Operation Sindoor: ಮಾಕ್ ಡ್ರಿಲ್ ಬಗ್ಗೆ ಗೃಹ ಸಚಿವ ಕಳವಳ! ಅಧಿಕಾರಿಗಳಿಗೆ ಸೂಚಿಸಿದ್ದು ಏನು?

Published : May 07, 2025, 05:41 PM ISTUpdated : May 07, 2025, 05:48 PM IST
Operation Sindoor: ಮಾಕ್ ಡ್ರಿಲ್ ಬಗ್ಗೆ ಗೃಹ ಸಚಿವ ಕಳವಳ! ಅಧಿಕಾರಿಗಳಿಗೆ ಸೂಚಿಸಿದ್ದು ಏನು?

ಸಾರಾಂಶ

ಅಮಾಯಕ ಜನರನ್ನು ಮಕ್ಕಳನ್ನು ಕೊಂದಿರುವುದನ್ನು ನೆನಪಿಸಿಕೊಂಡರೆ. ಸಿಟ್ಟು ಬಾರದೇ ಇರಲ್ಲ. ವಿಶೇಷವಾಗಿ ಗಡಿ ಕಾಯುವವರು ಇವೆಲ್ಲವನ್ನೂ ಸಹಿಸಿಕೊಂಡಿದ್ದರು. ಆದರೀಗ ಪಹಲ್ಗಾಂ ದಾಳಿಗೆ ಬಳಿಕ ಪ್ರತಿದಾಳಿ ನಡೆಸಿ ಟೆರರಿಸ್ಟ್ ಕ್ಯಾಂಪ್‌ಗಳನ್ನ ಹೊಡೆದುರುಳಿಸಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದರು.

ಬೆಂಗಳೂರು (ಮೇ.6): ಅಮಾಯಕ ಜನರನ್ನು ಮಕ್ಕಳನ್ನು ಕೊಂದಿರುವುದನ್ನು ನೆನಪಿಸಿಕೊಂಡರೆ. ಸಿಟ್ಟು ಬಾರದೇ ಇರಲ್ಲ. ವಿಶೇಷವಾಗಿ ಗಡಿ ಕಾಯುವವರು ಇವೆಲ್ಲವನ್ನೂ ಸಹಿಸಿಕೊಂಡಿದ್ದರು. ಆದರೀಗ ಪಹಲ್ಗಾಂ ದಾಳಿಗೆ ಬಳಿಕ ಪ್ರತಿದಾಳಿ ನಡೆಸಿ ಟೆರರಿಸ್ಟ್ ಕ್ಯಾಂಪ್‌ಗಳನ್ನ ಹೊಡೆದುರುಳಿಸಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದರು.

ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ಇಂದು ಪ್ರತಿದಾಳಿ ನಡೆಸಿದ ಸಂಬಂಧ ಮತ್ತು ಮಾಕ್ ಡ್ರಿಲ್ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಭಾರತ ಸರ್ಕಾರ ರಾತ್ರಿ 1:30ಕ್ಕೆ ಏರ್ ಸ್ಟ್ರೈಕ್ ನಡೆಸಿ, ಉಗ್ರರ ಕ್ಯಾಂಪ್‌ಗಳನ್ನು ಗುರಿಯಾಗಿಸಿದೆ. ಆದರೆ, ಎಷ್ಟು ಜನ ಸತ್ತರು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ಅವರು ತಿಳಿಸಿದರು.

ಇದನ್ನೂ ಓದಿ: Operation Sindoor: ಭಾರತದ ಪ್ರತಿದಾಳಿಗೆ ಚಂದ್ರಶೇಖರ್ ಅಜಾದ್ ಹೇಳಿದ್ದೇನು? ಉತ್ತರ ಪ್ರದೇಶದಲ್ಲಿ 'ರೆಡ್ ಅಲರ್ಟ್ ಯಾಕೆ?

ಯುದ್ಧದ ಛಾಯೆ ಭಾರತ ಆವರಿಸಿದೆ:
ಪಾಕಿಸ್ತಾನದ ಮೇಲೆ ದಾಳಿ ಬಳಿಕ ಇದೀಗ ಯುದ್ಧದ ಛಾಯೆ ಇಡೀ ಭಾರತವನ್ನು ಆವರಿಸಿದೆ. ಈ ಸಂದರ್ಭದಲ್ಲಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಕೇಂದ್ರ ಸರ್ಕಾರ ತುರ್ತು ಸಂದರ್ಭದಲ್ಲಿ ನಾಗರಿಕರು ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಕುರಿತು ಮಾಕ್ ಡ್ರಿಲ್ ನಡೆಸಲು ಎಲ್ಲ ರಾಜ್ಯಗಳಿಗೆ ಸೂಚಿಸಿದೆ. ಈ ಡ್ರಿಲ್‌ನಲ್ಲಿ ತುರ್ತು ಸಂದರ್ಭದಲ್ಲಿ ನಾಗರಿಕರನ್ನು ರಕ್ಷಿಸುವ ವಿಧಾನ ಮತ್ತು ಅವರ ಜವಾಬ್ದಾರಿಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ.

244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್: 
ಕೇಂದ್ರ ಸರ್ಕಾರ ದೇಶಾದ್ಯಂತ 244 ಜಿಲ್ಲೆಗಳನ್ನು ಗುರಿಯಾಗಿಸಿದ್ದು, ಇವುಗಳಲ್ಲಿ ಅಣೆಕಟ್ಟುಗಳು, ಕೈಗಾರಿಕೆಗಳು, ಜನಸಂದಣಿ ಪ್ರದೇಶಗಳು ಸೇರಿವೆ. ಕರ್ನಾಟಕದಲ್ಲಿ ಬೆಂಗಳೂರು, ರಾಯಚೂರು, ಕಾರವಾರ ಜಿಲ್ಲೆಗಳನ್ನು ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ ನೇವಿ, ಕಾರ್ಖಾನೆಗಳು ಮತ್ತು ಕಂಪನಿಗಳಿರುವುದರಿಂದ ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಲು ಇಂದು ಮಾಕ್ ಡ್ರಿಲ್ ನಡೆಯುತ್ತಿದೆ.

ಗೃಹ ಸಚಿವರ ಆತಂಕ: 
ಮಾಕ್ ಡ್ರಿಲ್‌ಗಳನ್ನು ನಾನು ಗಮನಿಸಿದೆ. ಆದರೆ, ಇವು ಇನ್ನಷ್ಟು ವೇಗವಾಗಿ ನಡೆಯಬೇಕು. ಒಂದು ಕಟ್ಟಡದಿಂದ ಜನರನ್ನು ಏಣಿಯ ಮೂಲಕ ಇಳಿಸಲು 10 ನಿಮಿಷ ಬೇಕಾಯಿತು. ಇಷ್ಟು ಸಮಯ ತೆಗೆದುಕೊಂಡರೆ ಪ್ರಾಣ ರಕ್ಷಣೆ ಕಷ್ಟ. ರಕ್ಷಣಾ ಕಾರ್ಯವನ್ನು ಇನ್ನಷ್ಟು ವೇಗಗೊಳಿಸಬೇಕು' ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಭರವಸೆ ನೀಡಿದ್ದಾರೆ. 

: ಇದನ್ನೂ ಓದಿ: 'Abhi picture baki hai…' ಆಪರೇಷನ್ ಸಿಂಧೂರ್ ನಂತರ ಪಾಕ್‌ಗೆ ಮತ್ತೆ ಶಾಕ್ ಕೊಟ್ಟ ಮಾಜಿ ಸೇನಾ ಮುಖ್ಯಸ್ಥ!

ನಾಗರಿಕರಿಗೆ ಕರೆ: 
ಗೃಹ ಸಚಿವರು ತುರ್ತು ಸಂದರ್ಭಗಳಲ್ಲಿ ಜಾಗೃತರಾಗಿರಲು ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲು ನಾಗರಿಕರಿಗೆ ಕರೆ ನೀಡಿದರು. ಪೊಲೀಸ್ ಇಲಾಖೆ ವತಿಯಿಂದ ಇಂಡಸ್ಟ್ರಿಯಲ್ ಪೋರ್ಸ್ ಇದೆ. ಏರ್ಪೋರ್ಟ್ ಸೇರಿದಂತೆ ತುಂಬಾ ಜನ ಸೇರೋ ಕಡೆ  ನಿಯೋಜನೆ ಮಾಡಿಕೊಳ್ಳಲಾಗಿದೆ. ಅದರಲ್ಲೂ ಡಿಫೆನ್ಸ್‌ ಏರಿಯಾಗಳಲ್ಲಿ ಅವರೇ ಸಿಬ್ಬಂದಿ ಹಾಕಿಕೊಂಡಿದ್ದಾರೆ. ಇವತ್ತು 3 ಜಿಲ್ಲೆಗಳಲ್ಲೂ ಮಾಕ್ ಡ್ರಿಲ್ ಮಾಡಲಾಗಿದೆ. ಇವತ್ತಿಗೆ ಮಾತ್ರ ಸದ್ಯಕ್ಕೆ ಮಾಕ್ ಡ್ರಿಲ್ ಮಾಡಲಾಗಿದೆ. ಅಗತ್ಯ ಬಿದ್ರೆ ಮತ್ತೊಮ್ಮೆ ಮಾಕ್ ಡ್ರಿಲ್ ಮಾಡಲಾಗುತ್ತದೆ. ನಿನ್ನೆ ರಾತ್ರಿ ಟೆರರಿಸ್ಟ್ ಉಗ್ರತಾಣಗಳ ಮೇಲೆ ದಾಳಿ ಆಗಿದೆ. ಒಂಭತ್ತು ಕಡೆ ಏರ್ ಸ್ಟ್ರೈಕ್ ಮಾಡಿದ್ದಾರೆ. ಭಾರತೀಯರಾಗಿ ನಾವೆಲ್ಲ ಇದನ್ನು ಸ್ವಾಗತಿಸಿದ್ದೇವೆ. ಪಕ್ಷಾತೀತವಾಗಿ ಕೇಂದ್ರ ಹಾಗೂ ಸೈನಿಕರ ಜೊತೆಗೆ ಇರಬೇಕು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಗಲಕೋಟೆ: ದಾಸೋಹ ಚಕ್ರವರ್ತಿ, ಬಂಡಿಗಣಿ ಮಠದ ದಾನೇಶ್ವರ ಸ್ವಾಮೀಜಿ ಲಿಂಗೈಕ್ಯ!
ಬಾರ್ ಆಗಿ ಮಾರ್ಪಟ್ಟ KSRTC ಬಸ್: ಪ್ರಯಾಣದ ಮಧ್ಯೆಯೇ ಮದ್ಯ ಸೇವನೆ!