
ಮಂಗಳೂರು(ಡಿ.26): ವಿಧಾನ ಪರಿಷತ್‌ನಲ್ಲಿ(Vidhan Parishat) ಬಹುಮತದ ಕೊರತೆಯಿರುವ ಕಾರಣ ಮತಾಂತರ ನಿಷೇಧ ಮಸೂದೆಯನ್ನು ಸುಗ್ರೀವಾಜ್ಞೆ ರೂಪದಲ್ಲಿ ಜಾರಿಗೊಳಿಸಲಾಗುವುದು. ಈ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ(Kota Shrinivas Poojari) ತಿಳಿಸಿದ್ದಾರೆ.
ಶನಿವಾರ ಮಂಗಳೂರಿನಲ್ಲಿ(Mangaluru) ಸುದ್ದಿಗಾರರ ಜತೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆಯನ್ನು(Anti Conversion Bill) ವಿಧಾನಸಭೆಯಲ್ಲಿ(Assembly) ರಾಜ್ಯದ ಮತ್ತು ದೇಶದ ಜನ ಸಹಮತ ನೀಡುವಂತೆ ವ್ಯವಸ್ಥಿತವಾಗಿ ಮಂಡಿಸಿದ್ದೇವೆ. ಪ್ರಸ್ತುತ ಮೇಲ್ಮನೆಯಲ್ಲಿ ಬಹುಮತವಿಲ್ಲದ ಕಾರಣ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕಾಯ್ದೆ ಅನುಷ್ಠಾನ ಮಾಡಲಾಗುವುದು. ನೂತನ ವಿಧಾನ ಪರಿಷತ್ ಸದಸ್ಯರು ಪ್ರತಿಜ್ಞೆ ಸ್ವೀಕರಿಸಿದ ಬಳಿಕ ಮೇಲ್ಮನೆಯಲ್ಲಿ ಬಹುಮತ ಬರಲಿದ್ದು, ಆಗ ಮೇಲ್ಮನೆಯಲ್ಲಿ ಮಂಡನೆ ಮಾಡುತ್ತೇವೆ ಎಂದರು.
Anti Conversion Bill: ಮತಾಂತರ ನಿಷೇಧ, ಭಯಪಡುವ ಅಗತ್ಯವಿಲ್ಲ: ಸತೀಶ ಜಾರಕಿಹೊಳಿ
ಮತಾಂತರ ಕಾಯಿದೆಯನ್ನು ಎಲ್ಲ ಧರ್ಮ, ಜಾತಿಯವರು ಹೆಮ್ಮೆಯಿಂದ ಸ್ವಾಗತಿಸಬೇಕು. ಯಾಕೆಂದರೆ ಇದು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾದ ಸಮಸ್ಯೆಗಳಲ್ಲ. ಯಾವುದೇ ಪ್ರದೇಶದಲ್ಲಿ ಸಣ್ಣ ಸಮುದಾಯವೊಂದಿದ್ದರೆ ಆ ಧರ್ಮಕ್ಕೆ ಅನ್ಯಾಯವಾಗಬಾರದು ಎಂಬುದೂ ಸೇರಿ ವಂಚನೆ, ಬಲಾತ್ಕಾರ, ಮೋಸದ ಮೂಲಕ ವಿವಾಹ ಮಾಡಿಕೊಳ್ಳುವುದಾಗಿ ನಂಬಿಸುವ ಕೃತ್ಯಕ್ಕೆ ಕಡಿವಾಣ ಹಾಕಲು ಈ ಕಾಯ್ದೆ ಜಾರಿ ಮಾಡಲಾಗುವುದು ಎಂದರು.
ಓಟಿನ ಲಾಭಕ್ಕೆ ಮತಾಂತರ ವಿಧೇಯಕ: ಯು.ಟಿ.ಖಾದರ್
ಮಂಗಳೂರು: ರಾಜ್ಯ ಬಿಜೆಪಿ(BJP Government) ಸರ್ಕಾರವು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಮಂಡನೆ ಮಾಡಿದ್ದು ಜನರ ಉಪಯೋಗಕ್ಕಾಗಿ ಅಲ್ಲ, ಬದಲಿಗೆ ಓಟಿನ ಲಾಭಕ್ಕಾಗಿ ಎಂದು ಶಾಸಕ ಯು.ಟಿ. ಖಾದರ್(UT Khader) ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್‌ನಲ್ಲಿ ಬಹುಮತ ಇಲ್ಲದೆ ವಿಧೇಯಕ ಅಂಗೀಕಾರ ಆಗುವುದಿಲ್ಲ ಎನ್ನುವುದು ಗೊತ್ತಿದ್ದೂ ಮಂಡನೆ ಮಾಡಿದ್ದಾರೆ. ಅಲ್ಲದೆ, ಈ ವಿಧೇಯಕದ ವಿರುದ್ಧ ಯಾರೇ ನ್ಯಾಯಾಲಯದ(Court) ಮೆಟ್ಟಿಲೇರಿದರೂ ತಡೆಯಾಜ್ಞೆ ಸಿಗುತ್ತದೆ ಎನ್ನುವುದು ಗೊತ್ತಿದ್ದೂ ಮಾಡಿದ್ದಾರೆ. ಬಿಜೆಪಿ ಸರ್ಕಾರ ಈ ವಿಷಯ ಕೈಗೆತ್ತಿಕೊಂಡಿದೆ ಎನ್ನುವುದನ್ನು ಜನರಿಗೆ ಮೇಲ್ನೋಟಕ್ಕೆ ತೋರಿಸಲು ಮಾಡಿದ್ದಾರೆಯೇ ಹೊರತು ಜನರ ಬಗ್ಗೆ ನಿಜವಾದ ಕಾಳಜಿ ಇಲ್ಲ. ಜನರನ್ನು ದಾರಿ ತಪ್ಪಿಸುವ ಉದ್ದೇಶ ಮಾತ್ರ ಇದರಲ್ಲಿದೆ ಎಂದು ಆರೋಪಿಸಿದರು.
Anti Conversion Bill: ಓದದೇ ಸಹಿ ಹಾಕಿದೆ ಎನ್ನುವ ಸಿದ್ದು ಹೆಬ್ಬೆಟ್ಟಿನವರಾ?: ಸಿ.ಟಿ.ರವಿ ಪ್ರಶ್ನೆ
ಶಾಸಕರ ಗಮನಕ್ಕೇ ತಂದಿಲ್ಲ: ವಿಧೇಯಕದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡುವ ಮೊದಲು ಹಿಂದಿನ ದಿನವೇ ಶಾಸಕರ ಗಮನಕ್ಕೆ ತರಬೇಕಾಗುತ್ತದೆ. ಆದರೆ ಅಸೆಂಬ್ಲಿ ಅಜೆಂಡಾದಲ್ಲಿ ಈ ವಿಷಯ ನಮೂದಿಸದೆ, ಬರ- ಅತಿವೃಷ್ಟಿ ಚರ್ಚೆಯ ನಡುವೆ ಏಕಾಏಕಿ ಮಂಡನೆಗೆ ಮುಂದಾಗಿದ್ದರು. ವಿಧೇಯಕ ಮಂಡನೆಯಲ್ಲೂ ಅಸೆಂಬ್ಲಿ ನಿಯಮವನ್ನು ಮುರಿಯಲಾಗಿದೆ ಎಂದು ಖಾದರ್ ಹೇಳಿದರು.
ಕಾಂಗ್ರೆಸ್(Congress) ಮುಖಂಡರಾದ ಕೋಡಿಜಾಲ್ ಇಬ್ರಾಹಿಂ, ಸದಾಶಿವ ಉಳ್ಳಾಲ, ಮುಹಮ್ಮದ್ ಮೋನು, ದಿನೇಶ್ ಕುಂಪಲ, ಸುರೇಶ್ ಭಟ್ನಗರ, ಅಚ್ಚುತ ಗಟ್ಟಿ, ರೆಹಮಾನ್, ದೇವಣ್ಣ ಶೆಟ್ಟಿ, ಸಿರಾಜ್ ಇದ್ದರು.
ಲಿವಿಂಗ್ ಟುಗೆದರ್ ಒಕೆ, ಮದುವೆ ಬೇಡ ಯಾಕೆ?
ಬಿಜೆಪಿ ಸರ್ಕಾರ ವಧುವಿನ ಮದುವೆಯ ವಯಸ್ಸನ್ನು 18ರಿಂದ 21ಕ್ಕೆ ಏರಿಸಲು ಹೊರಟಿದ್ದು ಕೂಡ ಗೊಂದಲಕ್ಕೆ ಎಡೆ ಮಾಡಿದೆ. 18 ವರ್ಷ ವಯಸ್ಸು ದಾಟಿದ ಯುವತಿ ಲಿವಿಂಗ್ ಟುಗೆದರ್ ಮೂಲಕ ಯುವಕನ ಜೊತೆ ವಾಸಿಸಬಹುದು. ಆದರೆ ಅಷ್ಟೇ ಪ್ರಾಯದ ಯುವತಿಗೆ ಮದುವೆಯಾಗುವ ಅವಕಾಶ ಇಲ್ಲ ಎಂದರೆ ಏನರ್ಥ ಎಂದು ಯು.ಟಿ. ಖಾದರ್ ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ