ಅಣ್ಣವ್ರ ಅಭಿನಯದ ಬಂಗಾರದ ಮನುಷ್ಯ ಚಿತ್ರದ 'ಬಾಳಬಂಗಾರ ನೀನು, ಹಣೆಯ ಸಿಂಗಾರ ನೀನು..' ಗಾಯಕ ಹಾಡುತ್ತಿದ್ದಂತೆ ಹಾಡಿಗೆ ಸಿಎಂ ಸಿದ್ದರಾಮಯ್ಯ ತಲೆದೂಗಿದರು. ಗಾಯಕರು ತನಗಿಷ್ಟದ ಹಾಡು ಹಾಡ್ತಿದ್ದಂತೆ ಅವರನ್ನೇ ನೋಡುತ್ತಾ ಕುಳಿತ ಸಿದ್ದರಾಮಯ್ಯ. ಹಾಡು ಮುಗಿವವರೆಗೂ ಬೇರೆಡೆ ಗಮನ ಹರಿಸದೆ ಸಂಪೂರ್ಣ ಹಾಡು ಎಂಜಾಯ್ ಮಾಡಿದರು.
ಮೈಸೂರು (ಅ.15): ನಾಡಹಬ್ಬ ವಿಶ್ವಪ್ರಸಿದ್ಧ ದಸರಾ ಹಬ್ಬದ ಪ್ರಯುಕ್ತ 'ದಸರಾ ಚಲನಚಿತ್ರೋತ್ಸವ'ಕ್ಕೆ ರಿಮೋಟ್ ಒತ್ತುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಚಾಲನೆ ನೀಡಿದರು.
ಮೈಸೂರಿನ ಕಲಾಮಂದಿರದಲ್ಲಿ ನಡೆಯುತ್ತಿರುವ ಕಾರ್ಯಕ್ರಮ. ಹಾಸ್ಯ ನಟ ನರಸಿಂಹರಾಜು ಜನ್ಮ ಶತಮಾನೋತ್ಸವ ಹಿನ್ನೆಲೆ. ಕಾರ್ಯಕ್ರಮದಲ್ಲಿ ಗಣ್ಯರಿಂದ ನರಸಿಂಹ ರಾಜು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಇದೇ ವೇಳೆ ವೇದಿಕೆ ಪರದೆಯ ಮೇಲೆ ನರಸಿಂಹರಾಜು ಜೀವನ ಕುರಿತ ವಿಡಿಯೋ ಪ್ರದರ್ಶನ ಮಾಡಲಾಯಿತು.
ನಾಡಿನ ಕಲೆ, ಸಂಸ್ಕೃತಿಯನ್ನ ದಸರಾ ಮೂಲಕ ಜಗತ್ತಿಗೆ ತಿಳಿಸುವ ಕಾರ್ಯ ನಮ್ಮ ಸರ್ಕಾರ ಮಾಡುತ್ತೆ: ಸಿದ್ದರಾಮಯ್ಯ
ನಾಳೆಯಿಂದ 7 ದಿನಗಳ ಕಾಲ ನಡೆಯಲಿರುವ ದಸರಾ ಫಿಲ್ಮ್ ಫೆಸ್ಟ್. ಮಲ್ಟಿಪ್ಲೆಕ್ಸ್‌ನ 4 ಪರದೆಗಳಲ್ಲಿ ಪ್ರದರ್ಶನಗೊಳ್ಳಲಿರುವ ಒಟ್ಟು 112 ಚಿತ್ರಗಳು. ವಿಶ್ವ ಚಲನಚಿತ್ರ, ಭಾರತೀಯ ಹಾಗೂ ಕನ್ನಡ ಚಲನಚಿತ್ರಗಳ ಪ್ರದರ್ಶನಗೊಳ್ಳಲಿವೆ. ಇದರ ಜೊತೆಗೆ ಕಿರು ಚಿತ್ರ ಹಾಗೂ ಮಕ್ಕಳ ಚಲನಚಿತ್ರಗಳು ಪ್ರದರ್ಶನ ಇರಲಿದೆ. ಉತ್ತಮ, ಸಾಮಾಜಿಕ ಸಂದೇಶ ಸಾರುವ, ಪ್ರಶಸ್ತಿ ಪುರಸ್ಕೃತ ಸೂಪರ್ ಹಿಟ್ ಸಿನೆಮಾಗಳ ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ಸಕ್ಸಸ್ ಕಂಡ ಕಾಂತಾರ, ಸಪ್ತಸಾಗರದಾಚೆ ಎಲ್ಲೋ, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸೇರಿದಂತೆ ಹಲವು ಕನ್ನಡ ಸಿನೆಮಾ ಪ್ರದರ್ಶನವಿರುತ್ತದೆ. ಈ ಪ್ರದರ್ಶನದಲ್ಲಿ ಸಾರ್ವಜನಿಕರಿಗೆ 500, ವಿದ್ಯಾರ್ಥಿಗಳಿಗೆ 300ರೂ ಟಿಕೆಟ್ ದರ ನಿಗದಿ ಪಡಿಸಲಾಗಿದೆ.
ಕರ್ನಾಟಕದಲ್ಲಿ ಕನ್ನಡ ಬಾರದವರ ಬಗ್ಗೆ ಸಮೀಕ್ಷೆ ಮಾಡಿ: ಮೈಸೂರು ದಸರಾ ಉದ್ಘಾಟಕ ಹಂಸಲೇಖ ಮನವಿ
ಬಾಳ ಬಂಗಾರ ನೀನು ಹಾಡಿಗೆ ತಲೆದೂಗಿದ ಸಿಎಂ
ಕಾರ್ಯಕ್ರಮದಲ್ಲಿ ಅಣ್ಣವ್ರ ಅಭಿನಯದ ಬಂಗಾರದ ಮನುಷ್ಯ ಚಿತ್ರದ 'ಬಾಳಬಂಗಾರ ನೀನು, ಹಣೆಯ ಸಿಂಗಾರ ನೀನು..' ಗಾಯಕ ಹಾಡುತ್ತಿದ್ದಂತೆ ಹಾಡಿಗೆ ಸಿಎಂ ಸಿದ್ದರಾಮಯ್ಯ ತಲೆದೂಗಿದರು. ಗಾಯಕರು ತನಗಿಷ್ಟದ ಹಾಡು ಹಾಡ್ತಿದ್ದಂತೆ ಅವರನ್ನೇ ನೋಡುತ್ತಾ ಕುಳಿತ ಸಿದ್ದರಾಮಯ್ಯ. ಹಾಡು ಮುಗಿವವರೆಗೂ ಬೇರೆಡೆ ಗಮನ ಹರಿಸದೆ ಸಂಪೂರ್ಣ ಹಾಡು ಎಂಜಾಯ್ ಮಾಡಿದರು.