ಬೆಳಗಾವಿ ಪಾಲಿಕೆಯಲ್ಲಿ ಮತ್ತೆ ಎಂಇಎಸ್‌ ಖ್ಯಾತೆ: ಮರಾಠಿ ಭಾಷೆಯಲ್ಲೇ ಸಭೆ ನಡಾವಳಿ ಪತ್ರ ನೀಡುವಂತೆ ಮೊಂಡುತನ!

By Kannadaprabha News  |  First Published Aug 17, 2023, 5:54 AM IST

ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ತನ್ನ ಅಸ್ಥಿತ್ವ ಕಳೆದುಕೊಂಡಿರುವ ಎಂಇಎಸ್‌ ಝಾಪಾಗಳು, ಮಹಾನಗರ ಪಾಲಿಕೆಯಲ್ಲಿ ಮತ್ತೆ ಕ್ಯಾತೆ ತೆಗೆಯುವ ಮೂಲಕ ಅಸ್ಥಿತ್ವ ಉಳಿಸಿಕೊಳ್ಳಲು ಹೆಣ ಗಾಡುತ್ತಿದ್ದಾರೆ. ಬುಧವಾರ ನಡೆದ ಮಹಾನಗರ ಪಾಲಿಕೆಯ ಪರಿಷತ್‌ ಸಾಮಾನ್ಯ ಸಭೆಯಲ್ಲಿ ಮರಾಠಿ ಭಾಷೆಯಲ್ಲಿಯೇ ಸಭಯೆ ನಡುವಳಿ ಪತ್ರವನ್ನು ನೀಡಬೇಕೆಂದು ಮೊಂಡುವಾದ ಪ್ರದರ್ಶಿಸಿ ಧರಣಿ ನಡೆಸಿದ್ದಾರೆ.


ಬೆಳಗಾವಿ (ಆ.17) :  ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ತನ್ನ ಅಸ್ಥಿತ್ವ ಕಳೆದುಕೊಂಡಿರುವ ಎಂಇಎಸ್‌ ಝಾಪಾಗಳು, ಮಹಾನಗರ ಪಾಲಿಕೆಯಲ್ಲಿ ಮತ್ತೆ ಕ್ಯಾತೆ ತೆಗೆಯುವ ಮೂಲಕ ಅಸ್ಥಿತ್ವ ಉಳಿಸಿಕೊಳ್ಳಲು ಹೆಣ ಗಾಡುತ್ತಿದ್ದಾರೆ. ಬುಧವಾರ ನಡೆದ ಮಹಾನಗರ ಪಾಲಿಕೆಯ ಪರಿಷತ್‌ ಸಾಮಾನ್ಯ ಸಭೆಯಲ್ಲಿ ಮರಾಠಿ ಭಾಷೆಯಲ್ಲಿಯೇ ಸಭಯೆ ನಡುವಳಿ ಪತ್ರವನ್ನು ನೀಡಬೇಕೆಂದು ಮೊಂಡುವಾದ ಪ್ರದರ್ಶಿಸಿ ಧರಣಿ ನಡೆಸಿದ್ದಾರೆ.

ಇಲ್ಲಿನ ಮಹಾನಗರ ಪಾಲಿಕೆ ಪರಿಷತ್‌ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯ ಆರಂಭವಾಗುತ್ತಿದ್ದಂತೆ ಮರಾಠಿ ಭಾಷೆಯಲ್ಲಿ ಪಾಲಿಕೆಯ ಸಭೆಯ ನಡುವಳಿ ಪತ್ರವನ್ನು ನೀಡಬೇಕೆಂದು ಎಂಇಎಸ್‌ ಸದಸ್ಯ ರವಿ ಸಾಳುಂಕೆ ನೇತೃತ್ವದಲ್ಲಿ ಮೂವರು ಪಾಲಿಕೆಯ ಕೌನ್ಸಿಲ… ಸಭಾಂಗಣದಲ್ಲಿ ಧರಣಿ ನಡೆಸಿ ಕೊಲಾಹಲ ಸೃಷ್ಟಿಸಿ, ಸಭೆ ಆರಂಭದಲ್ಲಿಯೇ ಖ್ಯಾತೆ ತೆಗೆದ ಎಂಇಎಸ್‌ ಸದಸ್ಯರು ಇಡೀ ಸಭೆಯ ದಿಕ್ಕು ತಪ್ಪಿಸಲು ಯತ್ನಿಸಿದರು. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಲ್ಲ ಭಾಷಿಕ ಸದಸ್ಯರು ಚುನಾಯಿತರಾಗಿ ಆಯ್ಕೆಯಾಗಿದ್ದಾರೆ. ನಮಗೆ ಮರಾಠಿ ಭಾಷೆಯಲ್ಲಿ ಪಾಲಿಕೆ ಸಭೆಯ ನಡುವಳಿಯನ್ನು ನೀಡಬೇಕೆಂದು ಒತ್ತಾಯಿಸಲಾಗಿತ್ತು.‌ಅದರಂತೆ ಮೇಯರ ಒಪ್ಪಿಗೆ ನೀಡಿದ್ದರೂ ಈಗಲೂ ನಮಗೆ ಮರಾಠಿ ಭಾಷೆಯಲ್ಲಿ ಸಭೆಯ ನಡುವಳಿ ಪತ್ರ ನೀಡಲಿಲ್ಲ ಎಂದು ಆರೋಪಿಸಿ ಎಂಇಎಸ್‌ ಸದಸ್ಯ ರವಿ ಸಾಳುಂಕೆ ನೇತೃತ್ವದಲ್ಲಿ ನಾಗೇಶ ಮಂಡೋಲ್ಕರ, ವೈಶಾಲಿ ಬಾತಖಾಂಡೆ ಮೂವರು ಸದಸ್ಯರು ಧರಣಿ ನಡೆಸಿದರು.

Tap to resize

Latest Videos

 

ಖಾನಾಪುರದಲ್ಲಿ ಒಂದಾದ ಕಮಲ ಕಲಿಗಳು: ಕೈ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್‌ಗೆ ಬಿಗ್ ಶಾಕ್!

ಇದಕ್ಕೆ ಧ್ವನಿಗೂಡಿದ ಉತ್ತರ ಮತಕ್ಷೇತ್ರದ ಶಾಸಕ ಆಸೀಫ್‌ ಶೇಠ್‌, ಕಳೆದ ಬಾರಿಯ ಸಭೆಯಲ್ಲಿಯೇ ಮೇಯರ ಅವರು ಮರಾಠಿ ಭಾಷೆಯಲ್ಲಿ ಸಭೆಯ ನಡುವಳಿಗಳನ್ನು ನೀಡಬೇಕೆಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷ ಬಿಜೆಪಿ ಸದಸ್ಯರು ಎಂಇಎಸ್‌ ಸದಸ್ಯರು ವಿನಾಕಾರಣ ಗೊಂದಲ ಮಾಡುತ್ತಿದ್ದಾರೆ. ಕಾನೂನು ಪುಸ್ತಕದ ಬಗ್ಗೆ ಅವರಿಗೆ ಅರಿವಿಲ್ಲ. ಮೇಯರಗೆ ಅಧಿಕಾರ ಇದೆ. ಕಾನೂನು ತಜ್ಞರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಮೇಯರ ಶೋಭಾ ಸೋಮನಾಚೆ ಮಾತನಾಡಿ, ಭಾಷಾಂತರ ಮಾಡುವವರು ಇಲ್ಲದೆ‌ ಇರುವುದರಿಂದ ಮರಾಠಿಯಲ್ಲಿ ನಡುವಳಿ ಪತ್ರವನ್ನು ನೀಡಲಾಗಿಲ್ಲ. ಆದ್ದರಿಂದ ಭಾಷಾಂತರ ಮಾಡುವವರು ಬಂದ ಕೂಡಲೇ ನೀಡಲಾಗುವುದು ಎಂದರು. ಇದರ ನಡುವೆ ಶಾಸಕರ ಇಬ್ಬರ ನಡುವೆ ಅನುಭವದ ಕುರಿತಿ ಮಾತಿನ ಚಕಮಕಿ ನಡೆಯಿತು.

ಬಳಿಕ ಪಾಲಿಕೆ ವ್ಯಾಪ್ತಿಯಲ್ಲಿ ಡಾಟಾಎಂಟ್ರಿ ಮಾಡುವ 40 ಜನರನ್ನು ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಮೇಯರ ಶೋಭಾ ಸೋಮನಾಚೆ ಸದಸ್ಯರ ಅನುಮತಿ ಮೇರೆಗೆ ಠರಾವ್‌ ಪಾಸ್‌ ಮಾಡಿದರು. ರಾಮತೀರ್ಥ ನಗರವನ್ನು ಬೆಳಗಾವಿ ಪಾಲಿಕೆಗೆ ಹಸ್ತಾಂತರಿಕೊಳ್ಳಬೇಕೆಂದು ಪಾಲಿಕೆ ಬಿಜೆಪಿ ಸದಸ್ಯ ಹನುಮಂತ ಕೊಂಗಾಲಿ ಒತ್ತಾಯಿಸಿದರು. ಕುಮಾರಸ್ವಾಮಿ ಬಡಾವಣೆಯನ್ನು ಪಾಲಿಕೆಗೆ ಹಸ್ತಾಂತರ ಪ್ರಕ್ರಿಯೆಯ ಮಾದರಿಯಲ್ಲೇ ರಾಮತೀರ್ಥ ನಗರವನ್ನು ಪಾಲಿಕೆ ವ್ಯಾಪ್ತಿಗೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ ಶೋಭಾ ಸೋಮನಾಚೆ ಅವರು, ರಾಮತೀರ್ಥ ನಗರವನ್ನು ಪಾಲಿಕೆಗೆ ಹಸ್ತಾಂತರಿಸುವ ವಿಷಯದ ಕುರಿತು ಕಮಿಟಿಯ ಸಲಹೆ ಪಡೆದುಕೊಂಡು ಪ್ರಕ್ರಿಯೆ ಆರಂಭಿಸಲು ಪ್ರಾರಂಭಿಸಲು ಠರಾವ್‌ ಪಾಸ್‌ ಮಾಡಿದರು.

ಬೆಳಗಾವಿ ಪಾಲಿಕೆಯಲ್ಲಿ ಅಧಿಕಾರಿಗಳ ವರ್ಗಾವಣೆಯ ಬಗ್ಗೆ ವ್ಯಾಪಕ ಚರ್ಚೆ ಹಿಂದಿನ ಸಭೆಯಲ್ಲಿ ಪಾಲಿಕೆಯ ಎಲ್ಲ ಸದಸ್ಯರು ಒತ್ತಾಯಿದ್ದರು. ನಗರದ ಅಭಿವೃದ್ಧಿ ವಿಷಯದಲ್ಲಿ ಎಲ್ಲ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಒಬ್ಬ, ಇಬ್ಬರನ್ನು ಗುರಿಯಾಗಿಸಿಕೊಂಡು ಸಭೆಯಲ್ಲಿ ಠರಾವ್‌ ಪಾಸ್‌ ಮಾಡುವುದು ಸರಿಯಲ್ಲ ಎಂದು ಶಾಸಕ ಆಸೀಫ್‌ ಸೇಠ್‌ ತಿಳಿಸಿದರು.

ಬಿಜೆಪಿ ಸದಸ್ಯ ಹನುಮಂತ ಕೊಂಗಾಲಿ ಮಾತನಾಡಿ, ನಗರಾಭಿವೃದ್ಧಿ ಇಲಾಖೆಯ ಸಚಿವ ಭೈರತಿ ಸುರೇಶ ಪಾಲಿಕೆಯಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ಪಟ್ಟಿಮಾಡಿ ಸರ್ಕಾರಕ್ಕೆ ಕಳುಹಿಸಿಕೊಡಿ ಎಂದಿದ್ದರು. ಅದೇ ಪ್ರಕಾರ ನಾವು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಯಾವ ಸದಸ್ಯರು ಅಧಿಕಾರಿಗಳನ್ನು‌ಗುರಿಯಾಗಿಸಿಕೊಂಡು ಚರ್ಚೆ ಮಾಡಿಲ್ಲ ಎಂದು ಸಭೆಗೆ ತಿಳಿಸಿದರು.

 

ಚುನಾವಣೆ ಹೊಸ್ತಿಲಲ್ಲಿ ಬಾಲ ಬಿಚ್ಚಿದ MES: 'ಚಲೋ ಮುಂಬೈ' ಮೂಲಕ ಮಹಾರಾಷ್ಟ್ರ ಸಿಎಂ ಭೇಟಿ

ಶ್ರೀನಗರದ ಅನುಭವ ಮಂಟಪದ ಕಟ್ಟಡದ ಎದುರುಗಡೆ ಸ್ಮಾರ್ಟ ಸಿಟಿಯು ಪಿಪಿಪಿ ಮಾದರಿಯಲ್ಲಿ ಕೆಲಸ ಮಾಡುತ್ತಿರುವುದನ್ನು ತಡೆಯಲು ಮೇಯರ ಠರಾವ್‌ ಪಾಸ್‌ ಮಾಡಿದರು. ಪಾಲಿಕೆಯ ಕಾಂಗ್ರೆಸ್‌ನ ಪಾಲಿಕೆ ಸದಸ್ಯ ಮುಜಮಿಲ್ಲ ಡೋಣಿ ಅವರಿಗೆ ವಿಪಕ್ಷ ನಾಯಕರಾಗಿ ವಿಪಕ್ಷಗಳು ನಿರ್ಧಾರ ಮಾಡಿದ್ದಂತೆ ಮೇಯರ ಶೋಭಾ ಸೋಮನಾಚೆ ಘೋಷಣೆ ಮಾಡಿದರು. ಈ ಸಭೆಯಲ್ಲಿ ಉಪಮೇಯರ್‌ ರೇಷ್ಮಾ ಪಾಟೀಲ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಸೇರಿದಂತೆ ನಗರ ಸೇವಕರು, ಪಾಲಿಕೆ ಅಧಿಕಾರಿಗಳು ಭಾಗವಹಿಸಿದ್ದರು.

click me!