ಸಂಸತ್ ಭದ್ರತಾ ವೈಫಲ್ಯ ಪ್ರಕರಣ; ಆರೋಪಿ ಮನೋರಂಜನ್ ಯಾರು, ಹಿನ್ನೆಲೆ ಏನು ? ಇಲ್ಲಿದೆ ಕಂಪ್ಲೀಟ್ ಮಾಹಿತಿ

Published : Dec 14, 2023, 10:18 AM ISTUpdated : Dec 14, 2023, 10:39 AM IST
ಸಂಸತ್ ಭದ್ರತಾ ವೈಫಲ್ಯ ಪ್ರಕರಣ; ಆರೋಪಿ ಮನೋರಂಜನ್ ಯಾರು, ಹಿನ್ನೆಲೆ ಏನು ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಸಾರಾಂಶ

ನೂತನ ಸಂಸತ್ತು ಭವನದಲ್ಲಿ ವೀಕ್ಷಕರ ಗ್ಯಾಲರಿಯಿಂದ ಸಭಾಂಗಣಕ್ಕೆ ನುಗ್ಗಿ ಸ್ಮೋಕ್ ಬಾಂಬ್ ಸಿಡಿಸಿ ಆತಂಕ ಸೃಷ್ಟಿಸಿದ ಆಗಂತುಕ ಮನೋರಂಜನ್ ಯಾರು ಅವನಿಗೆ ಪಾಸ್ ಸಿಕ್ಕಿದ್ದು ಹೇಗೆ? ಅವನ ಹಿನ್ನೆಲೆ ಏನು ಎಂದು ಇದೀಗ ಎಲ್ಲರನ್ನೂ ಕಾಡ್ತಿರೋ ಪ್ರಶ್ನೆ. ಆ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಬೆಂಗಳೂರು (ಡಿ.14):  ನೂತನ ಸಂಸತ್ತು ಭವನದಲ್ಲಿ ವೀಕ್ಷಕರ ಗ್ಯಾಲರಿಯಿಂದ ಸಭಾಂಗಣಕ್ಕೆ ನುಗ್ಗಿ ಸ್ಮೋಕ್ ಬಾಂಬ್ ಸಿಡಿಸಿ ಆತಂಕ ಸೃಷ್ಟಿಸಿದ ಆಗಂತುಕ ಮನೋರಂಜನ್ ಯಾರು ಅವನಿಗೆ ಪಾಸ್ ಸಿಕ್ಕಿದ್ದು ಹೇಗೆ? ಅವನ ಹಿನ್ನೆಲೆ ಏನು ಎಂದು ಇದೀಗ ಎಲ್ಲರನ್ನೂ ಕಾಡ್ತಿರೋ ಪ್ರಶ್ನೆ. ಆ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಸಂಸತ್ ದಾಳಿ ಬಳಿಕ ಮೈಸೂರಿನ ಮನೋರಂಜನ್ ಹಿನ್ನೆಲೆ ಹುಡುಕಾಟ ಶುರುಮಾಡಿದ ಪೊಲೀಸರು. ಮನೋರಂಜನ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿರುವ ಬಗ್ಗೆ ಈವರೆಗೂ ಮಾಹಿತಿ ಸಿಕ್ಕಿಲ್ಲ. ಇನ್ನು ಅವನ ಸೋಷಿಯಲ್ ಮೀಡಿಯಾ ಅಕೌಂಟ್ ಬಗ್ಗೆಯು ಹುಡುಕಾಟ ನಡೆಸಿದ್ದಾರೆ. ಸದ್ಯ ಆತನ ಸೋಷಿಯಲ್ ಮೀಡಿಯಾ ಅಕೌಂಟ್ ಕೂಡ ಈವರೆಗು ಪತ್ತೆಯಾಗಿಲ್ಲ. ಬೇರೆ ಹೆಸರಿನಲ್ಲಿ ಸೋಷಿಯಲ್ ಮೀಡಿಯಾ ಅಕೌಂಟ್ ಇದೆಯಾ ಎಂಬ ಬಗ್ಗೆಯು ಹುಡುಕಾಟ‌ ನಡೆಸಿರುವ ತನಿಖಾಧಿಕಾರಿಗಳು.ಸದ್ಯ ಮೈಸೂರು ಪೊಲೀಸರಿಗೆ ಈತನ ಪೂರ್ವಪರ ವಿಚಾರಿಸಿ ಯಾವುದೇ ದೆಹಲಿ ಪೊಲೀಸರಾಗಲಿ ಯಾರೂ ಕೂಡ ಸಂಪರ್ಕಮಾಡಿಲ್ಲ. ಆದರೂ ಆತನ ಹಿನ್ನೆಲೆ ಬಗ್ಗೆ ಹುಡುಕಾಟ ನಡೆಸುತ್ತಿರುವ ಪೊಲೀಸರು.

ಪಾಸ್ ಕೊಟ್ಟ ಪ್ರತಾಪ ಸಿಂಹಗೆ ಬಿಜೆಪಿ ವರಿಷ್ಠರು ಬುದ್ಧಿ ಹೇಳಲಿ: ಡಿಕೆ ಶಿವಕುಮಾರ

ದಾರಿ ತಪ್ಪಿದ್ದು ಎಲ್ಲಿ?

ಕ್ರಾಂತಿಕಾರಿ ವಿಚಾರಗಳನ್ನು, ಪುಸ್ತಕಗಳನ್ನು ಓದುತ್ತಿದ್ದರೂ ಒಂದೇ ಒಂದು ಹೋರಾಟದಲ್ಲೂ ಭಾಗಿಯಾಗದ ಮನೋರಂಜನ್ ಹೋರಾಟದಲ್ಲಿ ಭಾಗಿಯಾದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆತನ ವಿರುದ್ಧ ಕೇಸ್ ಕೂಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ. ಎಸ್‌ಎಫ್ಐ ಜೊತೆಗೆ ಗುರುತಿಸಿಕೊಂಡಿರುವ ಬಗ್ಗೆ ಮಾಹಿತಿಗಳು ಹರಿದಾಡುತ್ತಿವೆ. ಆದರೆ ಎಸ್‌ಎಫ್‌ಐ ಇದನ್ನು ನಿರಾಕರಿಸಿದೆ. ಮನೋರಂಜನ್‌ಗೂ ನಮಗೂ ನಂಟಿಲ್ಲ ಎಂದು ಹೇಳಿಕೆ ನೀಡಿರುವ ಎಸ್‌ಎಫ್‌ಐ.  ಯಾವ ಸಂಘಟನೆಗಳ ಜೊತೆಯು ಅಧಿಕೃತವಾಗಿ ಗುರುತಿಸಿಕೊಂಡಿರದ ಮನೋರಂಜನ್. ಹಾಗಾದ್ರೆ ಮನೋರಂಜನ್ ದಾರಿ ತಪ್ಪಿದ್ದು ಎಲ್ಲಿ?  ಕೀಳು ಪ್ರಚಾರದ ಆಸೆಗೆ ಹೇಯ ಕೃತ್ಯ ಎಸಗಿದನ ಮನೋರಂಜನ್?

ಪ್ರಯಾಣಗಳೆಲ್ಲ ರಹಸ್ಯ

ಮನೋರಂಜನ್ ಮುತ್ತಾತ ಪಟೇಲ್ ಈರೇಗೌಡ,  ತಾತ ರುದ್ರಪ್ಪಗೌಡ, ತಂದೆ ದೇವರಾಜೇಗೌಡ ಪಿರ್ತಾರ್ಜಿತ ಬೇಕಾದಷ್ಟಿದೆ. ತಂದೆ ಮಾಡಿದ ತೋಟವಿದೆ. ಆದರೆ ಅದೆಲ್ಲವನ್ನೂ ಬಿಟ್ಟು ಸಮಾಜ ಸುಧಾರಣೆಯ ಜಪ ಮಾಡುತ್ತಿದ್ದ ಮನೋರಂಜನ್. ಯಾವಾಗಲೂ ಪುಸ್ತಕ ಓದುವುದು ಸಮಾಜ ಸುಧಾರಣೆ ಮಾತಾಡುವುದು ಇದರಲ್ಲೇ ಮುಳುಗಿಹೋಗಿದ್ದ. ತಂದೆ ಮೂಲತಃ ಹಾಸನ ಜಿಲ್ಲೆ ಅರಕಲಗೂಡು ಮಲ್ಲಾಪುರ ಗ್ರಾಮದವರು. 
ಮಗನ ಓದಿಗಾಗಿಯೇ ಮೈಸೂರಿಗೆ ಬಂದಿದ್ದ ಕುಟುಂಬ.  15 ವರ್ಷಗಳಿಂದ ಮೈಸೂರಲ್ಲೇ ದೇವರಾಜೇಗೌಡ ವಾಸ ಮಾಡಲು ಶುರು ಮಾಡಿದರು. ಮೈಸೂರಿನ ಪ್ರತಿಷ್ಠಿತ ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯು ಶಿಕ್ಷಣ, ಸಂತ ಜೋಸೆಫ್ ಕಾಲೇಜಿನಲ್ಲಿ ಪ್ರೌಢ ವಿದ್ಯಾಭ್ಯಾಸ,  ಬೆಂಗಳೂರಿನ ಬಿಇಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್.  ಕಂಪ್ಯೂಟರ್ ಸೈನ್ಸ್​ನಲ್ಲಿ ಇಂಜಿನಿಯರಿಂಗ್ ಮಾಡಿರುವ ಮನೋರಂಜನ್. 2013-14ರಲ್ಲೇ ವಿದ್ಯಾಭ್ಯಾಸ ಮುಕ್ತಾಯಗೊಳಿಸಿದ್ದಾನೆ. ಆದರೆ ಓದು ಮುಗಿದರೂ ಕೆಲಸಕ್ಕೆ ಸೇರಲು ನಿರಾಸಕ್ತಿ. ಕ್ರಾಂತಿಕಾರಿಗಳ ಪುಸ್ತಕ ಓದಿನಲ್ಲೇ ಒಂದು ದಶಕ ಕಳೆದ ಆಸಾಮಿ. 34 ವರ್ಷವಾದರೂ ಮದುವೆಯಾಗಲು ನಿರಾಕರಣೆ. ಸಮಾಜ ಸುಧಾರಣೆಯ ಕನಸು ಹೊತ್ತಿದ್ದ ಹುಡುಗ ಮಾಡಿದ್ದು ಮಾತ್ರ ಘೋರ ಅಪರಾಧ. 

ಸಂಸತ್ತಿಗೆ ನುಗ್ಗಿದ ಆಗಂತುಕರನ್ನ ನಾನು, ಕಟೀಲ್ ಹಿಡಿದೆವು: ಸಂಸದ ಮುನಿಸ್ವಾಮಿ

ಕ್ರಾಂತಿಕಾರಿ ಪುಸ್ತಕಗಳೇ ಪ್ರೇರಣೆ.!

ಕಿಕ್ ಬಾಕ್ಸಿಂಗ್ ಸಹ ಮಾಡುವ ಮನೋರಂಜನ್. ಎಂಜಿನಿಯರಿಂಗ್ ಮುಗಿಸಿದ್ರೂ ನಿರುದ್ಯೋಗಿ ಆಗಿದ್ದ. ಕೆಲಸಕ್ಕೂ ಹೋಗದೆ, ಮದುವೆಯನ್ನೂ ಆಗದೆ ಒಬ್ಬಂಟಿಯಾಗಿದ್ದ. ಮನೆ ಸುತ್ತ -ಮುತ್ತಲಿನವರ ಯಾರೊಂದಿಗೂ ಬೆರೆಯದೇ ಅಪರಿಚಿತನಂತಿರುತ್ತಿದ್ದ. ಕೊಠಡಿ ಒಳಗೆ ಸೇರಿಕೊಂಡು ಪುಸ್ತಕ ಓದುತ್ತಿದ್ದ. ಆಗಾಗ ಬೆಂಗಳೂರು, ದೆಹಲಿಯಲ್ಲದೆ ವಿದೇಶಕ್ಕೂ ತೆರಳುತ್ತಿದ್ದ. ಪದೇ ಪದೇ ಬೆಂಗಳೂರಿಗೆ ಅಂತ ಹೇಳಿ ಹೋಗುತ್ತಿದ್ದ.
ಮನೆಗೆ ಬರುತ್ತಿದ್ದ ಪೋಸ್ಟ್ ಗಳನ್ನ ಬೇರೆ ವಿಳಾಸಕ್ಕೆ ವರ್ಗಾಯಿಸಿದ್ದ. ಬೆಂಗಳೂರಿನಲ್ಲಿ ತಾನು ಉಳಿದುಕೊಂಡಿದ್ದ ಕೊಠಡಿಗೆ ಬರುವಂತೆ ನೋಡಿಕೊಂಡಿದ್ದ ಮನೋರಂಜನ್ ವಿಳಾಸಗಳು ಬಳಸಿರೋದ್ರಲ್ಲೇ ಹಲವು ಅನುಮಾನಗಳು ಹುಟ್ಟಿಕೊಂಡಿವೆ. 

ಹಿಂದೆಯೂ ಸಂಸತ್ ಭವನಕ್ಕೆ ಮನೋರಂಜನ್ ಭೇಟಿ!

ಹಿಂದೆಯೂ ಹಳೇ ಸಂಸತ್ ಭವನಕ್ಕೆ ಹೋಗಿದ್ದ ಮನೋರಂಜನ್ ಆ ವೇಳೆಯೂ  ಸಂಸದ ಪ್ರತಾಪ ಸಿಂಹ ಅವರಿಂದ ಪಾಸ್ ಪಡೆದಿದ್ದ. ವಿಚಿತ್ರವೆಂದರೆ ಒಮ್ಮೆಯೂ ಪ್ರತಾಪ್ ಸಿಂಹರನ್ನು ಭೇಟಿ ಮಾಡಿಲ್ಲವೆಂಬುದು. ಕಳೆದ ಬಾರಿ ಪಾಸ್ ಪಡೆದು ಸಂಸತ್ ಭವನಕ್ಕೆ ಹೋಗಿದ್ದಾಗ ಏಕಾಂಗಿಯಾಗಿದ್ದ. ಆದರೆ ಈ ಬಾರಿ ಮೊನ್ನೆ ಸಂಸದರ ಕಚೇರಿಗೆ ತೆರಳಿ ಪಾಸ್ ಪಡೆದಿದ್ದ ಆರೋಪಿ ಜೊತೆಗೆ ದೆಹಲಿಯ ಫ್ರೆಂಡ್ ಎಂದು ಶರ್ಮಾ ಎಂಬಾತನಿಗೂ ಪಾಸ್ ಪಡೆದಿದ್ದ ಒಂದೇ ಪಾಸ್‌ನಲ್ಲಿ ಇಬ್ಬರು ಸಂಸತ್ತಿನೊಳಗೆ ಪ್ರವೇಶಿಸಿದ್ದ ಆರೋಪಿಗಳು.

ಮನೋರಂಜನ್ ಮನೆಮುಂದೆ ಪೊಲೀಸ್ ಕಾವಲು:

ಸಂಸತ್ ಭವನಕ್ಕೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣ ಬೆನ್ನಲ್ಲೇ ಮೈಸೂರು ಪೊಲೀಸರು ಮನೋರಂಜನ್ ನಿವಾಸಕ್ಕೆ ತೆರಳಿ ನಿನ್ನೆಯಿಂದ ಮನೆಮುಂದೆಯೇ ಕುಳಿತಿರೋ ಪೊಲೀಸರು.  ಮನೆಯಿಂದ ಹೊರ ಬಾರದ ಮನೋರಂಜನ್ ತಾಯಿ. ಹಾಗಾಗ್ಗೆ ಹೊರಗೆ ಬಂದು ಹೋಗುತ್ತಿರುವ ತಂದೆ ದೇವರಾಜು.
ಸದ್ಯ ಮನೋರಂಜನ್ ಮನೆ ಕಡೆಗೆ ಯಾವೊಬ್ಬರೂ ಸುಳಿಯುತ್ತಿಲ್ಲ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!