ಪರಪ್ಪನ ಅಗ್ರಹಾರ ಜೈಲಲ್ಲಿ ದರ್ಶನ್ ಇರುವ ಕೊಠಡಿಗೂ ಭಾರೀ ಭದ್ರತೆ! ಸಾಮಾನ್ಯರಿಗಿಲ್ಲಿ ಪ್ರವೇಶವಿಲ್ಲ!

By Ravi JanekalFirst Published Jun 23, 2024, 11:35 AM IST
Highlights

ಭದ್ರತಾ ವಿಭಾಗದಲ್ಲಿ ಆರು ಕೊಠಡಿಗಳಿವೆ. ಅವು  ಸಾಮಾನ್ಯ ಕೈದಿಗಳಿರುವ ಕೊಠಡಿಗಳಂತಲ್ಲ. ಭಾರೀ ಭದ್ರತೆ ನಡುವೆ ಇರುವ ಕೊಠಡಿಗಳು. ಅಲ್ಲಿಗೆ ಸಾಮಾನ್ಯ ಕೈದಿಗಳು ಯಾರೂ ಪ್ರವೇಶ ಮಾಡಲಾಗುವುದಿಲ್ಲ. ಏಕೆಂದರೆ ಅಲ್ಲಿರೋರು ಸಾಮಾನ್ಯ ಕೈದಿಗಳಲ್ಲ. ಆರು ಕೊಠಡಿಗಳ ಪೈಕಿ 5 ಕೊಠಡಿಗಳಲ್ಲಿದ್ದಾರೆ ಎನ್‌ಐಎ ಪ್ರಕರಣ ಆರೋಪಿಗಳು!

ಬೆಂಗಳೂರು (ಜೂ.23): ಪ್ರೇಯಸಿ ಪವಿತ್ರಾ ಗೌಡಗೆ ಇನ್ಸ್‌ಟಾಗ್ರಾಮ್‌ನಲ್ಲಿ ಅಶ್ಲೀಲ ಸಂದೇಶ ಕಳಿಸಿದ್ದಾನೆಂಬ ವಿಚಾರಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ(Renuka swamy) ಎಂಬಾತನನ್ನ ಅಪಹರಿಸಿ  ಬರ್ಬರ ಹತ್ಯೆ ಮಾಡಿ ಮೋರಿಗೆ ಎಸೆದ ಪ್ರಕರಣದಲ್ಲಿ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ದರ್ಶನ್ ಹಾಗೂ ಗ್ಯಾಂಗ್ ಕೊನೆಗೂ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ.

ದರ್ಶನ್ ಸೇರಿ ಮೂವರು ಪರಪ್ಪನ ಅಗ್ರಹಾರದ ಮುಖ್ಯ ಜೈಲಿನಲ್ಲಿದ್ದಾರೆ. ಜೈಲಿನ ಮುಖ್ಯ ಭದ್ರತಾ ವಿಭಾಗದ ಕೊಠಡಿಯಲ್ಲಿ ದರ್ಶನ್ ಇದ್ದಾರೆ.  ಕೊಠಡಿಯಲ್ಲಿ ಪ್ರದೂಶ್, ವಿನಯ್, ಧನರಾಜ್ ಒಂದೇ ಕೊಠಡಿಯಲ್ಲಿದ್ದಾರೆ. 

Latest Videos

13 ವರ್ಷಗಳ ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ; ತಡರಾತ್ರಿವರೆಗೆ ಮಂಕಾಗಿ ಕುಳಿತ ದರ್ಶನ್!

ಭದ್ರತಾ ವಿಭಾಗದ ಕೊಠಡಿ ಹೇಗಿದೆ?

ಇನ್ನು ಭದ್ರತಾ ವಿಭಾಗದಲ್ಲಿ ಆರು ಕೊಠಡಿಗಳಿವೆ. ಅವು  ಸಾಮಾನ್ಯ ಕೈದಿಗಳಿರುವ ಕೊಠಡಿಗಳಂತಲ್ಲ. ಭಾರೀ ಭದ್ರತೆ ನಡುವೆ ಇರುವ ಕೊಠಡಿಗಳು. ಅಲ್ಲಿಗೆ ಸಾಮಾನ್ಯ ಕೈದಿಗಳು ಯಾರೂ ಪ್ರವೇಶ ಮಾಡಲಾಗುವುದಿಲ್ಲ. ಏಕೆಂದರೆ ಅಲ್ಲಿರೋರು ಸಾಮಾನ್ಯ ಕೈದಿಗಳಲ್ಲ. ಆರು ಕೊಠಡಿಗಳ ಪೈಕಿ 5 ಕೊಠಡಿಗಳಲ್ಲಿ ಎನ್‌ಐಎ ಪ್ರಕರಣ, ಬಾಂಬ್ ಸ್ಫೋಟದ ಆರೋಪಿಗಳಿದ್ದಾರೆ. ಇದೇ ಭದ್ರತಾ ಕೊಠಡಿಗಳಲ್ಲೇ ಒಂದು ಕೊಠಡಿ ದರ್ಶನ್‌ಗೆ ನೀಡಲಾಗಿದೆ. ಸಾಮಾನ್ಯ ಕೈದಿಗಳು ಈ ಕೊಠಡಿಯ ಸಮೀಪಕ್ಕೂ ಬರಲಾಗೊಲ್ಲ. ಭದ್ರತಾ ಸಿಬ್ಬಂದಿ ಹಾಗೂ ಕೈದಿಗಳಷ್ಟೇ ಅವಕಾಶವಿದೆ.

ಇನ್ನು ಕೊಠಡಿಯ ಒಳಗೆ ಅಟ್ಯಾಚ್ ಬಾತ್ ರೂಮ್, ಮಲಗಲು ಬೆಡ್ ಹಾಗೂ ಬೆಡ್‌ಶೀಟ್ ಸೌಲಭ್ಯವಿದೆ. ಆದರೆ ದರ್ಶನ್ ಇರುವ ಕೊಠಡಿಯಲ್ಲಿ ಯಾವುದೇ ಟಿವಿ ವ್ಯವಸ್ಥೆ ಇಲ್ಲ. ಓದಲು ನ್ಯೂಸ್ ಪೇಪರ್ ವ್ಯವಸ್ಥೆ ಇದೆ. ಇದರ ಹೊರತಾಗಿ ಕೊಠಡಿಯೊಳಗೆ ಬೇರೆ ಯಾವುದೇ ವ್ಯವಸ್ಥೆ ಇಲ್ಲ. ಒಂದು ವೇಳೆ ಯಾರಾದರೂ ಭೇಟಿಗೆ ಬಂದರೆ ಅವರನ್ನು ಸಿಬ್ಬಂದಿ ಕರೆದೊಯ್ದು ಭೇಟಿ ಮಾಡಿಸುತ್ತಾರೆ. ಭದ್ರತಾ ವಿಭಾಗದ ಸುತ್ತಮುತ್ತ ಯಾವಾಗಲೂ ಪೊಲೀಸ್ ಕಣ್ಗಾವಲಿದೆ. 

ಪರಪ್ಪನ ಅಗ್ರಹಾರ ಜೈಲು ಸೇರಿದ ಬಳಿಕ ತಡರಾತ್ರಿವರೆಗೆ ನಿದ್ದೆ ಮಾಡದ ದರ್ಶನ್. ಏನೋ ಚಡಪಡಿಕೆ, ಮಂಕಕಾಗಿದ್ದಂತೆ ಕಂಡುಬಂತು. ರಾತ್ರಿ ಜೈಲೂಟ ಮುದ್ದೆ, ಚಪಾತಿ, ಅನ್ನ ಸಾಂಬಾರು ಸೇವಿಸಿ ಮಲಗಿದ ದರ್ಶನ್ ಬಳಿಕ ಬೆಳಗ್ಗೆ ಆರೂವರೆಗೆಲ್ಲ ಎದ್ದು ನಿತ್ಯಕರ್ಮ ಮುಗಿಸಿ ಕಾಫಿ ಸೇವಿಸದೇ ಪಲಾವ್ ತಿಂದು ಮತ್ತೆ ಮೌನಕ್ಕೆ ಶರಣಾಗಿರುವ ನಟ ದರ್ಶನ್. 

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿದ್ದೆ ಮಾಡದೇ ರಾತ್ರಿಯಿಡೀ ಚಡಪಡಿಸಿದ ಪವಿತ್ರಾ ಗೌಡ! 

 ರೇಣುಕ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್(Darshan thugudeepa)  ಮತ್ತು ಮೂವರು ಸಹಚರ ಪೊಲೀಸ್‌ ಕಸ್ಟಡಿ ಅಂತ್ಯ ಹಿನ್ನೆಲೆ ಶನಿವಾರ ಕೋರ್ಟ್‌ಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಲಾಗಿತ್ತು. ನಗರದ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ದರ್ಶನ್ ಹಾಗೂ  ಆಪ್ತರಾದ ವಿನಯ್‌, ಪ್ರದೂಷ್‌ ಹಾಗೂ ಧನರಾಜ್‌ರನ್ನು ಶನಿವಾರ ಹಾಜರುಪಡಿಸಿದ್ದರು ಪೊಲೀಸರು. ವಿಚಾರಣೆ ಬಳಿಕ ಜುಲೈ 4ರವರೆಗೆ ದರ್ಶನ್ ಅಂಡ್ ಗ್ಯಾಂಗ್ ನ್ಯಾಯಾಂಗ ಬಂಧನಕ್ಕೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿತು. ಇದೀಗ ಹದಿಮೂರು ವರ್ಷಗಳ ಬಳಿಕ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್. 

click me!