
ಮೈಸೂರು (ಡಿ.14): ಸಂಸತ್ತಿನೊಳಗೆ ವೀಕ್ಷಕರ ಗ್ಯಾಲರಿಯಿಂದ ಸಭಾಂಗಣಕ್ಕೆ ನುಗ್ಗಿ ದಾಂಧಲೆ ಮಾಡುವ ಮೂಲಕ ಕೆಲ ಕಾಲ ಆತಂಕ ಸೃಷ್ಟಿಸಿದ್ದ ಆಗಂತುಕರ ಪೈಕಿ ಮನರೋಂಜನ್ ಎಂಬಾತ ಮೈಸೂರಿನ ವಿಜಯನಗರ ನಿವಾಸಿಯಾಗಿದ್ದು, ಸಂಸದ ಪ್ರತಾಪ್ ಸಿಂಹರ ಬಳಿ ಅಪ್ಪನ ಪರಿಚಯ ಹೇಳಿಕೊಂಡು ಪಾಸ್ ಪಡೆದಿದ್ದ ದುರುಳ. ಪಾಸ್ ಪಡೆಯಲು ಎರಡು ಮೂರು ತಿಂಗಳಿಂದ ಸಂಸದ ಪ್ರತಾಪ ಸಿಂಹರ ಕಚೇರಿಗೆ ಅಲೆದಿರುವುದು ತಿಳಿದುಬಂದಿದೆ.
ಮನೋರಂಜನ್ ನೇರ ಪ್ರತಾಪ್ ಸಿಂಹಗೆ ಪರಿಚಯವಿಲ್ಲವಾದರೂ, ಮನೋರಂಜನ್ ತಂದೆ ದೇವರಾಜೇಗೌಡರ ಪರಿಚಯ ವಿಜಯನಗರ ನಿವಾಸಿಯಾಗಿದ್ದ ಸಾಮಾನ್ಯವಾಗಿ ತನ್ನ ಕ್ಷೇತ್ರದ ಮತದರನಾಗಿ ಮುಖ ಪರಿಚಯವಿದೆ. ಇದನ್ನೇ ಬಳಸಿಕೊಂಡು ದುರುಳ ಮನೋರಂಜನ್ ಅಪ್ಪನ ಹೆಸರು ಹೇಳಿಕೊಂಡು ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದಿದ್ದ. ಬಳಿಕ ಮೊನ್ನೆ ಮಧ್ಯಾಹ್ನ ದೆಹಲಿಯ ಸಂಸದರ ಕಚೇರಿಗೂ ಹೋಗಿದ್ದ ಮನೋರಂಜನ್.
ಪಾಸ್ ಕೊಟ್ಟ ಪ್ರತಾಪ ಸಿಂಹಗೆ ಬಿಜೆಪಿ ವರಿಷ್ಠರು ಬುದ್ಧಿ ಹೇಳಲಿ: ಡಿಕೆ ಶಿವಕುಮಾರ
ಮನೋರಂಜನ್ ಜೊತೆಗೆ ಸಾಗರ್ ಶರ್ಮಾನನ್ನು ಕರೆದುಕೊಂಡು ಹೋಗಿದ್ದ. ಸಾಗರ ಶರ್ಮಾ ತನ್ನ ಸಹೋದ್ಯೋಗಿ ಎಂದು ಸಂಸದರ ಕಚೇರಿ ಸಿಬ್ಬಂದಿಗೆ ಪರಿಚಯ ಮಾಡಿಸಿದ್ದ ಆರೋಪಿ. ಇದಾದ ಬಳಿಕ ಸಾಗರ್ ಶರ್ಮಾ ಹೆಸರಿನಲ್ಲಿ ಪಾಸ್ ಕೊಡುವಂತೆ ಕೇಳಿಕೊಂಡಿದ್ದ ಮನೋರಂಜನ್. ಪಾಸನ್ನು ಸಂಗ್ರಹ ವಸ್ತುವಾಗಿ ಇಟ್ಟುಕೊಳ್ಳಲು ಸಾಗರ್ ಶರ್ಮಾ ಇಷ್ಟ ಪಟ್ಟಿದ್ದಾರೆ. ಈ ಕಾರಣದಿಂದ ಅವರ ಹೆಸರಿನಲ್ಲಿ ಪಾಸ್ ಕೊಡಿ ಎಂದು ಮೊನ್ನೆ ಸಂಜೆ ಪಡೆದುಕೊಂಡಿದ್ದ ಮನೋರಂಜನ್. ಒಂದು ಪಾಸ್ ನಲ್ಲಿ ಇಬ್ಬರು ಸಂಸತ್ ಪ್ರವೇಶ ಮಾಡುವ ಅವಕಾಶ ಇದೆ. ಅದರಲ್ಲಿ ಒಂದು ಪಾಸ್ ನಲ್ಲಿ ಮನೋರಂಜನ್ ಹಾಗೂ ಸಾಗರ್ ಶರ್ಮ ಸಂಸತ್ ಪ್ರವೇಶ ಮಾಡಿದ್ದರು.
ತನಿಖೆಗೆ ಆದೇಶಿಸಿದ ಗೃಹ ಇಲಾಖೆ
ಲೋಕಸಭೆಯಲ್ಲಿ ಭಾರೀ ಭದ್ರತಾ ಲೋಪ ಸಂಭವಿಸಿದ್ದು, ಸಚಿವಾಲಯದ ಕೋರಿಕೆ ಮೇರೆ ಗೃಹ ಇಲಾಖೆ ತನಿಖೆಗೆ ಆದೇಶ ನೀಡಿದೆ.
ಸಿಆರ್‌ಪಿಎಫ್‌ನ ಡಿಜಿ ಅನೀಶ್ ದಯಾಳ್ ಸಿಂಗ್ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ ಜೊತೆಗೆ ಇತರ ಭದ್ರತಾ ಏಜೆನ್ಸಿಗಳ ಸದಸ್ಯರು ಮತ್ತು ತಜ್ಞರೊಂದಿಗೆ ವಿಚಾರಣೆ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಸಂಸತ್ತಿನ ಭದ್ರತೆಯ ಉಲ್ಲಂಘನೆಗೆ ಕಾರಣಗಳ ಬಗ್ಗೆ ತನಿಖೆ ನಡೆಸಲಿದೆ. ಲೋಪಗಳನ್ನು ಗುರುತಿಸಿ, ಮುಂದಿನ ಕ್ರಮವನ್ನು ಶಿಫಾರಸು ಮಾಡುವುದರ ಜೊತೆಗೆ ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಸಂಸತ್ತಿನಲ್ಲಿ ಭದ್ರತೆಯನ್ನು ಹೆಚ್ಚಿಸುವ ಸಲಹೆಗಳನ್ನು ಒಳಗೊಂಡಂತೆ ಶಿಫಾರಸುಗಳೊಂದಿಗೆ ತನ್ನ ವರದಿಯನ್ನು ಶೀಘ್ರದಲ್ಲಿ ಸಲ್ಲಿಕೆ ಮಾಡುವಂತೆ ಗೃಹ ಇಲಾಖೆ ಸೂಚನೆ ನೀಡಿದೆ.
ಸಂಸತ್ತಿಗೆ ನುಗ್ಗಿದ ಆಗಂತುಕರನ್ನ ನಾನು, ಕಟೀಲ್ ಹಿಡಿದೆವು: ಸಂಸದ ಮುನಿಸ್ವಾಮಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ