ಈ ನಗರಕ್ಕೆ ವಿಪರೀತ ಹಾವುಗಳ ಕಾಟ; ಕತ್ತಲಾದರೆ ಮನೆಗೇ ನುಗ್ಗುತ್ತವೆ!

Published : Aug 17, 2023, 05:38 AM IST
ಈ ನಗರಕ್ಕೆ ವಿಪರೀತ ಹಾವುಗಳ ಕಾಟ;  ಕತ್ತಲಾದರೆ ಮನೆಗೇ ನುಗ್ಗುತ್ತವೆ!

ಸಾರಾಂಶ

ಕೆ.ಆರ್‌. ಕ್ಷೇತ್ರದ ಶಾಸಕ ಟಿ.ಎಸ್‌. ಶ್ರೀವತ್ಸ ಅವರು ಬುಧವಾರ ಶ್ರೀರಾಂಪುರ ಮೂರನೇ ಹಂತ, ದೇವಯ್ಯನಹುಂಡಿ, ಶಿವಪುರ ಭಾಗದಲ್ಲಿ ಪಾದಯಾತ್ರೆ ನಡೆಸಿ ಸಾರ್ವಜನಿಕ ರ ಅಹವಾಲು ಸ್ವೀಕರಿಸಿದರು.

ಮೈಸೂರು (ಆ.17) :  ಕೆ.ಆರ್‌. ಕ್ಷೇತ್ರದ ಶಾಸಕ ಟಿ.ಎಸ್‌. ಶ್ರೀವತ್ಸ ಅವರು ಬುಧವಾರ ಶ್ರೀರಾಂಪುರ ಮೂರನೇ ಹಂತ, ದೇವಯ್ಯನಹುಂಡಿ, ಶಿವಪುರ ಭಾಗದಲ್ಲಿ ಪಾದಯಾತ್ರೆ ನಡೆಸಿ ಸಾರ್ವಜನಿಕ ರ ಅಹವಾಲು ಸ್ವೀಕರಿಸಿದರು. ನಗರ ಪಾಲಿಕೆ, ಎಂಡಿಎ, ಪೊಲೀಸ್‌, ಸೆಸ್‌್ಕ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪಾದಯಾತ್ರೆ ನಡೆಸಿದ ಶಾಸಕರಿಗೆ ಬಡಾವಣೆಯ ನಿವಾಸಿಗಳು ಹಲವು ಸಮಸ್ಯೆಗಳ ದರ್ಶನ ಮಾಡಿಸಿದರು.

ಶ್ರೀರಾಂಪುರ 3ನೇ ಹಂತದ ಮತ್ತು 5ನೇ ಕ್ರಾಸ್‌ ಖಾಲಿ ನಿವೇಶನಗಳಿದ್ದು, ಅಲ್ಲಿ ತುಂಬಾ ಗಿಡಗಂಟೆಗಳು ಬೆಳೆದಿರುವ ಕಾರಣ ಹಾವುಗಳ ಕಾಟ ಹೆಚ್ಚಾಗಿದೆ ಎಂದು ನಿವಾಸಿಗಳು ದೂರಿದರು. ನಿವೇಶನ ಮಾಲೀಕರಿಗೆ ಸೂಚಿಸಿ ಕೂಡಲೇ ಇಂತಹ ಜಾಗಗಳನ್ನು ಸ್ವಚ್ಛಗೊಳಿಸುವಂತೆ ಶಾಸಕರು ಅಧಿಕಾರಿಗಳಿಗೆ ತಿಳಿಸಿದರು.

ಒಂದೇ ಒಂದು ಹಾವು ಕಂಡುಬರದ ದೇಶ ಒಂದಿದೆ ಗೊತ್ತಾ?

ರಸ್ತೆಗಳು ತುಂಬಾ ಹಳ್ಳದಿಂದ ಕೂಡಿದ್ದು, ಜೋರು ಮಳೆ ಬಂದಾಗ ಮಳೆಯ ನೀರು ತುಂಬಿ ಹಳ್ಳದಲ್ಲಿರುವ ಮನೆಗಳಿಗೆ ನುಗ್ಗುತ್ತದೆ. ಹೀಗಾಗಿ, ಈ ಭಾಗದ ಸುತ್ತಮುತ್ತ ಮೋರಿ ಮತ್ತು ಡ್ರೈನೇಜ್‌ಗಳನ್ನು ಸರಿಪಡಿಸಿ, ಸುಲಲಿತವಾಗಿ ನೀರು ಹೋಗಲು ಮೋರಿಯಲ್ಲಿರುವ ಕಸವನ್ನು ಕೂಡಲೇ ಸ್ವಚ್ಛಗೊಳಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಶಿವಪುರದ ಸುತ್ತಮುತ್ತಲಿನ ಪಾರ್ಕ್ಗಳ ಅಕ್ಕಪಕ್ಕ ರಾತ್ರಿ ಸಮಯದಲ್ಲಿ ಯುವಕರು ತಮ್ಮ ವಾಹನಗಳಲ್ಲಿ ಬಂದು ಮದ್ಯಪಾನ ಮಾಡುವುದರಿಂದ ಕಿರಿಕಿರಿ ಉಂಟಾಗುತ್ತಿದೆ ಎಂದು ನಿವಾಸಿಗದಳು ದೂರಿದರು. ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಬಂದೋಬಸ್‌್ತ ಮಾಡುವಂತೆ ಪೊಲೀಸರಿಗೆ ಶಾಸಕರು ಹೇಳಿದರು.

ಬೆಂಗಳೂರು ನಿವಾಸಿಗಳೇ ಎಚ್ಚರ!: ಅಂಜನಾಪುರದಲ್ಲಿ ಬೃಹತ್‌ ಗಾತ್ರದ ಹೆಬ್ಬಾವು ಪತ್ತೆ!

ಪಾಲಿಕೆ ಸದಸ್ಯೆ ಗೀತಾಶ್ರೀ ಯೋಗಾನಂದ, ಮುಖಂಡರಾದ ಮನೋಜ್‌, ಚೇತನ್‌ ಜಯರಾಮ್‌, ರವಿಕುಮಾರ್‌, ರವೀಂದ್ರ, ಪರಮೇಶ್‌, ಜಗದೀಶ್‌, ಜಯಂತಿ, ಗಿರೀಶ್‌, ಮಂಜುನಾಥ್‌, ವಾಮನ್‌ ರಾವ್‌, ಜೋಗಿ ಮಂಜು, ಪ್ರದೀಪ್‌, ಕಿಶೋರ್‌, ಶಿವರಾಜ್‌ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ