ಮೈಸೂರು ಅರಮನೆಯಲ್ಲಿ ಗುಡ್‌ ನ್ಯೂಸ್?‌ ಸಂಸದ ಯದುವೀರ ಒಡೆಯರ್‌- ತ್ರಿಶಿಕಾ ಕುಮಾರಿಗೆ ಇನ್ನೊಂದು ಮಗು ಆಗಮನದ ಸುಳಿವು!

By Bhavani Bhat  |  First Published Oct 5, 2024, 8:44 AM IST

ಮೈಸೂರು ದಸರಾ ಪೂಜೆ, ಖಾಸಗಿ ದರ್ಬಾರ್‌ ಸಂದರ್ಭದಲ್ಲಿ ರಾಣಿ ತ್ರಿಶಿಕಾ ಕುಮಾರಿ ಅವರನ್ನು ನೋಡಿದವರಿಗೆ ಅವರು ಗರ್ಭಿಣಿ ಆಗಿರಬಹುದು ಎಂಬುದು ಖಚಿತವಾಗುವಂತಿದೆ. ಗುಡ್‌ ನ್ಯೂಸ್‌ ನೀಡ್ತಿದಾರಾ ತ್ರಿಶಿಕಾ? 
 


ಮೈಸೂರಿನಲ್ಲಿ ನಾಡಹಬ್ಬ ದಸರಾ ಆರಂಭವಾಗಿದೆ. ಅರಮನೆಯಲ್ಲಿ ವೈಭವದ ಪೂಜೆಯೊಂದಿಗೆ ನವರಾತ್ರಿ ಹಬ್ಬದ ಶುರುವಾತು ಆಗಿದೆ. ಪೀಠಸ್ಥ ಮಹಾರಾಜ, ಈಗಿನ ಮೈಸೂರು ಸಂಸದ ಯದುವೀರ ಶ್ರೀಕಂಠದತ್ತ ಒಡೆಯರ್‌ ವೈಭವದ ಖಾಸಗಿ ದರ್ಬಾರ್‌ ನಡೆಸಿಕೊಟ್ಟಿದ್ದಾರೆ. ರಾಜಮಾತೆ ಪ್ರಮೋದಾದೇವಿ ಒಡೆಯರ್‌ ಅವರೂ ಅಲ್ಲಿದ್ದರು. ಯುವರಾಜ್‌ ಆದ್ಯವೀರ್‌ ಕೂಡ ಅಲ್ಲಿದ್ದ.

ಆದ್ರೆ, ಗಮನ ಸೆಳೆದ ವಿಷಯ ಅಂದ್ರೆ ರಾಣಿ ತ್ರಿಶಿಕಾ ಕುಮಾರಿ. ಎಲ್ಲ ಅಲಂಕಾರ ಮಾಡಿಕೊಂಡಿದ್ದ ತ್ರಿಶಿಕಾ ಕುಮಾರಿ, ಹೊಟ್ಟೆಯನ್ನು ಮಾತ್ರ ಕವರ್‌ ಮಾಡಿಕೊಂಡಿದ್ದರು. ಸ್ವಲ್ಪ ಗಮನಿಸಿದರೆ, ತ್ರಿಶಿಕಾ ಕುಮಾರಿ ಮತ್ತೆ ಗರ್ಭಿಣಿಯಾಗಿದ್ದಾರೆ ಎಂದು ಎಂಥವರೂ ಹೇಳಬಹುದಾಗಿತ್ತು.  ಅವರ ನಡೆ ನುಡಿಯಲ್ಲಿ ಅವರು ತಮ್ಮ ಹೊಟ್ಟೆಯ ಭಾಗವನ್ನು ಪ್ರೊಟೆಕ್ಟ್‌ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಅಲ್ಲಿಗೆ ತ್ರಿಶಿಕಾ ಮತ್ತೆ ಗರ್ಭಿಣಿ ಆಗಿರುವುದು ಖಚಿತ. ಆದರೆ ಈ ವಿಚಾರವನ್ನೇನೂ ಮೈಸೂರು ಅರಮನೆ ಖಚಿತಪಡಿಸಿಲ್ಲ. ಈ ವಿಷಯದಲ್ಲಿ ಮೈಸೂರು ಅರಮನೆಯವರು ತುಂಬಾ ಮಗುಂ. ಕಳೆದ ಬಾರಿ ತ್ರಿಶಿಕಾ ಗರ್ಭಿಣಿಯಾಗಿದ್ದುದನ್ನು ಸುದ್ದಿ ಮಾಡಿದಾಗಲೇ ಯದುವೀರ್‌ ಮೀಡಿಯಾಗಳ ಮೇಲೆ ಗರಂ ಆಗಿದ್ದರು. "ಅದು ನಮ್ಮ ಖಾಸಗಿ ವಿಷಯ" ಅಂದಿದ್ದರು. ಆದ್ರೆ ಸದ್ಯದಲ್ಲೇ ರಾಣಿ ತ್ರಿಶಿಕಾ ಗುಡ್‌ ನ್ಯೂಸ್‌ ಕೊಡಲಿದ್ದಾರೆ ಅಂತಿವೆ ಅರಮನೆಯ ಗುಪ್ತ ಮೂಲಗಳು.

Tap to resize

Latest Videos

undefined

ಅದೆಲ್ಲ ಸರಿ. ಇನ್ನೊಂದು ಮಗು ಮಾಡಿಕೊಳ್ಳಬೇಕು ಎಂಬ ಉತ್ಸಾಹ ಯದುವೀರ್‌ ದಂಪತಿಗೆ ಬಂದುದು ಕುತೂಹಲಕರ. ಯಾಕೆಂದರೆ ಈಗ ಹೆಚ್ಚಿನವರೆಲ್ಲಾ ಒಂದೊಂದೇ ಮಗುವಿಗೆ ಸಾಕು ಮಾಡುತ್ತಾರೆ. ಅರಮನೆಯ ಹಿಂದಿನ ಹಿಸ್ಟರಿ ತೆಗೆದು ನೋಡಿದರೆ ಒಬ್ಬೊಬ್ಬ ಮಕ್ಕಳೇ ಹೆಚ್ಚು. ಇಬ್ಬರು ಇಲ್ಲವೆಂದೇನಲ್ಲ. ಯದುವೀರರಿಗೆ ಈಗಾಗಲೇ ಮುಂದಿನ ಅರಸು ಕುಡಿ ಆದ್ಯವೀರನ ರೂಪದಲ್ಲಿ ಬಂದಾಗಿದೆ. ಇನ್ನೊಂದು ಮಗು- ಹೆಣ್ಣಾದರೆ ಒಳ್ಳೆಯದು, ಇರಲಿ- ಅಂತ ಅಂದುಕೊಂಡಿರಬಹುದೋ ಏನೋ. ಮೈಸೂರು ಅರಸು ಮನೆತನಕ್ಕೆ ಅದು ಖುಷಿಯ ವಿಚಾರವೇ. 

ಮೈಸೂರು ಅರಮನೆಯ ಇತಿಹಾಸ ಬಲ್ಲವರಿಗೆ ಅಲಮೇಲಮ್ಮನ ಶಾಪದ ವಿಚಾರ ಗೊತ್ತಿದ್ದೇ ಇರುತ್ತದೆ. ʼʼಮೈಸೂರು ಅರಸರಿಗೆ ಮಕ್ಕಳಾಗದಿರಲಿ" ಅನ್ನುವುದು ಅಲಮೇಲಮ್ಮನದ ಶಾಪದ ನುಡಿ ಅನ್ನುತ್ತಾರೆ. ಅಲಮೇಲಮ್ಮನ ಶಾಪದ ಪ್ರಭಾವ ಎನ್ನುವಂತೆ ಅಂದಿನಿಂದ ಇಂದಿನ ತನಕವೂ ತಲಕಾಡು ಮರಳು ತುಂಬಿದ ಪ್ರದೇಶವಾಗಿದೆ. ಹಾಗೆಯೇ ಇದರ ಸಮೀಪದ ಮಾಲಂಗಿ ಕೂಡ ಮಡುವಾಗಿ ಭಯಂಕರ ಪ್ರಪಾತವಾಗಿದೆ. ಅಷ್ಟೇ ಅಲ್ಲ ಆ ಕಾಲದಿಂದಲೂ ಮೈಸೂರು ಅರಸರಿಗೆ ಮಕ್ಕಳಾಗದೆ ಅವರು ದತ್ತು ಪಡೆದವರಿಗೆ ಮಾತ್ರ ಸಂತಾನ ಪ್ರಾಪ್ತವಾಗುವುದು ನಡೆದುಕೊಂಡು ಬರುತ್ತಿದೆ. ಅದು ಇಲ್ಲಿಯವರೆಗೂ ಸುಳ್ಳಾದುದೇ ಇಲ್ಲ.

ಎಂಟು ವರ್ಷದ ಕೆಳಗೆ ನಾವಿಬ್ರೂ ಹೇಗಿದ್ವಿ ಗೊತ್ತಾ? ಕೇಳ್ತಿದ್ದಾರೆ ಮೈಸೂರು ಮಹಾರಾಣಿ

ಅದಕ್ಕಾಗಿಯೇ ಇಲ್ಲಿ ಸಂತಾನವಿಲ್ಲದ ತಲೆಮಾರಿನಲ್ಲಿ ದತ್ತು ತೆಗೆದುಕೊಳ್ಳಲಾಗುತ್ತದೆ. ಆದರೆ ಅರಮನೆಯಲ್ಲಿಯೇ ಜನಿಸಿದ ಮಕ್ಕಳಿಗೆ ಮಕ್ಕಳಾಗುವುದಿಲ್ಲ. ಅಂದರೆ, ಈ ಹಿಂದಿನ ಶ್ರೀಕಂಠದತ್ತ ಅರಸಿಂಹರಾಜ ಒಡೆಯರ್‌ ಅವರು ಸ್ವತಃ ಅರಮನೆಯಲ್ಲೇ ಜನಿಸಿದ ಕುಡಿ. ಅವರಿಗೆ ಮಕ್ಕಳಾಗಲಿಲ್ಲ. ಅದಕ್ಕಾಗಿಯೇ ಯದುವೀರರನ್ನು ದತ್ತು ತೆಗೆದುಕೊಳ್ಳಲಾಯಿತು. ದತ್ತುಮಕ್ಕಳಿಗೆ ಮಕ್ಕಳಾಗದಿರಲಿ ಎಂದೇನೂ ಅಲಮೇಲಮ್ಮನ ಶಾಪ ಇಲ್ಲ. ಹೀಗಾಗಿ ಯದುವೀರರಿಗೆ ಮಕ್ಕಳಾಗಲು ಯಾವ ಅಭ್ಯಂತರವೂ ಇಲ್ಲ. ಅಲಮೇಲಮ್ಮನ ಘಟನೆ ನಡೆದ ಬಳಿಕ ಮಹಾರಾಜರು ಅಲಮೇಲಮ್ಮನ ಶಾಪ ನಿವಾರಣೆಗಾಗಿ ಅಲಮೇಲಮ್ಮನ ಚಿನ್ನದ ವಿಗ್ರಹವೊಂದನ್ನು ಮಾಡಿಸಿ ಅವರ ಕಾಲದಿಂದಲೇ ನವರಾತ್ರಿ ಹಬ್ಬದಲ್ಲಿ ಅದಕ್ಕೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ಜಾರಿಗೆ ತಂದರು ಎನ್ನಲಾಗಿದ್ದು, ಅಲ್ಲಿಂದ ಇಲ್ಲಿವರೆಗೂ ನಿರಂತರವಾಗಿ ಪೂಜೆ ನಡೆದುಕೊಂಡು ಬಂದಿದೆ.

Royal Love Story: ಮಹಾರಾಜ ಯದುವೀರ್- ತ್ರಿಶಿಕಾ, ಇಬ್ಬರ ನಡುವೆ ಪ್ರೀತಿ ಮೂಡಿದ್ಹೇಗೆ ?

ಮೈಸೂರು ಅರಮನೆಗೆ ರಾಣಿಯಾಗಿ ಬಂದಿರುವ ತ್ರಿಶಿಕಾ ತಮ್ಮ ಸರಳತೆ, ಘನತೆಯಿಂದ ಗಮನ ಸೆಳೆಯುತ್ತಾರೆ. ಸ್ವತಃ ಅರಸು ಮನೆತನದವರಾಗಿ ಹುಟ್ಟಿ ಬೆಳೆದಿದ್ದರೂ ಅವರಿಗೆ ಯಾವುದೇ ಹಮ್ಮು ಬಿಮ್ಮು ಇಲ್ಲ. ಇತ್ತೀಚೆಗೆ ಮೈಸೂರಿಗೆ ಸರ್ವೇಸಾಮಾನ್ಯರಂತೆ ಟ್ರೇನ್‌ನಲ್ಲಿ ಆಗಮಿಸಿ ಮತ್ತೊಮ್ಮೆ ಗಮನ ಸೆಳೆದಿದ್ದರು. ಅವರಿಗೆ ಯದುವೀರ್‌ ಸಾಥ್‌ ನೀಡಿದ್ದರು. ಮೈಸೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್‌ ಪಡೆದ ಬಳಿಕ ಯದುವೀರ್‌ ಅವರು ಕೂಡ ಜನಸಾಮಾನ್ಯರ ಜೊತೆಗೆ ಹೆಚ್ಚು ಬೆರೆತರು. ನಂತರ ಗೆದ್ದರು. ಇದೀಗ ಅವರಿಗೆ ಇನ್ನೊಂದು ಮಗುವಾಗುತ್ತದೆ ಎಂದರೆ ಅರಮನೆಯ ಆಪ್ತರಲ್ಲಿ ಉತ್ಸಾಹ ನೂರು ಪಟ್ಟು ಆಗುವುದು ನಿಜ.  

 

click me!