
ಚಿಕ್ಕೋಡಿ (ಅ.15): ಮನೆಯವರ ವಿರೋಧದ ನಡುವೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವತಿಯ ಕುಟುಂಬಸ್ಥರು ಜೀವ ಬೆದರಿಕೆಯೊಡ್ಡಿರುವ ಹಿನ್ನೆಲೆ ತಮಗೆ ರಕ್ಷಣೆ ನೀಡುವಂತೆ ದಂಪತಿಗಳು ಸಿಎಂ ಸಿದ್ದರಾಮಯ್ಯ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದವರಾದ ಸರೋಜಿನಿ ಮನಗುತ್ತಿ, ಪ್ರಕಾಶ್ ಹಳೆಗೌಡರ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಸುಲ್ತಾನಪುರ ಗ್ರಾಮದಲ್ಲಿ ಎದುರು ಬದುರು ಮನೆಯಲ್ಲಿ ವಾಸಿಸುತ್ತಿರುವ ಸರೋಜಿನಿ, ಪ್ರಕಾಶ್ ಕುಟುಂಬ. ಈ ನಡುವೆ ಇಬ್ಬರಿಗೆ ಪ್ರೀತಿ ಚಿಗುರೊಡೆದಿದೆ. ಆದರೆ ಇಬ್ಬರ ಪ್ರೀತಿಗೆ ವಿರೋಧಿಸಿದ್ದ ಸರೋಜಿನಿ ಕುಟುಂಬಸ್ಥರು. ಮದುವೆಗೆ ವಿರೋಧಿಸಿದ್ದರಿಂದ ಮನೆಯಿಂದ ಓಡಿಹೋಗಿ ಸಬ್ ರಿಜಿಸ್ಟ್ರಾರ್ ಮದುವೆಯಾಗಿದ್ದ ಸರೋಜಿನಿ, ಪ್ರಕಾಶ.
ಮಗಳನ್ನೇ ಕೊಲೆ ಮಾಡಲು ಅಪ್ಪ ನಿರ್ಧರಿಸಿದ್ದೇಕೆ..? ಮರ್ಯಾದಾ ಹತ್ಯೆಯಿಂದಿತ್ತು ಕರುಣಾಜನಕ ಕಥೆ..!
ರಿಜಿಸ್ಟ್ರಾರ್ ಮದುವೆಯಾಗಿ ಮನೆಬಿಟ್ಟು ಹೋಗಿರುವ ದಂಪತಿ. ಸರೋಜಿನಿ ಕುಟುಂಬಸ್ಥರ ಕಣ್ತಪ್ಪಿಸಿ ಬದುಕುತ್ತಿರುವ ಯುವ ಜೋಡಿ. ಇತ್ತ ಸರೋಜಿನಿ ಕುಟುಂಬಸ್ಥರು ಪ್ರಕಾಶ್ ಕುಟುಂಬಸ್ಥರೊಂದಿಗೆ ಜಗಳವಾಡಿ ಜೀವ ಬೆದರಿಕೆಯೊಡ್ಡಿದ್ದಾರೆ. ಅವನು ಎಲ್ಲಾದರೂ ಸಿಕ್ಕರೆ ಕೊಂದುಬಿಡುತ್ತೇವೆ ಎಂದು ಬೆದರಿಕೆ. ಸರೋಜಿನಿ ತಂದೆ ಲಗಮಣ್ಣ ಮನಗುತ್ತಿ, ಅಣ್ಣ ಪ್ರಸಾದ್, ಮಾವಂದಿರು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಸುಲ್ತಾನಪುರದಲ್ಲಿ ಮನೆಗೆ ಹೋಗಲು ಪ್ರಕಾಶ್ ಕುಟುಂಬಸ್ಥರಿಗೆ ದಾರಿ ನೀಡುತ್ತಿಲ್ಲ ಎಂದು ಆರೋಪ ಕೇಳಿಬಂದಿದೆ.
ಈ ಹಿನ್ನೆಲೆ ಯುವ ಜೋಡಿ ಬೆಳಗಾವಿ ಎಸ್‌ಪಿಗೆ ಕರೆ ಮಾಡಿ ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದರು. ಆದರೆ ಖುದ್ದು ನೀವೇ ಇಲ್ಲಿಗೆ ಬಂದು ದೂರು ಕೊಡಿ ಎಂದಿರುವ ಬೆಳಗಾವಿ ಎಸ್‌ಪಿ. ಆದರೆ ಯುವ ಜೋಡಿ ಸದ್ಯ ಗುಜರಾತ್‌ನಲ್ಲಿ ವಾಸವಿದ್ದು, ಜೀವ ಬೆದರಿಕೆ ಹಿನ್ನೆಲೆ ಬರಲು ಸಾಧ್ಯವಾಗಿಲ್ಲ. ನಮ್ಮ ಕುಟುಂಬಸ್ಥರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಇಮೇಲ್ ಮೂಲಕ ದೂರು ನೀಡುತ್ತೇವೆಂದರೂ ಒಪ್ಪದ ಬೆಳಗಾವಿ ಎಸ್‌ಪಿ.
ಸಿನಿಮೀಯ ರೀತಿಯಲ್ಲಿ ಬಳ್ಳಾರಿಯಲ್ಲಿ ಅಪಹರಣ ಕೊಪ್ಪಳದಲ್ಲಿ ಅತ್ಯಚಾರ!
ಹೀಗಾಗಿ ನಮಗೆ ನೀವೆ ರಕ್ಷಣೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ವಿಡಿಯೋ ಮೂಲಕ ಮನವಿ ಮಾಡಿದ ದಂಪತಿ. ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಯುವಜೋಡಿ ಮನವಿ. ತಮಗೆ ಹಾಗೂ ತನ್ನ ಗಂಡ ಪ್ರಕಾಶ್ ಕುಟುಂಬಸ್ಥರಿಗೆ ಏನೇ ಆದರೂ ನನ್ನ ತಂದೆ, ಕುಟುಂಬಸ್ಥರೇ ಹೊಣೆ ಎಂದು ವಿಡಿಯೋ ಮೂಲಕ ಹೇಳಿಕೆ ನೀಡಿರುವ ಸರೋಜಿನಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ