ವಾಲ್ಮೀಕಿ ನಿಗಮ ಹಗರಣಕ್ಕೂ ನನಗೂ ಸಂಬಂಧವಿಲ್ಲ: ಸಚಿವ ಶರಣಪ್ರಕಾಶ್ ಪಾಟೀಲ್

By Suvarna News  |  First Published Jul 5, 2024, 10:54 PM IST

ವಾಲ್ಮೀಕಿ ನಿಮಗದ ಹಗರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಯಾರೋ ಬಂದೋ ನನ್ನ ಕಚೇರಿಯಲ್ಲಿ ಕುಳಿತು ಹೋದರೆ ಅದಕ್ಕೆ ನಾನು ಹೇಗೆ ಜವಾಬ್ದಾರಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಪ್ರಶ್ನಿಸಿದ್ದಾರೆ. 


ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜು.5) : ವಾಲ್ಮೀಕಿ ನಿಮಗದ ಹಗರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಯಾರೋ ಬಂದೋ ನನ್ನ ಕಚೇರಿಯಲ್ಲಿ ಕುಳಿತು ಹೋದರೆ ಅದಕ್ಕೆ ನಾನು ಹೇಗೆ ಜವಾಬ್ದಾರಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಪ್ರಶ್ನಿಸಿದ್ದಾರೆ. 

Tap to resize

Latest Videos

ಮಡಿಕೇರಿ(Madikeri)ಯಲ್ಲಿ ಮಾತನಾಡಿದ ಅವರು ನಾನು ಐದು ವರ್ಷ ಮಂತ್ರಿಯಾಗಿ ಈ ರಾಜ್ಯದಲ್ಲಿ ಕೆಲಸ ಮಾಡಿದ್ದೇನೆ. ನಾನು ಯಾವತ್ತೂ ಪ್ರಾಮಾಣಿಕತೆಯಿಂದ ಕೆಲಸ ಮಾಡುವುದರಲ್ಲಿ ವಿಶ್ವಾಸ ಇಟ್ಟವನು. ಆ ಆಫೀಸ್ ನನ್ನ ವೈಯಕ್ತಿಕ ಕಚೇರಿ ಅಲ್ಲ. ಅದು ಸರ್ಕಾರ ನೀಡಿರುವ ಕಚೇರಿ, ಸಾರ್ವಜನಿಕರ ಕಚೇರಿ. ಹೀಗಾಗಿ ಯಾರಾದರೂ ಬರುತ್ತಾರೆ ಯಾರದರೂ ಹೋಗುತ್ತಾರೆ, ಬರುವವರಿಗೆ ನಾನು ಬೇಡ ಎನ್ನುವುದಕ್ಕೆ ಆಗಲ್ಲ. ಏನು ನಡೆದಿದೆ, ನಾನು ಅಂದು ಆಫೀಸಿಗೆ ಹೋಗಿಲ್ಲ ಎಂದು ಸಿಸಿಕ್ಯಾಮೆರಾ ವಿಶ್ಯುವಲ್ಸ್ ಸಮೇತ ಸ್ಪಷ್ಟೀಕರಣ ಕೊಟ್ಟಿದ್ದೇನೆ. ಇಂತಹ ಕೆಲಸಗಳನ್ನು ಮಾಡುವುದಿರಲಿ ಅಂತಹ ಆಲೋಚನೆಗಳೂ ಬರುವುದಿಲ್ಲ ಎಂದು ಸಚಿವ ಶರಣ ಪ್ರಕಾಶ ಪಾಟೀಲ್ ಹೇಳಿದರು. 

ವಿಜಯಪುರದಲ್ಲಿದ್ದಾಳೆ ರಾಜಕಾರಣಿಗಳ ಲಕ್ ಖುಲಾಯಿಸೋ ದೇವಿ! ದೇಶದ ಮೂಲೆ ಮೂಲೆಯಿಂದ ಬರ್ತಾರೆ ಮಂತ್ರಿ, ಧುರೀಣರು!

ನಿಮ್ಮ ಕಚೇರಿಗೆ ಬಂದು ಕುಳಿತು ಮಾತನಾಡಿರುವವರಿಗೆ ನೋಟಿಸ್ ಕೊಟ್ಟಿದ್ದಾರೆಯೇ ಎಂದಿದ್ದಕ್ಕೆ ಅದು ನನಗೆ ಗೊತ್ತಿಲ್ಲ. ಸಿಬಿಐ ಮತ್ತು ಎಸ್ಐಟಿ ಎರಡು ತನಿಖೆ ನಡೆಸುತ್ತಿವೆ. ಈ ಸಂದರ್ಭದಲ್ಲಿ ಒಬ್ಬ ಸಚಿವನಾಗಿ ನಾನು ಏನೂ ಮಾತನಾಡುವುದಿಲ್ಲ ಎಂದು ಮಡಿಕೇರಿಯಲ್ಲಿ ಸಚಿವ ಶರಣ ಪ್ರಕಾಶ ಪಾಟೀಲ್(Sharan prakash patil) ಹೇಳಿದ್ದಾರೆ. ನನಗೆ ಗೊತ್ತಿರುವಂತೆ ಸೈಟುಗಳ ಹಂಚಿಕೆ ಮಾಡಿರುವುದೇ ಬಿಜೆಪಿ ಸರ್ಕಾರದಲ್ಲಿ. ಹಿಂದಿನ ಸರ್ಕಾರದಲ್ಲಿ ಬದಲಿ ಸೈಟು ಕೊಟ್ಟಿದ್ದಾರೆ. ಹೀಗಿರುವಾಗ ಮುಡಾ ಸೈಟು ಅಲರ್ಟ್ ಮೆಂಟಿನಲ್ಲಿ ಹಗರಣ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು. ಇದರಲ್ಲಿ ಹಗರಣ ಏನಿದೆ ಎಂದರು. ಈ ರೀತಿ ಗೊಂದಲ ಸೃಷ್ಟಿ ಮಾಡುವುದರಲ್ಲಿ ಬಿಜೆಪಿಯವರದ್ದು ಹಳೇ ಸ್ವಭಾವ. ಇದರಿಂದ ಏನೂ ಆಗಲ್ಲ. ಇದನ್ನು ನಮ್ಮ ಕಡೆ ಮೊಸರಲ್ಲಿ ಕಲ್ಲು ಹುಡುಕುವುದು ಎನ್ನುತ್ತಾರೆ, ಏನೂ ಸಿಕ್ಕಿಲ್ಲ ಅಂದ್ರೆ ಮೊಸರಲ್ಲಿ ಕಲ್ಲು ಹುಡುಕುವುದು ಎಂದು ಬಿಜೆಪಿ ನಾಯಕರನ್ನು ಟೀಕಿಸಿದರು. 

ಬಿಜೆಪಿ ಸರ್ಕಾರದಲ್ಲಿ ಯಾವ ರೀತಿ ಆಡಳಿತ ಇತ್ತು ಎನ್ನುವುದು ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ನಮ್ಮ ಸರ್ಕಾರ ಪ್ರಾಮಾಣಿಕ, ಪಾರದರ್ಶಕ ಆಡಳಿತ ಕೊಡುವ ಪ್ರಯತ್ನ ಮಾಡುತ್ತಿದೆ. ನಮ್ಮ ಸರ್ಕಾರ ಅಭಿವೃದ್ಧಿ ಜೊತೆಗೆ ಒಳ್ಳೆ ಆಡಳಿತ ಕೊಡುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ಎಷ್ಟು ದೊಡ್ಡ ಹಗರಣ ಮಾಡಿತ್ತು. ಅದರಿಂದ ರಾಜ್ಯದ ಮರ್ಯಾದೆ ರಾಷ್ಟ್ರಮಟ್ಟದಲ್ಲಿ ಹೋಗಿತ್ತು. ಅದನ್ನು ನೀವೆಲ್ಲರೂ ನೋಡಿದ್ದೀರಾ ಎಂದು ಸಚಿವ ಶರಣ ಪ್ರಕಾಶ ಪಾಟೀಲ್ ಬಿಜೆಪಿ ವಿರುದ್ಧ ಪ್ರಹಾರ ನಡೆಸಿದರು. 

ನೀಟ್ ಪರೀಕ್ಷೆ(NEET 2024 exam scam)ಯನ್ನು ರಾಜ್ಯ ಸರ್ಕಾರ ಬ್ಯಾನ್ ಮಾಡಬೇಕೋ ಅಥವಾ ಮುಂದುವರಿಸಬೇಕೋ ಎನ್ನುವುದನ್ನು ಜನರಿಂದ ಒಪ್ಪಿಗೆ ಕ್ರೋಢೀಕರಣ ಮಾಡಿ ಬಳಿಕ ಈ ಕುರಿತು ಚಿಂತಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದರು. ನೀಟ್ ಪರೀಕ್ಷೆ ಬೇಡ ಎಂದು ಈಗಾಗಲೇ ಕೇರಳ ಸರ್ಕಾರ ನಿರ್ಣಯ ಕೈಗೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅದನ್ನು ನಮಗೂ ಒಂದು ಪ್ರತಿಯನ್ನು ಕೇರಳ ಸರ್ಕಾರ ಕಳುಹಿಸಿ ಕೊಟ್ಟಿದೆ. ನೀವು ಈ ರೀತಿ ನಿರ್ಧರಿಸಿ ಅಂತ ಕೇಳಿದೆ.

ಡಿಕೆ ಶಿವಕುಮಾರಗೆ ಸಿಎಂ ಕುರ್ಚಿ ಹುಚ್ಚು ಹಿಡಿದಿದೆ: ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ

ಇದನ್ನು ಈಗಾಗಲೇ ಸಿಎಂ ಸಿದ್ದರಾಮಯ್ಯ(CM Siddaramaiah)ನವರ ಜೊತೆ ಚರ್ಚಿಸಿದ್ದೇವೆ. ನೀಟ್ ಪರೀಕ್ಷೆ ಮಾಡಬೇಕೆಂದು ಸುಪ್ರೀಂಕೋರ್ಟ್ ಆದೇಶ ಮಾಡಿದೆ. ಇದು ಕೇಂದ್ರ ಸರ್ಕಾರದಿಂದಲೂ ಕಾಯ್ದೆಯಾಗಿಯೂ ರೂಪುಗೊಂಡಿದೆ. ಎನ್ಎಂಸಿ ಕಾಯ್ದೆಯಡಿಯಲ್ಲಿ ಅದನ್ನು ರಾಷ್ಟ್ರಮಟ್ಟದಲ್ಲಿಯೇ ಸಾಮಾನ್ಯ ಪ್ರವೇಶ ಪರೀಕ್ಷೆ ಅಂತ ಮಾಡಿದ್ದಾರೆ. ಹೀಗಾಗಿ ಕಾನೂನಿನ ತೊಡಕು ಇರುವುದರಿಂದ ನೀಟ್ ಪರೀಕ್ಷೆ ಬೇಡ ಎಂದು ನಾವೇ ಸ್ವತಃ ನಿರ್ಧಾರ ಮಾಡುವುದಕ್ಕೆ ಆಗಲ್ಲ. ಸುಪ್ರೀಂ ಕೋರ್ಟ್ ನಿಂದ ವಿನಾಯ್ತಿ ತೆಗೆದುಕೊಳ್ಳಬೇಕಾಗುತ್ತದೆ. ರಾಜ್ಯದಲ್ಲಿ ಎಲ್ಲರೂ ಒತ್ತಾಯ ಮಾಡುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲೂ ಪೇಪರ್ ಲೀಕ್ ಆಗಿರುವುದಾಗಿ ಪ್ರಕರಣಗಳು ದಾಖಲಾಗುತ್ತಿವೆ. ಸಂಸತ್ತಿನಲ್ಲಿ ಅಧ್ಯಕ್ಷರ ಭಾಷಣದಲ್ಲೂ ನೀಟ್ ಎಕ್ಸಾಂ ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಹೇಳಿದ್ರು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅವರ ವರ್ತನೆ ನೋಡಿ ಎಲ್ಲಾ ರಾಜ್ಯಗಳಲ್ಲೂ ಒಂದೇ ರೀತಿಯ ಪರೀಕ್ಷೆ ಇರಬೇಕಾ ಬೇಡವೇ ಎನ್ನುವ ಅನುಮಾನ ಕಾಡುತ್ತಿದೆ. ನೋಡೋಣ ಮುಂದಿನ ದಿನಗಳಲ್ಲಿ ಎಲ್ಲರ ನಿರ್ಧಾರ, ಅಭಿಪ್ರಾಯಗಳನ್ನು ಸಂಗ್ರಹಿಸಿ ಈ ಕುರಿತು ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

click me!