ಮಾತಿನ ಭರದಲ್ಲಿ ಹೆಚ್‌ಸಿ ಮಹದೇವಪ್ಪ ಎಡವಟ್ಟು; ಅರ್ಜುನ ಬದಲಿಗೆ ಅಂಬಾರಿ ಹೊರುವ ಅಭಿಮನ್ಯು ಸತ್ತು ಹೋಗಿದೆ ಎಂದ ಸಚಿವ!

By Suvarna News  |  First Published Aug 21, 2024, 11:03 PM IST

ವಿಶ್ವವಿಖ್ಯಾತ, ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಗಜಪಡೆಗೆ ಚಾಲನೆ ನೀಡುವ ವೇಳೆ ಸಚಿವ ಮಹದೇಶ ಯಡವಟ್ಟು ಮಾಡಿದ ಘಟನೆ ನಡೆಯಿತು.


ಮೈಸೂರು (ಆ.21): ವಿಶ್ವವಿಖ್ಯಾತ, ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಗಜಪಡೆಗೆ ಚಾಲನೆ ನೀಡುವ ವೇಳೆ ಸಚಿವ ಮಹದೇಶ ಯಡವಟ್ಟು ಮಾಡಿದ ಘಟನೆ ನಡೆಯಿತು.

ಮೈಸೂರು ಹುಣಸೂರು ತಾಲೂಕಿನ ನಾಗರಹೊಳೆ ಅಭಯಾರಣ್ಯದ ಅಂಚಿನಲ್ಲಿರುವ ವೀರನಹೊಸಹಳ್ಳಿಯಲ್ಲಿ ಇಂದು(ಆ.21) ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಹಬ್ಬದ ಗಜ ಪಯಣಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡುವ ಭರದಲ್ಲಿ ಅರ್ಜುನ ಆನೆ ಎನ್ನುವ ಬದಲಿಗೆ ಅಭಿಮನ್ಯು ಆನೆ ಸತ್ತು ಹೋಗಿದೆ ಎಂದರು.  

Tap to resize

Latest Videos

undefined

ಅರೆಸ್ಟ್ ಮಾಡೋಕೆ ಒಬ್ಬ ಪೊಲೀಸ್ ಸಾಕು; ನೂರು ಸಿದ್ದರಾಮಯ್ಯ ಬಂದ್ರೂ ಏನು ಮಾಡೋಕಾಗೊಲ್ಲ ಎಂದ ಹೆಚ್‌ಡಿಕೆಗೆ ಸಿಎಂ ಟಾಂಗ್!

'ಅಭಿಮನ್ಯು ಆನೆ ನಮ್ಮನ್ನ ಅಗಲಿ ಹೋಗಿರುವುದು ದುಃಖದ ಸಂಗತಿಯಾಗಿದೆ. ಅಭಿಮನ್ಯು ಸ್ಮಾರಕ ಮಾಡಬೇಕು. ಅಭಿಮನ್ಯು ಸವಿನೆನಪಿಗಾಗಿ ಕೆಲವು ಬಹುಮಾನ ಘೋಷಣೆ ಮಾಡಬೇಕು ಎಂದು ನಮ್ಮ ಶಾಸಕರು ಹೇಳುತ್ತಿದ್ದಾರೆ. ಸಚಿವರ ಗಮನಕ್ಕೆ ತಂದು ಈ ಬಾರಿ ಹಿಂದಿಗಿಂತಲೂ ವಿಜೃಂಭಣೆಯಿಂದ ದಸರಾ ಆಚರಣೆ ಮಾಡುತ್ತೇವೆ ಎಂದರು. ಸಚಿವರು ಬದುಕಿರುವ ಅಭಿಮನ್ಯು ಆನೆಯನ್ನ ಮಾತಿನಲ್ಲೇ ಕೊಂದುಬಿಟ್ಟರಲ್ಲ ಎಂದು ಹಿಂಬದಿಯಿದ್ದವರು ಮುಖ ಮುಖ ನೋಡಲಾರಂಭಿಸಿದರು.

ಗಜಪಯಣ ಆರಂಭ:  ಇಂದು, ನಾಳೆ ಪಯಣಿಸಿ ಅಶೋಕಪುರ ಅರಣ್ಯಭವನದಲ್ಲಿ ವಾಸ್ತವ್ಯ ಹೂಡಲಿವೆ ಬಳಿಕ ಶುಕ್ರವಾರ ಮೈಸೂರು ಆರಮನೆ ತಲುಪಲಿದ್ದು, ಈಗಾಗಲೇ ಆನೆ, ಮಾವುತರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. 

click me!