ಹೆಚ್ಚಿದ ಪ್ರಯಾಣಿಕರ ಬೇಡಿಕೆ, ಯಶವಂತಪುರ-ಮುರ್ಡೇಶ್ವರ ವಿಶೇಷ ರೈಲು ಅವಧಿ ವಿಸ್ತರಣೆ

Published : Jul 22, 2023, 08:53 PM IST
ಹೆಚ್ಚಿದ ಪ್ರಯಾಣಿಕರ ಬೇಡಿಕೆ, ಯಶವಂತಪುರ-ಮುರ್ಡೇಶ್ವರ ವಿಶೇಷ ರೈಲು ಅವಧಿ ವಿಸ್ತರಣೆ

ಸಾರಾಂಶ

ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ವಾರಾಂತ್ಯದ ಯಶವಂತಪುರ-ಮುರ್ಡೇಶ್ವರ ನಡುವೆ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್‌  ರೈಲುಗಳ ಸೇವೆಯ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಬೆಂಗಳೂರು (ಜು.22): ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ವಾರಾಂತ್ಯದ ಯಶವಂತಪುರ-ಮುರ್ಡೇಶ್ವರ ನಡುವೆ ಸಂಚರಿಸುವ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ (06563/06564) ರೈಲುಗಳ ಸೇವೆಯ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಪ್ರತಿ ಶನಿವಾರ ಯಶವಂತಪುರ ನಿಲ್ದಾಣದಿಂದ ಹೊರಡುವ (06563) ಯಶವಂತಪುರ-ಮುರ್ಡೇಶ್ವರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಆ. 5ರಿಂದ 26 ರವರೆಗೆ ವಿಸ್ತರಿಸಲಾಗುತ್ತಿದೆ. ಅದರಂತೆ ಪ್ರತಿ ಭಾನುವಾರ ಮುರ್ಡೇಶ್ವರದಿಂದ ಹಿಂದಿರುಗುವ ಹೊರಡುವ (06564) ಈ ರೈಲು ಆ.6ರಿಂದ 27ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಜು. 29 ಹಾಗೂ 30ರವರೆಗೆ ಸಂಚಾರಿಸುವ ಬಗ್ಗೆ ತಿಳಿಸಲಾಗಿತ್ತು.

ಕೇವಲ 35 ಪಾಸ್‌ ಅಂಕ ಗಳಿಸಿದ ತುಷಾರ್ ಸುಮೇರಾ ಐಎಎಸ್ ಅಧಿಕಾರಿ!

ರೈಲ್ವೆ ಪ್ರಯಾಣ ವಿನಾಯಿತಿ ಮುಂದುವರೆಸಲು ಒತ್ತಾಯ
ಬಾಗಲಕೋಟೆ: ಈ ಹಿಂದೆ ದೇಶದ ರೈಲುಗಳಲ್ಲಿ ಹಿರಿಯ ನಾಗಕರಿಗೆ ಹಾಗೂ ಅಂಗವಿಕಲರಿಗೆ ರೈಲುಪ್ರಯಾಣ ದರದಲ್ಲಿ ವಿನಾಯತಿ ನೀಡಲಾಗಿತ್ತು. ಆದರೆ ಇತ್ತೀಚೆಗೆ ರೈಲು ಇಲಾಖೆ ಈ ವಿನಾಯತಿಗಳನ್ನು ರದ್ದುಗೊಳಿಸಿದೆ. ಇದರಿಂದ ವಯೋವದ್ಧರು, ಅಂಗವಿಕಲರು ತುಂಬಾ ತೊಂದರೊಳಗಾಗಿದ್ದಾರೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ಎ.ಎ.ದಂಡಿಯಾ ತಿಳಿಸಿದ್ದಾರೆ. ಈ ಕುರಿತು ವಯೋವದ್ಧರು, ಅಂಗವಿಕಲರು ರೈಲು ಇಲಾಖೆಗೆ ಹಾಗೂ ರೈಲು ಮಂಡಳಿಯವರಿಗೆ ಮನವಿಯನ್ನು ಸಲ್ಲಿಸಿದ್ದರು. ರೈಲು ಮಂಡಳಿ ಇದನ್ನು ಗಂಭೀರವಾಗಿ ಪರಿಗಣಿಸಿ ರೈಲು ಮಂತ್ರಿಗಳಿಗೆ ಸವಿಸ್ತಾರವಾದ ವರದಿಯನ್ನು ಸಲ್ಲಿಸಿ ವಿನಾಯತಿ ನೀಡಲು ವಿನಂತಿಸಿಕೊಂಡಿತ್ತು. ಇದೇ ವರ್ಷ ಮಾಚ್‌ರ್‍ ತಿಂಗಳಲ್ಲಿ ಈ ಕುರಿತು ಕ್ರಮ ತೆಗೆದುಕೊಳ್ಳುಲಾಗುವುದೆಂದು ರೈಲು ಇಲಾಖೆ ಘೋಷಣೆ ಮಾಡಿತ್ತು. ಆದರೆ ಜುಲೈ ತಿಂಗಳು ಕೊನೆಗೊಳ್ಳುತ್ತಿದ್ದರೂ ಈ ಕುರಿತು ಈ ವಿನಾಯತಿ ನೀಡಲು ಕೇಂದ್ರ ರೈಲು ಇಲಾಖೆ ಘೋಷಣೆ ಮಾಡಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರದ ರೈಲು ಮಂತ್ರಿಗಳು ಬೇಗನೇ ಈ ಹಿಂದೆ ನೀಡಲಾಗುತ್ತಿದ್ದ ಎಲ್ಲ ವಿನಾಯತಿಗಳನ್ನು ಘೋಷಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.

ದೇಶದ ಅತ್ಯಂತ ಶ್ರೀಮಂತ ಮಹಿಳಾ ಯೂಟ್ಯೂಬರ್ ದಕ್ಷಿಣ ಭಾರತದ ಪ್ರತಿಭೆ, ವಾರ್ಷಿಕ ಗಳಿಕೆ

ಸಾಮಾನ್ಯ ಬೋಗಿ ರೈಲ್ವೆ ಪ್ರಯಾಣಿಕರಿಗೆ ಅಗ್ಗದ ದರದಲ್ಲಿ ಊಟ
ಬೆಂಗಳೂರು: ನಗರದ ಕೆಎಸ್‌ಆರ್‌ ಬೆಂಗಳೂರು ನಿಲ್ದಾಣದ ಪ್ಲಾಟ್‌ಫಾಮ್‌ರ್‍ಗಳಲ್ಲಿ ರೈಲುಗಳ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ . 20 ರೂ ಹಾಗೂ . 50 ರೂ ಅಗ್ಗದ ದರದಲ್ಲಿ ಊಟ, ತಿಂಡಿ ಒದಗಿಸುವ ಕೌಂಟರ್‌ ಆರಂಭವಾಗಿದೆ.

ಗುರುವಾರ ನಿಲ್ದಾಣದ ಐದನೇ ಪ್ಲಾಟ್‌ಫಾಮ್‌ರ್‍ನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಸಾಮಾನ್ಯ ಬೋಗಿಗಳು ನಿಲ್ಲುವ ಸ್ಥಳದಲ್ಲಿಯೇ ಈ ಕೌಂಟರ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಸೇವಾ ಕೌಂಟರ್‌ 6 ತಿಂಗಳ ಕಾಲ ಪ್ರಾಯೋಗಿಕವಾಗಿ ನಡೆಸಲಾಗುವುದು.

ಎರಡು ಪ್ಯಾಕೇಜ್‌: 1ನೇ ಪ್ಯಾಕೇಜ್‌ನಲ್ಲಿ  - ಎಕಾನಮಿ ಮೀಲ್ - 7 ಪೂರಿ (175 ಗ್ರಾಂ), ಒಣ ಆಲೂ ವೆಜ್ (150 ಗ್ರಾಂ) ಮತ್ತು ಉಪ್ಪಿನಕಾಯಿ (12 ಗ್ರಾಂ) ಒಳಗೊಂಡಿರುತ್ತದೆ. ಇದಕ್ಕೆ . 20 ರೂ  ದರ ನಿಗದಿ ಮಾಡಲಾಗಿದೆ. 2ನೇ ಪ್ಯಾಕೇಜ್‌ನಲ್ಲಿ - ತಿಂಡಿ ಊಟ (350 ಗ್ರಾಂ) - ಅನ್ನ, ರಾಜ್ಮಾ/ ಚೋಲೆ ಅನ್ನ/ ಖಿಚಡಿ/ಕುಲ್ಚಾ/ ಭತುರಾ/ ಪಾವ್‌-ಬಾಜಿ/ ಮಸಾಲಾ ದೋಸೆ ಸೇರಿ ದಕ್ಷಿಣ ಭಾರತದ ಆಹಾರದ ಪೊಟ್ಟಣ ಇರಲಿದೆ. ಇದಕ್ಕೆ  50 ರೂ ನಿಗದಿಸಲಾಗಿದೆ. ಜತೆಗೆ ಪ್ರಯಾಣಿಕರ ಅನುಕೂಲಕ್ಕಾಗಿ 200 ಎಂಎಲ್‌ ಗ್ಲಾಸ್‌ ಮತ್ತು 1ಲೀ. ಕುಡಿವ ನೀರಿನ ಬಾಟಲಿ ನೀಡಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಬಿಗ್‌ಬಾಸ್ ಶೋ ನಡೆಯುತ್ತಿರೋ ಜಾಲಿವುಡ್ ಸ್ಟುಡಿಯೋ ಮತ್ತೆ ಓಪನ್
ಕಾಂಗ್ರೆಸ್ ಒಳಜಗಳಕ್ಕೆ ಪ್ರತಿಪಕ್ಷ ಕಿಡಿ.. ನಾಯಕತ್ವವಿಲ್ಲದೆ ರಾಜ್ಯದ ಅಭಿವೃದ್ಧಿ ಅಸಾಧ್ಯ: ಆರ್.ಅಶೋಕ್‌