'ಒಕ್ಕಲಿಗರು ಸಂಸ್ಕೃತಿಹೀನರು' ಎಂಬ ಕೆಎಸ್ ಭಗವಾನ್ ಹೇಳಿಕೆಗೆ ಮುಖ್ಯಮಂತ್ರಿ ಚಂದ್ರು ಆಕ್ಷೇಪ

By Ravi Janekal  |  First Published Oct 15, 2023, 5:18 PM IST

ಬೆಂಗಳೂರಿನಲ್ಲಿ ನಡೆದ ಐಟಿ ದಾಳಿ ಪ್ರಕರಣ ಪ್ರಸ್ತಾಪಿಸಿದ ಅವರು, ಐಟಿ ರೇಡ್ ಮಾಡಿರುವುದು ಸಂತೋಷ, ಚೆನ್ನಾಗಿದೆ. ಆ ಕಳ್ಳರು ಮಾಡಿದನ್ನ 40% ಅಂತಾ ಈ ಕಳ್ಳರು ಎತ್ತಿ ಹಿಡಿದರು. ಈ ಕಳ್ಳರು ಮಾಡಿದ್ದನ್ನ ಅವರು ಎತ್ತಿ ಹಿಡಿಯುತ್ತಿದ್ದಾರೆ. ಒಟ್ಟಿನಲ್ಲಿ ಇಬ್ಬರೂ ಕಳ್ಳರು ಎಂದು ಕಾಂಗ್ರೆಸ್-ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.


ವಿಜಯಪುರ (ಅ.15): ಮತ್ತೊಬ್ಬರಿಗೆ ನೋವಾಗುವಂತೆ ಮಾತನಾಡುವುದು ತಪ್ಪು. ಅದು ಯಾರೇ ಮಾತನಾಡಿದ್ರು ತಪ್ಪು ಎಂದು ಹಿರಿಯ ನಟ, ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.

ಮಹಿಷಾ ದಸರಾ ವೇಳೆ ಒಕ್ಕಲಿಗರ ಕುರಿತು ಕೆಎಸ್‌ ಭಗವಾನ್ ಅವಹೇಳನಕಾರಿ ಮಾತು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲರಿಗೂ ತಮ್ಮದೇ ಆದ ಗೌರವ ಇದೆ. ಬೇರೆಯವರ ನಂಬಿಕೆಗಳನ್ನು ಟೀಕೆ ಮಾಡಬಾರದು, ವ್ಯಾಖ್ಯಾನಿಸುವಾಗ ಯಾರಿಗೂ ನೋವಾಗಬಾರದು ಎಂದು ಕೆಎಸ್‌ ಭಗವಾನ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.

Tap to resize

Latest Videos

ನಮ್ಮದು ಒಕ್ಕೂಟ ವ್ಯವಸ್ಥೆ. ಇಲ್ಲಿ ವಿಭಿನ್ನ ಧರ್ಮ, ಜೀವನ ಪದ್ದತಿಗಳಿವೆ. ದೇವರಲ್ಲಿ ಮಾಂಸಾಹಾರಿ ದೇವರಿಗಳಿವೆ ಹಾಗೇ ಸಸ್ಯಾಹಾರಿ ದೇವರುಗಳಿವೆ. ನಾಜ್ ವೆಜ್ ದೇವರು ಅಂತಾ ಮಡಿಗಿಡಿ ಅನ್ನೋಕೆ ಆಗತ್ತಾ? ಪದ್ಧತಿಗಳನ್ನ ಟೀಕೆ ಮಾಡೋದಕ್ಕಿಂತ ಅವರವರ  ಧರ್ಮಗಳಿಗೆ ಬಿಟ್ಟು ಬಿಡಬೇಕು ಎಂದರು ಅಭಿಪ್ರಾಯಪಟ್ಟರು.

ಎನ್‌ಡಿಎ ಆಡಳಿತ ಕೊನೆಗಾಣಿಸಲು ಇಂಡಿಯಾ ಕೂಟದಲ್ಲಿ ಭಾಗಿ: ಮುಖ್ಯಮಂತ್ರಿ ಚಂದ್ರು

ಇನ್ನು ಬೆಂಗಳೂರಿನಲ್ಲಿ ನಡೆದ ಐಟಿ ದಾಳಿ ಪ್ರಕರಣ ಪ್ರಸ್ತಾಪಿಸಿದ ಅವರು, ಐಟಿ ರೇಡ್ ಮಾಡಿರುವುದು ಸಂತೋಷ, ಚೆನ್ನಾಗಿದೆ. ಆ ಕಳ್ಳರು ಮಾಡಿದನ್ನ 40% ಅಂತಾ ಈ ಕಳ್ಳರು ಎತ್ತಿ ಹಿಡಿದರು. ಈ ಕಳ್ಳರು ಮಾಡಿದ್ದನ್ನ ಅವರು ಎತ್ತಿ ಹಿಡಿಯುತ್ತಿದ್ದಾರೆ. ಒಟ್ಟಿನಲ್ಲಿ ಇಬ್ಬರೂ ಕಳ್ಳರು ಎಂದು ಕಾಂಗ್ರೆಸ್-ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ-ಕಾಂಗ್ರೆಸ್ ಪಕ್ಷಗಳಿಗೆ ರಾಜ್ಯವಾಳುವ ಅರ್ಹತೆ ಇಲ್ಲ. ಮೂರು ಪಾರ್ಟಿಗಳು ಅವೇ ಇವೆ. ಅಧಿಕಾರಕ್ಕೆ ಬಂದಾಗೆಲ್ಲ ಹಗರಣ, ಲೂಟಿ ಮಾಡೋದೇ ಕಾಯಕ. ಮೂರನೇಯದ್ದು ಯಾವಾಗ ಬರುತ್ತೋ ನೋಡೋಣ. ಜೆಡಿಎಸ್ ಬಿಜೆಪಿಯೊಂದಿಗೆ ಸೇರಿರುವುದರಿಂದ ಈಗ ರೇಡ್ ಆಗದೇ ಇರಬಹುದು ಮುಂದೆ ಆಗಬಹುದು ನೋಡೋಣ ಎಂದು ಜೆಡಿಎಸ್ ವಿರುದ್ಧವೂ ವಾಗ್ದಾಳಿ ಚಂದ್ರು. 

 

ಎಎಪಿ ರಾಜ್ಯದಲ್ಲಿ ಪರ್ಯಾಯ ಶಕ್ತಿಯಾಗಿ ಉದಯವಾಗಲಿದೆ: ಮುಖ್ಯಮಂತ್ರಿ ಚಂದ್ರು

click me!