ದೇಶ ಸಂಕಷ್ಟಕ್ಕೆ ಸಿಲುಕಿದಾಗ ಹೇಗೆ ಹೋರಾಡಬೇಕು ಅನ್ನೋದು ಕಾಂಗ್ರೆಸ್ ಜಗತ್ತಿಗೆ ತೋರಿಸಿದೆ: ಬಿಕೆ ಹರಿಪ್ರಸಾದ್

Published : May 07, 2025, 06:17 PM ISTUpdated : May 07, 2025, 06:26 PM IST
ದೇಶ ಸಂಕಷ್ಟಕ್ಕೆ ಸಿಲುಕಿದಾಗ ಹೇಗೆ ಹೋರಾಡಬೇಕು ಅನ್ನೋದು ಕಾಂಗ್ರೆಸ್ ಜಗತ್ತಿಗೆ ತೋರಿಸಿದೆ: ಬಿಕೆ ಹರಿಪ್ರಸಾದ್

ಸಾರಾಂಶ

'ಆಪರೇಷನ್ ಸಿಂಧೂರ್' ಅಡಿಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಿದ ಕ್ಷಿಪಣಿ ದಾಳಿಗೆ ರಾಜಕೀಯ ವಲಯದಿಂದ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಏರ್‌ಸ್ಟ್ರೈಕ್ ಸಂಬಂಧ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅವರು ಭಾರತೀಯ ಸೈನ್ಯದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ದೇಶದ ರಕ್ಷಣೆಗೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರು.

ಬೆಂಗಳೂರು (ಮೇ.6): 'ಆಪರೇಷನ್ ಸಿಂಧೂರ್' ಅಡಿಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಿದ ಕ್ಷಿಪಣಿ ದಾಳಿಗೆ ರಾಜಕೀಯ ವಲಯದಿಂದ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಏರ್‌ಸ್ಟ್ರೈಕ್ ಸಂಬಂಧ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅವರು ಭಾರತೀಯ ಸೈನ್ಯದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ದೇಶದ ರಕ್ಷಣೆಗೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರು.

ಪಾಕಿಸ್ತಾನದ ಮೇಲೆ ಭಾರತೀಯ ಸೈನಿಕರ ಪ್ರತಿದಾಳಿ ಕುರಿತಂತೆ ಮಾತನಾಡಿದ ಅವರು, ಭಾರತದ ಸೈನ್ಯದ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ. ಸಂಕಷ್ಟದ ಸಂದರ್ಭಗಳಲ್ಲಿ ಜಗತ್ತಿಗೆ ತನ್ನ ಶಕ್ತಿ ತೋರಿಸಿದೆ. ಸೇನಾಧಿಕಾರಿಗಳಿಗೆ ಅಧಿಕಾರ ನೀಡಿದ ನಂತರ ಪಾಕಿಸ್ತಾನದ ಹಲವೆಡೆ ಸ್ಟ್ರೈಕ್ ಮಾಡಲಾಗಿದೆ. ಆದರೆ, ಪುಲ್ವಾಮ ದಾಳಿಯ ನಂತರ ಸರಿಯಾದ ಕ್ರಮ ಕೈಗೊಂಡಿದ್ದರೆ ಪೆಹಲ್ಗಾಮ್ ದಾಳಿ ತಡೆಗಟ್ಟಬಹುದಿತ್ತು ಎಂದರು.

ಇದನ್ನೂ ಓದಿ: Operation Sindoor: ಮಾಕ್ ಡ್ರಿಲ್ ಬಗ್ಗೆ ಗೃಹ ಸಚಿವ ಕಳವಳ! ಅಧಿಕಾರಿಗಳಿಗೆ ಸೂಚಿಸಿದ್ದು ಏನು?

ದೇಶದ ಏಕತೆಗೆ ವಿಪಕ್ಷದ ಕೊಡುಗೆಯನ್ನು ಒತ್ತಿ ಹೇಳಿದ್ದು, 'ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮಹಾತ್ಮಾ ಗಾಂಧೀಜಿ ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ. ವಿಪಕ್ಷದಿಂದ ಬಿಜೆಪಿ ಪಾಠ ಕಲಿಯಬೇಕು. ಶತ್ರು ದೇಶಗಳಿಗೆ ಧೈರ್ಯ ಮಾಡದಂತೆ ಕಠಿಣ ಕ್ರಮ ಜರುಗಿಸಬೇಕು ಎಂದರು.

ಇದನ್ನೂ ಓದಿ: 'Abhi picture baki hai…' ಆಪರೇಷನ್ ಸಿಂಧೂರ್ ನಂತರ ಪಾಕ್‌ಗೆ ಮತ್ತೆ ಶಾಕ್ ಕೊಟ್ಟ ಮಾಜಿ ಸೇನಾ ಮುಖ್ಯಸ್ಥ!

ಮೋದಿ ವಿರುದ್ಧ ಟೀಕೆ:
ಕಾಂಗ್ರೆಸ್ ಶಾಂತಿ ಮಂತ್ರದ ಟ್ವೀಟ್ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಶಾಂತಿ ಮಂತ್ರ ಪ್ರಪಂಚಕ್ಕೆ‌ ಹೆಸರುವಾಸಿ. ಶಾಂತಿ ಎಲ್ಲರ ಇಚ್ಛೆಯಾಗಿರುತ್ತೆ. ಆದರೆ ಕಾಲು ಕೆರೆದು ಬಂದಾಗ. ಏನ್ ಮಾಡಬೇಕು ಅದನ್ನ ಇಂದಿರಾಗಾಂಧಿ ಅವರು ಮಾಡಿದ್ರು. ದೇಶದ ಜವಾಬ್ದಾರಿ ಹೊತ್ತಿರುವ ವಿಶ್ವಗುರು ಮೋದಿ ಈಗಾಗಲೇ ಅದನ್ನ ಮಾಡ್ತೇವೆ ಇದನ್ನ ಮಾಡ್ತೇವೆ ಎಂದು ಹೇಳಿದ್ದಾರೆ.  ಅವರು ಮಾಡಿದ ಮೇಲೆ ಮಾತಾಡ್ತೇನೆ ಎಂದರು. ಇದೇ ವೇಳೆ ಸರ್ವಪಕ್ಷದ‌ ಸಭೆ ಆದಾಗ ಪ್ರಧಾನಿ ಇರಬೇಕು. ಅದನ್ನ ಬಿಟ್ಟು ಬಾಂಬೆ, ಕೇರಳ ,ಬಿಹಾರ್‌ನಲ್ಲಿರೋದಲ್ಲ. ದೇಶದ ಜನರ ಪ್ರಾಣಹಾನಿಯಾಗಿದೆ. ಜವಾಬ್ದಾರಿಯಿಂದ ಪ್ರದಾನಿ ಇರಬೇಕು ಎಂದು ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅರ್ಹತೆ ಇದ್ದರೂ, ಇಲ್ಲದಿದ್ದರೂ ಹುದ್ದೆಗಳು ಸಿಗುತ್ತವೆ: ಸಚಿವ ಚಲುವರಾಯಸ್ವಾಮಿ ಹೇಳಿದ್ದೇನು?
ರಾಜ್ಯ ಸರ್ಕಾರದ ಬಳಿ ಹಣ ಇಲ್ಲ, ನೀವೇ ರೈಲ್ವೆ ಯೋಜನೆ ಮುಗಿಸಿ: ಕೇಂದ್ರ ಸಚಿವ ವಿ.ಸೋಮಣ್ಣ