ಏಯ್ ಯಾರ್ರೀ ಅವ್ನು ವಿಶ್ವನಾಥ್ ಹಾ ರಿಯಲ್ ಎಸ್ಟೇಟ್ ಒಂದು ಉದ್ಯಮ ಅಲ್ವ? ಅವ್ನು ಅವನ ಮಗ ಸೈಟ್ ಕೇಳೋಕೆ ನನ್ನ ಮನೆಗೆ ಬಂದಿದ್ರು ಫೋಟೊ ಇದೆ ಎಂದು ಹಳ್ಳಿ ಹಕ್ಕಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಚಾಮರಾಜನಗರ (ಜು.5): ಏಯ್ ಯಾರ್ರೀ ಅವ್ನು ವಿಶ್ವನಾಥ್ ಹಾ ರಿಯಲ್ ಎಸ್ಟೇಟ್ ಒಂದು ಉದ್ಯಮ ಅಲ್ವ? ಅವ್ನು ಅವನ ಮಗ ಸೈಟ್ ಕೇಳೋಕೆ ನನ್ನ ಮನೆಗೆ ಬಂದಿದ್ರು ಫೋಟೊ ಇದೆ ಎಂದು ಹಳ್ಳಿ ಹಕ್ಕಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
'ಸಚಿವ ಭೈರತಿ ಸುರೇಶ್ ಒಬ್ಬ ರಿಯಲ್ ಎಸ್ಟೇಟ್ ಗಿರಾಕಿ, ಸಿದ್ದರಾಮಯ್ಯನ ಅಪ್ಪಟ ಶಿಷ್ಯ'ನೆಂಬ ಎಚ್ ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದ ಬೈರತಿ ಸುರೇಶ್, ಅವ್ನು ನನ್ನ ವಿರುದ್ಧ ಏಕವಚನ ಬಳಸಿದ್ರೆ, ನಾನು ಅದಕ್ಕಿಂತ ಹೆಚ್ಚಿಗೆ ಮಾತಾಡ್ತೇನೆ. ನಾನೂ ಹಳ್ಳಿಯಲ್ಲೇ ಹುಟ್ಟಿರೋದು, ಅವರಪ್ಪನಂಗೆ ನಾನೂ ಮಾತಾಡ್ತೇನೆ ನನಗೂ ಬರುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಭೈರತಿ ಸುರೇಶ್ ರಿಯಲ್ ಎಸ್ಟೇಟ್ ಗಿರಾಕಿ, ಸಿಎಂ ಸಿದ್ದರಾಮಯ್ಯ ಅಪ್ಪಟ ಶಿಷ್ಯ: ಎಚ್.ವಿಶ್ವನಾಥ್
ವಿಶ್ವನಾಥ್ ಒಬ್ಬ ರೋಲ್ ಕಾಲ್ ಗಿರಾಕಿ. ವಯಸ್ಸಾಗಿದೆ ಅಂತಾ ಅಷ್ಟೇ ಬೆಲೆ ಕೊಡ್ತೇನೆ ಅದನ್ನ ಉಳಿಸಿಕೊಳ್ಳಲಿ. ಅದನ್ನ ಬಿಟ್ಟು ನಾಲಗೆ ಹರಿಬಿಟ್ಟರೆ ನಾನು ಮಾತನಾಡ್ತೇನೆ ಎಂದು ಬೈರತಿ ಸುರೇಶ್ ಕೆಂಡಾಮಂಡಲರಾದರು.
ಸಚಿವ ಭೈರತಿ ಸುರೇಶ್ ಒಬ್ಬ ರಿಯಲ್ ಎಸ್ಟೇಟ್ ಗಿರಾಕಿ, ಸಿದ್ದರಾಮಯ್ಯ ಅಪ್ಪಟ ಶಿಷ್ಯ ಎಂದು ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್ ವ್ಯಂಗ್ಯ ಮಾಡಿದ್ದರು.