ಮಹಾರಾಜರು ಕಟ್ಟಿದ್ದ ಮೈಸೂರು ಹಿಂದೆ ರಾಜ್ಯವಾಗಿತ್ತು. ಇಂದು ಕರ್ನಾಟಕವಾಗಿದೆ. ಈ ಬಾರಿ ಅದ್ದೂರಿ ದಸರಾ ಉತ್ಸವ ನಡೆಯಲಿದೆ. ದಸರಾ ಉದ್ಘಾಟಕರು ಯಾರಾಗಬೇಕೆಂಬ ಆಯ್ಕೆ ಸಿಎಂಗೆ ಬಿಟ್ಟು ಕೊಟ್ಟಿದ್ವಿ. ಹಂಪನಾ ಅವರ ಆಯ್ಕೆ ಉತ್ತಮವಾಗಿದೆ ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ತಿಳಿಸಿದರು.
ಮೈಸೂರು (ಅ.3): ಮಹಾರಾಜರು ಕಟ್ಟಿದ್ದ ಮೈಸೂರು ಹಿಂದೆ ರಾಜ್ಯವಾಗಿತ್ತು. ಇಂದು ಕರ್ನಾಟಕವಾಗಿದೆ. ಈ ಬಾರಿ ಅದ್ದೂರಿ ದಸರಾ ಉತ್ಸವ ನಡೆಯಲಿದೆ. ದಸರಾ ಉದ್ಘಾಟಕರು ಯಾರಾಗಬೇಕೆಂಬ ಆಯ್ಕೆ ಸಿಎಂಗೆ ಬಿಟ್ಟು ಕೊಟ್ಟಿದ್ವಿ. ಹಂಪನಾ ಅವರ ಆಯ್ಕೆ ಉತ್ತಮವಾಗಿದೆ ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ತಿಳಿಸಿದರು.
ಕಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಹಂಪನಾ ಆಯ್ಕೆ ಉತ್ತಮವಾಗಿದೆ. ಅವರು ಯಾವುದೇ ವಿವಾದ ಇಲ್ಲದ ಸಾಹಿತಿಗಳು. ಹಂಪನಾ ಅವರಿಗೆ ಚಾಮುಂಡೇಶ್ವರಿ ತಾಯಿ ಆಯಸ್ಸು ಆರೋಗ್ಯ ಕರುಣಿಸಲಿ ಎಂದರು.
ಸಿದ್ದರಾಮಯ್ಯ ದಸರೆ ಅಂಬಾರಿಗೆ ಪುಷ್ಪಾರ್ಚನೆ ಮಾಡುವುದು ಅನುಮಾನ: ಬಿಜೆಪಿ ಶಾಸಕ ಶ್ರೀವತ್ಸ
ಸಿದ್ದರಾಮಯ್ಯ ಚಾಮುಂಡೇಶ್ವರಿ ತಾಯಿಯ ವರಪುತ್ರ:
ಸಿಎಂ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ತಾಯಿಯ ವರಪುತ್ರರು ಹೌದು. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕಾಲಿಟ್ಟ ವೇಳೆಯಿಂದಲೂ ಸಿದ್ದರಾಮಯ್ಯ ಸಚಿವರಾಗಿ, ಡಿಸಿಎಂ ಆಗಿ, ಎರಡು ಭಾರಿ ಸಿಎಂ ಆಗಿದ್ದಾರೆ ಎಂದರೆ ತಾಯಿ ಚಾಮುಂಡೇಶ್ವರಿ ಆಶೀರ್ವಾದವೇ ಕಾರಣ. ಎಂತ ಸಂದರ್ಭದಲ್ಲಿಯೂ ತಾಯಿ ಚಾಮುಂಡೇಶ್ವರಿ ಅವರ ಪಾಲಿಗೆ ಇದ್ದಾರೆ. ಉಪ ಚುನಾವಣೆ ವೇಳೆ ಸಿದ್ದರಾಮಯ್ಯರನ್ನ ಸೋಲಿಸಲಿಕ್ಕೆ ನಾವು ತೀರ್ಮಾನ ಮಾಡಿದ್ವಿ. ಆದರೆ ಸಿಎಂ ಆ ಚುನಾವಣೆಯಲ್ಲಿ ಗೆದ್ದರು. ಇದಕ್ಕೆ ಕಾರಣ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಅವರಿಗೆ ಇದೆ. ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಲು ಡಿಸಿಎಂ ಡಿಕೆ ಶಿವಕುಮಾರ್ ಕೂಡ ಕಾರಣ. ಸಚಿವ ಮಹದೇವಪ್ಪ ಎಲ್ಲಾ ಸಚಿವ ಸ್ಥಾನವನ್ನ ಪಡೆದಿದ್ದಾರೆ. ಒಬ್ಬ ದಲಿತ ನಾಯಕನನ್ನ ರಾಜ್ಯ ಮಟ್ಟಕ್ಕೆ ಕೊಂಡೋಯ್ದದ್ದು ಸಿದ್ದರಾಮಯ್ಯನವರು ಎಂದು ಭಾಷಣದುದ್ದಕ್ಕೂ ಸಿಎಂ ಡಿಸಿಎಂ, ಸಚಿವ ಮಹದೇವಪ್ಪರನ್ನ ಹಾಡಿ ಹೊಗಳಿದರು.
ಬ್ರಾಹ್ಮಣ ಸಮಾಜದ ಸಾವರ್ಕರ್ ಗೋಮಾಂಸ ಸೇವಿಸುತ್ತಿದ್ದರು: ವಿವಾದವೆಬ್ಬಿಸಿದ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ
ಜಿಟಿಡಿ ಭಾಷಣಕ್ಕೆ ಸಿಎಂ ಫುಲ್ ಖುಷ್
ಕಾರ್ಯಕ್ರಮದಲ್ಲಿ ಭಾಷಣದುದ್ದಕ್ಕೂ ಹಾಡಿಹೊಗಳಿದ ಜಿಟಿ ದೇವೇಗೌಡರ ಭಾಷಣ ಕೇಳಿ ಸಿಎಂ ಸಿದ್ದರಾಮಯ್ಯ ಫುಲ್ ಖುಷಿಯಾಗಿರುವುದು ಕಂಡುಬಂತು. ಭಾಷಣದ ವೇಳೆ ಮುಡಾ ಹಗರಣ ವಿಚಾರವಾಗಿ ಮಾತನಾಡಿದ ಜಿಟಿದೇವೇಗೌಡ ಸಿಎಂ ಪರ ಬ್ಯಾಟ್ ಬಿಸಿ ಅಚ್ಚರಿ ಮೂಡಿಸಿದರು. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು? ಎಲ್ಲರೂ ಸಿದ್ದರಾಮಯ್ಯರ ರಾಜೀನಾಮೆ ಕೇಳ್ತಿದ್ದಾರೆ. ತಾಕತ್ ಇದ್ರೆ ಎಫ್‌ಐಆರ್ ಆದವ್ರು ಎಲ್ಲರೂ ರಾಜೀನಾಮೆ ಕೊಡಿ ಎಂದು ಸವಾಲು ಹಾಕಿದರಲ್ಲದೆ ಜೆಡಿಎಸ್ ಬಿಜೆಪಿ ನಾಯಕರು, ರಾಜ್ಯಪಾಲರ ವಿರುದ್ಧವೂ ವಾಗ್ದಾಳಿ ನಡೆಸಿದರು.