
ಬೆಂಗಳೂರು (ಆ.17) : ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಬಂದಿರುವ ಶಾಸಕರ ಪೈಕಿ ಕೆಲವರು ವಾಪಸ್ ಹೋಗಲಿದ್ದಾರೆ ಎಂಬ ವದಂತಿಗಳನ್ನು ಬಿಜೆಪಿ ನಾಯಕರು ಬಲವಾಗಿ ತಳ್ಳಿ ಹಾಕಿದ್ದಾರೆ. ಬಿಜೆಪಿಯ ಯಾವುದೇ ಶಾಸಕರೂ ಕಾಂಗ್ರೆಸ್ ಕದ ತಟ್ಟುತ್ತಿಲ್ಲ, ಅವರು ಪಕ್ಷ ಬಿಟ್ಟು ಹೋಗುವಂಥ ಯಾವುದೇ ಸಮಸ್ಯೆಗಳಿಲ್ಲ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದರೆ ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾವ ಮಾಹಿತಿ ಆಧಾರದಲ್ಲಿ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ, ಆ ಕುರಿತು ನನಗೇನೂ ಮಾಹಿತಿ ಇಲ್ಲ ಎಂದು ತಿಳಿಸಿದರು.
'ವಲಸೆ ಬಂದವರೆಂದು ಸಿದ್ದರಾಮಯ್ಯ ಕೈನಲ್ಲಿ ಮೂಲೆಗುಂಪಾದರಾ : ಡಿಕೆಶಿಗೆ ಸಿಗ್ತಿದ್ಯಾ ಬೆಂಬಲ'
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ರಾಜಕಾರಣ ನಿಂತ ನೀರಲ್ಲ. ಯಾರು, ಯಾವಾಗ, ಎಲ್ಲಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಯಾವ ವ್ಯಕ್ತಿ ಪಕ್ಷಕ್ಕೆ ನಿಷ್ಠನಾಗಿರುತ್ತಾನೋ ಅವನು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಶಾಸಕ ಶಿವರಾಮ್ ಹೆಬ್ಬಾರ್(Shivaram hebbar) ಮಾತನಾಡಿ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಸರ್ಕಾರ ಮಾಡಿದ್ದ 17 ಶಾಸಕರು ವಾಪಸ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಓದಿದ್ದೇನೆ. ಆದರೆ, ಅಂಥ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವಂಥ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ನಾನಂತು ಭಾಗಿಯಾಗಿಲ್ಲ, ಚರ್ಚೆಯಲ್ಲೂ ಭಾಗವಹಿಸಿಲ್ಲ. ಇಂಥ ಸಭೆಗಳು ನಡೆದಿದ್ದು ನನ್ನ ಗಮನಕ್ಕಿಲ್ಲ. ನನಗೆ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಸೇರ್ಪಡೆಯಾಗಲೇಬೇಕಾದ ಸಂದರ್ಭವಾಗಲಿ, ಕಾಲವಾಗಲಿ ನಿರ್ಮಾಣ ಆಗಿಲ್ಲ ಎಂದು ಹೇಳಿದರು.
ಬಿಜೆಪಿ ಸೇರಿಸಿರುವ ಕಾಂಗ್ರೆಸ್ ನಾಯಕರು ಮರಳಿ ಗೂಡಿಗೆ, ಆಪರೇಶನ್ ಹಸ್ತ ಕುರಿತು ಮುನಿರತ್ ಪ್ರತಿಕ್ರಿಯೆ!
ಕಾಂಗ್ರೆಸ್‌ಗೆ ಹೋಗೋದು ಉಹಾಪೋಹ: ರವಿ
ಕಾಂಗ್ರೆಸ್‌ಗೆ ಹೋಗುವವರು ಯಾರು ಇಲ್ಲ. ಕೇವಲ ಸುದ್ದಿ ಹರಡಿಸಿದ್ದಾರೆ. ಊಹಾಪೋಹದ ಸುದ್ದಿಗೆ ಉತ್ತರ ಕೊಡಲ್ಲ. ಅಪನಂಬಿಕೆಯಿಂದ ನಾನು ಯಾರನ್ನೂ ನೋಡಲ್ಲ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ. ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ