ಪೂರ್ವಾಗ್ರಹಪೀಡಿತ ಚರ್ಚೆ ಬೇಡ: ಸ್ಪೀಕರ್‌ ಖಾದರ್‌

By Kannadaprabha News  |  First Published Jun 24, 2023, 4:15 AM IST

ಶಿಬಿರದ ಬಗ್ಗೆ ಯಾವುದೇ ವಿಚಾರ ಇದ್ದರೂ ಈಗಲೇ ಹೇಳಿಕೆಗಳನ್ನು ನೀಡುವುದು ಪ್ರಬುದ್ಧತೆ ಅಲ್ಲ. ತರಬೇತಿ ಶಿಬಿರ ನೋಡಿದ ಬಳಿಕ ಆ ಬಗ್ಗೆ ಅಭಿಪ್ರಾಯ ಹೇಳಲಿ. ಯಾವುದೇ ವಿಚಾರದ ಬಗ್ಗೆ ಪೂರ್ವಾಗ್ರಹಪೀಡಿತ ಚರ್ಚೆ ಸರಿಯಲ್ಲ: ಯು.ಟಿ.ಖಾದರ್‌ 


ಮಂಗಳೂರು(ಜೂ.24):  ಈ ಬಾರಿ ಹೊಸದಾಗಿ ಆಯ್ಕೆಯಾಗಿರುವ ಶಾಸಕರಿಗೆ ನಡೆಸುವ ತರಬೇತಿ ಶಿಬಿರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವವರು ಶಿಬಿರ ನೋಡಿದ ಬಳಿಕ ಅಭಿಪ್ರಾಯ ಹೇಳಲಿ. ಯಾವುದೇ ವಿಚಾರದ ಬಗ್ಗೆ ಪೂರ್ವಾಗ್ರಹ ಪೀಡಿತ ಚರ್ಚೆ ಸರಿಯಲ್ಲ ಎಂದು ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಈ ತರಬೇತಿ ಶಿಬಿರ ನಡೆಸಲಾಗುತ್ತಿದೆ. ಸಂಸದೀಯ ಪಟುಗಳು ತರಬೇತಿ ನೀಡಲಿದ್ದಾರೆ. ಮಾಜಿ ಸ್ಪೀಕರ್‌ಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಎಚ್‌.ಡಿ.ಕುಮಾರಸ್ವಾಮಿ ಕೂಡ ನೂತನ ಶಾಸಕರೊಂದಿಗೆ ಸಂವಾದ ನಡೆಸಲಿದ್ದಾರೆ. ಇದರ ಜೊತೆಗೆ ಒತ್ತಡ ರಹಿತ ಕೆಲಸ ನಿರ್ವಹಣೆ ಬಗ್ಗೆ ತಿಳಿಸಲು ಕೆಲ ಆಧ್ಯಾತ್ಮಿಕ ವ್ಯಕ್ತಿಗಳನ್ನು ಕೂಡ ಕರೆದಿದ್ದೇವೆ. ಆದರೆ ಅವರಲ್ಲಿ ಕೆಲವರು ಆಗಮಿಸುವುದು ಇನ್ನೂ ದೃಢಪಟ್ಟಿಲ್ಲ. ಶ್ರೀ ಶ್ರೀ ರವಿಶಂಕರ್‌ ಗುರೂಜಿ ಊರಲ್ಲೇ ಇಲ್ಲ, ಅವರು ಅಮೆರಿಕದಲ್ಲಿದ್ದಾರೆ ಎಂದರು. ಅವರೊಂದಿಗೆ ನನಗೆ ಆತ್ಮೀಯ ಒಡನಾಟ ಇದೆ ಎಂದು ವಿವರಿಸಿದರು.

Tap to resize

Latest Videos

ಮಂಗಳೂರು: ಶಿಷ್ಟಾಚಾರ ಉಲ್ಲಂಘನೆಗೆ ಬಿಜೆಪಿ ಶಾಸಕರು ಗರಂ, ಸಚಿವ‌ ಗುಂಡೂರಾವ್ ಎದುರಲ್ಲೇ ಆಕ್ರೋಶ..!

ಈ ಶಿಬಿರದ ಬಗ್ಗೆ ಯಾವುದೇ ವಿಚಾರ ಇದ್ದರೂ ಈಗಲೇ ಹೇಳಿಕೆಗಳನ್ನು ನೀಡುವುದು ಪ್ರಬುದ್ಧತೆ ಅಲ್ಲ. ತರಬೇತಿ ಶಿಬಿರ ನೋಡಿದ ಬಳಿಕ ಆ ಬಗ್ಗೆ ಅಭಿಪ್ರಾಯ ಹೇಳಲಿ. ಯಾವುದೇ ವಿಚಾರದ ಬಗ್ಗೆ ಪೂರ್ವಾಗ್ರಹಪೀಡಿತ ಚರ್ಚೆ ಸರಿಯಲ್ಲ ಎಂದ ಅವರು, ಸಾಮಾಜಿಕ ತಾಣಗಳಲ್ಲಿ ಸ್ಪಷ್ಟತೆ ಇಲ್ಲದೆ ಬರೆಯುವುದು ಅವರವರ ವ್ಯಕ್ತಿತ್ವಕ್ಕೆ ಬಿಟ್ಟವಿಚಾರ ಎಂದರು.

click me!