮ ಹಸ್ತಕ್ಷೇಪ ಇರಲಿಲ್ಲ. ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ. ತಪ್ಪು ಮಾಡಿದವರ ಪರ ನಾವು ಯಾವತ್ತೂ ನಿಲ್ಲುವುದಿಲ್ಲ. ಅದು ಪ್ರಜ್ವಲ್, ಸೂರಜ್ ಅಷ್ಟೇ ಅಲ್ಲ, ಸ್ವತಃ ನನ್ನ ಮಗನೇ ಆಗಿರಲಿ, ಸಂಬಂಧಿಗಳೇ ಆಗಿರಲಿ ಯಾರು ತಪ್ಪು ಮಾಡಿದ್ರೂ ಅದು ತಪ್ಪೇ. ಜನತಾದಳ ಯಾವತ್ತೂ ತಪ್ಪು ಮಾಡಿದವರ ಪರ ನಿಲ್ಲಲ್ಲ ಎಂದರು.

 

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ; ಸಾಕ್ಷಿ ಕೊಡಲು ಬಂದು ಪೊಲೀಸರಿಗೆ ತಾನಾಗಿಯೇ  ಸಿಕ್ಕಿಬಿದ್ದ ಸೂರಜ್ ರೇವಣ್ಣ!

ಸೂರಜ್ ರೇವಣ್ಣ ಬಂಧನದಿಂದ ಪಕ್ಷಕ್ಕೆ ಮುಜುಗರ ಆಗೊಲ್ವಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾಕೆ ಮುಜುಗರ ಆಗಬೇಕು? ರಾಜ್ಯದಲ್ಲಿ ಯಾರೋ ಒಬ್ಬರು ತಪ್ಪು ಮಾಡಿದ್ರೆ ಅದು ಆರೂವರೆ ಕೋಟಿ ಜನ ಕಾರಣರಾಗ್ತಾರಾ? ಇಲ್ಲ ತಾನೇ? ಇದು ಕೂಡ ಹಾಗೆ. ಸೂರಜ್ ವಿರುದ್ಧ ಪಕ್ಷದೊಳಗೆ ಚರ್ಚೆ ಮಾಡಿ ಕ್ರಮದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.

click me!