Nov 24, 2018, 3:53 PM IST
ಕರ್ನಾಟಕ ಪೊಲೀಸರು ಅಸಾಧ್ಯವಾದ ಕೇಸ್‌ಗಳನ್ನು ಬೇಧಿಸಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಆದರೆ, ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿ ಮಾತ್ರ ಸಂಕಷ್ಟ ಸಿಲುಕಿದ್ದಾರೆ. ಠಾಣೆಗಳಲ್ಲಿ ಪ್ರತ್ಯೇಕ ಶೌಚಾಲಯ, ಮಗುವಿಗೆ ಎದೆಹಾಲು ಉಣಿಸಲು ಪ್ರತ್ಯೇಕ ಕೊಠಡಿ ಇಲ್ಲ ಎಂದು ಅರೋಪಿಸಿದ್ದಾರೆ. ಅಲ್ಲದೇ ಕಡ್ಡಾಯವಾಗಿ ಪ್ಯಾಂಟ್ ಶರ್ಟ್ ಧರಿಸಬೇಕು ಎಂಬುವುದು ಮಹಿಳಾ ಪೊಲೀಸರಿಗೆ ತಲೆನೋವಾಗಿದೆ.
ಪ್ರತಿದಿನ ಪ್ಯಾಂಟ್ ಶರ್ಟ್ ಧರಿಸಿದಾಗ ಮುಜುಗರವಾಗುತ್ತದೆ. 35 ವರ್ಷದ ನಂತರದ ಮಹಿಳೆಯರಲ್ಲಿ ಶಸ್ತ್ರ ಚಿಕಿತ್ಸೆಯಾಗಿ, ಬಿಳಿ ಮುಟ್ಟಿನ ತೊಂದರೆ ಇರುವವರಿಗೆ ಪ್ಯಾಂಟ್ ಶರ್ಟ್ ಧರಿಸಿ ಕರ್ತವ್ಯ ಕಷ್ಟವಾಗುತ್ತದೆ. ಗರ್ಭಕೋಶದ ತೊಂದರೆ ಹಾಗೂ ಪೈಲ್ಸ್ ಸಮಸ್ಯೆ ಇರುವವರು ಪ್ಯಾಂಟ್ ಶರ್ಟ್ ಧರಿಸುವುದು ಕಷ್ಟವಾಗುತ್ತದೆ. ಪ್ಯಾಂಟ್ ಶರ್ಟ್ ಧರಿಸಿ ಮುಷ್ಕರ ವೇಳೆ ಕೆಲಸ ಮಾಡುವುದು ಕಷ್ಟವಾಗುತ್ತೆ ಎಂದು ನೊಂದ ಮಹಿಳಾ ಪೊಲೀಸರಿಂದ ರಾಜ್ಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ ಸ್ಪಂದಿಸಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮೀ ಬಾಯಿ ನಿಯಮ ಸಡಿಲಿಸುವಂತೆ ಡಿಜಿಪಿಗೆ ಪತ್ರ ಬರೆದಿದ್ದಾರೆ. ಮಹಿಳಾ ಪೊಲೀಸರ ಕಣ್ಣೀರ ಕಥೆ ಬಗ್ಗೆ ಸುವರ್ಣನ್ಯೂಸ್ ಸವಿವರವಾಗಿ ವರದಿ ಮಾಡಿತ್ತು.