ಶಿವಮೊಗ್ಗದಿಂದ ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷ ನಾಪತ್ತೆ, ಹುಬ್ಬಳ್ಳಿಯಲ್ಲಿ ಪತ್ತೆ: ಗಣ್ಯರ ಹೆಸರು ಬಹಿರಂಗ

By Sathish Kumar KH  |  First Published Jul 22, 2023, 11:22 PM IST

ಶಿವಮೊಗ್ಗದಿಂದ ಕಾಣೆಯಾಗಿದ್ದ ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷ ಪ್ರಭಾಕರ್‌ ಮೂರು ದಿನದ ಬಳಿಕ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾರೆ. ಆದರೆ, ಹಲವರ ಹೆಸರು ಬಾಯಿ ಬಿಟ್ಟಿದ್ದಾರೆ.


ಶಿವಮೊಗ್ಗ (ಜು.22): ಸರ್ಕಾರದ ವಿರುದ್ಧ ಹಳೆಯ ಪಿಂಚಣಿ ನೀಡುವಂತೆ ಒತ್ತಾಯಿಸಿ ಹೋರಾಟ ಮಾಡಿದ್ದ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್‌) ನೌಕರರ ಸಂಘದ ಅಧ್ಯಕ್ಷ ಕಳೆದ ಆರು ತಿಂಗಳಿಂದ ಸಂಬಳ ಆಗಿಲ್ಲವೆಂದು ಮನನೊಂದು ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಸೇರಿ ಮೂವರ ಹೆಸರು ಬರೆದಿಟ್ಟು ನಾಪತ್ತೆಯಾಗಿದ್ದರು. ಶಿವಮೊಗ್ಗದಿಂದ ನಾಪತ್ತೆ ಆಗಿದ್ದ ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾರೆ. ಈ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.

ಹೊಸ ಪಿಂಚಣಿ ಯೋಜನೆಯ ನೌಕರರ ಸಂಘದ ತಾಲೂಕು ಅಧ್ಯಕ್ಷ ಪ್ರಭಾಕರ್ ಜು.19 ರಂದು ಬೆಳಿಗ್ಗೆ 7.45ಕ್ಕೆ ವಾಟ್ಸಪ್ ಗ್ರೂಪ್ ನಲ್ಲಿ ಸಂದೇಶವೊಂದನ್ನ ಹರಿ ಬಿಟ್ಟು ನಾಪತ್ತೆಯಾಗಿದ್ದರು. ಆದರೆ, ಮೂರು ದಿನಗಳ ಪೊಲೀಸರ ಕಾರ್ಯಾಚರಣೆಯಿಂದಾಗಿ ನಾಪತ್ತೆ ಪ್ರಕರಣ ಸುಖಾಂತ್ಯವಾಗಿದೆ. ನಾಪತ್ತೆಯಾಗಿದ್ದ ಪ್ರಭಾಕರ್ ಅವರನ್ನು ಹುಬ್ಬಳ್ಳಿಯಲ್ಲಿ ಪತ್ತೆ ಹಚ್ಚಿ ಪೊಲೀಸರು ವಾಪಸ್‌ ಶಿವಮೊಗ್ಗಕ್ಕೆ ಕರೆತಂದಿದ್ದಾರೆ. ಶಿವಮೊಗ್ಗದ ಸೈಬರ್ ಕ್ರೈಂ ಠಾಣೆಯ ಪೊಲೀಸರ ಕಾರ್ಯಾಚರಣೆ ನಡೆಸಿದ್ದು, ಯಶಸ್ವಿಯಾಗಿದೆ. 

Latest Videos

undefined

ಕೊಡಗಿನಲ್ಲಿ ಮತ್ತೆ ಭೂ ಕುಸಿತ ಭೀತಿ: ಐದು ದಿನಗಳ ಭರ್ಜರಿ ಮಳೆಗೆ ಧರೆಗುರುಳಿದ ಮರ, ವಿದ್ಯುತ್‌ ಕಂಬಗಳು

ಗಣ್ಯರ ಹೆಸರು ಬರೆದಿಟ್ಟು ಪರಾರಿ: ಇನ್ನು ಪ್ರಭಾಕರ್‌ ಅವರು ನಾಪತ್ತೆ ಆಗುವ ಮುನ್ನ ವಾಟ್ಸಾಪ್‌ ಸಂದೇಶದಲ್ಲಿ ಕರ್ನಾಟಕ ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಸೇರಿದಂತೆ ಇತರೆ ಮೂವರ ಹೆಸರು ಬರೆದಿದ್ದರು. ಜೊತೆಗೆ, ಗಣ್ಯರ ಹೆಸರುಗಳನ್ನು ಬರೆದು ಬದುಕಿಗೆ ವಿದಾಯ ಹೇಳುತ್ತೇನೆ ಎಂದು ಸ್ನೇಹಿತರಿಗೆ ವಾಟ್ಸಪ್ ಸಂದೇಶ ಕಳುಹಿಸಿದ್ದರು. ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿ ಕೊಂಡಿದ್ದ ಹಿನ್ನೆಲೆ ಪತ್ನಿ ದೀಪಾ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಳೆದ 6 ತಿಂಗಳನಿಂದ ಸಂಬಳವಾಗಿಲ್ಲವೆಂದು ಮನ ನೊಂದು ನಾಪತ್ತೆಯಾಗಿದ್ದಾರೆ ಎಂದು  ದೂರು ದಾಖಲಿಸಿದ್ದರು. ಪ್ರಭಾಕರ್ ಮನೆ ಬಿಟ್ಟು ಹೋಗುವಾಗ ಕಾರಿನಲ್ಲಿ ತೆರಳಿದ್ದರು. ಉಡುಪಿ, ಮಂಗಳೂರಿಗೆ ತೆರಳಿದ್ದ ಪ್ರಭಾಕರ್ ಹುಬ್ಬಳ್ಳಿಯಲ್ಲಿ ಮೊಬೈಲ್ ಆನ್ ಮಾಡಿದಾಗ ಪತ್ತೆಯಾಗಿದ್ದಾರೆ. 

ನೈತಿಕ ಪೊಲೀಸ್‌ಗಿರಿ: 18 ಗಂಟೆಯೊಳಗೆ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು: ಮಂಗಳೂರು (ಜು.22): ರಾಜ್ಯದ ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್‌ಗಿರಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ನಿನ್ನೆ ರಾತ್ರಿ ವೇಳೆ ವೈದ್ಯಕೀಯ ಶಿಕ್ಷಣ ಪಡೆಯುವ ನಾಲ್ವರು ವಿದ್ಯಾರ್ಥಿನಿಯರು ಹಾಗೂ ಇಬ್ಬರು ವಿದ್ಯಾರ್ಥಿಗಳು ಬೈಕ್‌ನಲ್ಲಿ ಹೋಗುವಾಗ, ಅವರನ್ನು ಹಿಂಬಾಲಿಸಿಕೊಂಡು ಹೋಗಿ ಅದರಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ ಮಾಡಲಾಗಿತ್ತು. ಹೀಗೆ, ನೈತಿಕ ಪೊಲೀಸ್‌ಗಿರಿ ಮಾಡಿ ಪರಾರಿ ಆಗಿದ್ದವರ ಮೇಲೆ ದೂರು ನೀಡಿದ ಬೆನ್ನಲ್ಲೇ 18 ಗಂಟೆಗಳ ಒಳಗಾಗಿ, ಆರೋಪಿಗಳನ್ನು ಪೊಲೀಸರು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ.

ನೈತಿಕ ಪೊಲೀಸ್‌ಗಿರಿ ನಡೆಸಿದ 18 ಗಂಟೆಯೊಳಗೆ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

ಮಂಗಳೂರಿನ ಬಿಜೈ ಕಾಪಿಕಾಡ್ ಬಳಿ ನಿನ್ನೆ ರಾತ್ರಿ ವೇಳೆ ನೈತಿಕ ಪೊಲೀಸ್‌ಗಿರಿ ಪ್ರಕರಣ ನಡೆದಿತ್ತು. ಈ ಸಂಬಂಧವಾಗಿ ಮಂಗಳೂರು ಪೊಲೀಸರು ಇಬ್ಬರು ಆರೋಪಿಗಳ ಬಂಧಿಸಿದ್ದಾರೆ. ಅಳಪೆ ನಿವಾಸಿ ದೀಕ್ಷಿತ್ (32) ಹಾಗೂ ಲಾಯ್ಡ್ ಪಿಂಟೋ (32) ಬಂಧಿತರು ಆಗಿದ್ದಾರೆ. ಅವರು ನೈತಿಕ ಪೊಲೀಸ್ಗಿರಿ ಕೃತ್ಯಕ್ಕೆ ಬಳಸಿದ ಸ್ಕೂಟರ್ ಮತ್ತು  ಮೊಬೈಲ್ ಪೋನ್ ವಶಕ್ಕೆ ಪಡೆಯಲಾಗಿದೆ. ಮಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಲಾಗಿತ್ತು. ಬೀಚ್ ತೆರಳಿದ್ದ ವಿದ್ಯಾರ್ಥಿಗಳನ್ನು ಹಿಂಬಾಲಿಸಿ ಬಂದು ಹಲ್ಲೆ ನಡೆಸಿದ್ದರು.

click me!