ಗ್ರಾಮಗಳಲ್ಲಿ ಗ್ರಾಮಸ್ಥರೇ ಸೇರಿ ಜಾತ್ರೆಗಳನ್ನ ಮಾಡೋದು. ಆದ್ರೆ ಸಣ್ಣ ತಾಂಡಾವೊಂದರಲ್ಲಿ ನಡೆಯೋ ಈ ಜಾತ್ರೆಗೆ ದೇಶದ ಮೂಲೆ ಮೂಲೆಗಳಿಂದ ಮಂತ್ರಿಗಳು, ಶಾಸಕರು, ಸಂಸದರು ಬರ್ತಾರೆ. ವಿಜಯಪುರದಲ್ಲಿದ್ದಾಳೆ ರಾಜಕಾರಣಿಗಳ ಲಕ್ ಖುಲಾಯಿಸೋ ದೇವಿ!
- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜು.5): ಗ್ರಾಮಗಳಲ್ಲಿ ಗ್ರಾಮಸ್ಥರೇ ಸೇರಿ ಜಾತ್ರೆಗಳನ್ನ ಮಾಡೋದು. ಆದ್ರೆ ಇಲ್ಲಿ ಸಣ್ಣ ತಾಂಡಾವೊಂದರಲ್ಲಿ ನಡೆಯೋ ಜಾತ್ರೆಗೆ ದೇಶದ ಮೂಲೆ ಮೂಲೆಗಳಿಂದ ಮಂತ್ರಿಗಳು, ಶಾಸಕರು, ಸಂಸದರು ಬರ್ತಾರೆ. ಇಲ್ಲಿ ಒಮ್ಮೆ ಭೇಟಿ ನೀಡಿದರೆ ರಾಜಕಾರಣಿಗಳಿಗೆ ಅಧಿಕಾರ ಪಿಕ್ಸ್ ಅಂತೆ. ಇಲ್ಲಿನ ದೇವಿಯ ದರ್ಶನ ಪಡೆದರೆ ಲಕ್ ಬದಲಾಗುತ್ತೆ ಎನ್ನುವ ನಂಬಿಕೆ ಇದೆ. ರಾಜಕಾರಣಿಗಳ ಫೆವರೆಟ್ ಸ್ಪಾಟ್ ಆಗಿರೋ ಈ ಪುಟ್ಟ ತಾಂಡಾದಲ್ಲಿ ಎರೆಡೆರೆಡು ಹೆಲಿಪ್ಯಾಡ್‌ಗಳಿವೆ..
undefined
ಈ ದೇವಿ ದರ್ಶನದಿಂದ ರಾಜಕಾರಣಿಗಳಿಗೆ ಖುಲಾಯಿಸುತ್ತೆ ಲಕ್!
ಹೌದು, ವಿಜಯಪುರ(Vijayapur) ಜಿಲ್ಲೆಯ ತಿಕೋಟ ತಾಲೂಕಿನ ಸೋಮದೇವರಹಟ್ಟಿ ತಾಂಡಾ(Somadevarahatti)ದಲ್ಲಿ ಪ್ರತಿ ವರ್ಷ ನಡೆಯುವ ದುರ್ಗಾದೇವಿ ಜಾತ್ರೆ(Durgadevi jathra vijayapur)ಗೆ ದೇಶದ ಮೂಲೆ ಮೂಲೆಗಳಿಂದ ಮಂತ್ರಿಗಳು, ಸಂಸದರು, ಶಾಸಕರು ಬರ್ತಾರೆ. ಇನ್ನು ಅಧಿಕಾರ ಬಯಸಿ ಪ್ರಸಿದ್ಧ ರಾಜಕಾರಣಿಗಳು ಈ ದೇವಿಯ ಬಳಿಗೆ ಬರ್ತಾರೆ. ಹೌದು ಸೋಮದೇವರಹಟ್ಟಿ ತಾಂಡಾದಲ್ಲಿ ನಡೆಯುವ ದೇವಿಜಾತ್ರೆಯಲ್ಲಿ ಪಾಲ್ಗೊಂಡು ದೇವಿ ದರ್ಶನ ಪಡೆದರೆ ರಾಜಕಾಣಿಗಳಿಗೆ ಲಕ್ ಖುಲಾಯಿಸುತ್ತದೆಯಂತೆ. ಒಮ್ಮೆ ದರ್ಶನ ಪಡೆದರೆ ಸಾಕಂತೆ ದೇವಿ ರಾಜಕಾರಣಿಗಳ ಲಕ್ ಬದಲಿಸಿ ಬಿಡ್ತಾಳಂತೆ. ಇದೆ ಕಾರಣಕ್ಕೆ ದೇಶದ ಅನೇಕ ರಾಜ್ಯಗಳ ಮಂತ್ರಿಗಳು, ಸಂಸದರು, ಶಾಸಕರು ಇಲ್ಲಿಗೆ ಭೇಟಿ ಕೊಡ್ತಾರೆ..
ವಿಜಯಪುರದಲ್ಲಿ ಒಂಟಿ ಎತ್ತು ದಾಖಲೆಯ ಮಾರಾಟ, 18 ಲಕ್ಷ 1 ಸಾವಿರಕ್ಕೆ ಸೋಲ್ಡ್!
ಪ್ರತಿವರ್ಷ ನಡೆಯುವ ದುರ್ಗಾದೇವಿ ಜಾತ್ರೆ!
ಪ್ರತಿ ವರ್ಷ ಜೂನ್ ತಿಂಗಳಲ್ಲಿ ನಡೆಯುವ ದುರ್ಗಾದೇವಿ ಜಾತ್ರೆ ಬಲು ವಿಶೇಷವಾಗಿ ನಡೆಯುತ್ತೆ. ಬಂಜಾರ ಸಮುದಾಯದ ಆರಾಧ್ಯ ದೇವಿಯಾಗಿರುವ ದುರ್ಗಾದೇವಿಯ ಜಾತ್ರೆಯಲ್ಲಿ ಲಕ್ಷಾಂತರ ಜನ ಸೇರ್ತಾರೆ. ಇದರ ಜೊತೆಗೆ ಇಲ್ಲಿ ದೊಡ್ಡ-ದೊಡ್ಡ ರಾಜಕಾರಣಿಗಳು, ಪ್ರಭಾವಿ ಐಎಎಸ್, ಐಪಿಎಸ್ ಅಧಿಕಾರಿಗಳು ಪಾಲ್ಗೊಳ್ತಾರೆ.
ತಾಂಡಾಗೆ ಬರ್ತಾರೆ
ಹೊರರಾಜ್ಯಗಳ ಸಿಎಂ, ಮಂತ್ರಿಗಳು!
ಇನ್ನು ಸೋಮದೇವರಹಟ್ಟಿ ಚಿಕ್ಕ ತಾಂಡಾ, ಇಲ್ಲಿ ದುರ್ಗಾದೇವಿಯ ಮೂಲ ದೇಗುಲ ಇರುವ ಕಾರಣ ರಾಜ್ಯ ಹೊರ ರಾಜ್ಯ ಸೇರಿದಂತೆ ದೇಶದ ಮೂಲೆ ಮೂಲೆಯಲ್ಲು ಪ್ರಸಿದ್ಧಿ ಪಡೆದಿದೆ. ಹೀಗಾಗಿ ಇಲ್ಲಿ ಜೂನ್ ತಿಂಗಳಲ್ಲಿ ನಡೆಯೋ ಮಾತಾ ದುರ್ಗಾದೇವಿ ಜಾತ್ರೆಯಲ್ಲಿ ವಿವಿಧ ರಾಜ್ಯಗಳ ಸಿಎಂ, ಡಿಸಿಎಂ, ಸಚಿವರು, ಶಾಸಕರು ಪಾಲ್ಗೊಳ್ತಾರೆ. ಇನ್ನು ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳು ಪಾಲ್ಗೊಳ್ತಾರೆ. ಈ ಹಿಂದೆ ಗೋವಾ ಸಿಎಂ ಆಗಿದ್ದ ದಿಂಗಬರ್ ಕಾಮತ್(Goa former cm Digambar kamath), ಮಾಜಿ ಸಿಎಂ ಮನೋಹರ್ ಪರಿಕರ್, ಹೆಚ್ ಡಿ ಕುಮಾರಸ್ವಾಮಿ(HD Kumaraswamy), ಮಾಜಿ ಸಿಎಂ ಸುಶೀಲ್ ಕುಮಾರ್ ಸಿಂಧೆ, ವಿಲಾಸರಾವ್ ದೇಶಮುಖ, ಗೋಪಿನಾಥ ಮುಂಡೆ ಸೇರಿದಂತೆ ಗೋವಾ ರಾಜ್ಯದ ಸಚಿವರುಗಳು ಭೇಟಿ ನೀಡಿದ್ದರು. ಗೋವಾ ರಾಜ್ಯದ ಸಚಿವರಾಗಿದ್ದ ಶ್ರೀಪಾದ್ ನಾಯಕ್, ಮೈಕೆಲ್ ಲೋಬೊ, ಕೇಂದ್ರ ಸಚಿವ ಎಮ್ ಕೆ ಅಣ್ಣಾ ಪಾಟೀಲ್, ಗುಜರಾತ್ ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಡಿ ಜಿ ಬಂಜಾರಾ ಸೇರಿದಂತೆ ಅನೇಕ ಸಚಿವರು ಸೋಮದೇವರಹಟ್ಟಿಗೆ ಭೇಟಿ ನೀಡಿದ್ದಾರೆ..
ಚಿಕ್ಕ ತಾಂಡಾದಲ್ಲಿವೆ ಎರಡೆರೆಡು ಹೆಲಿಪ್ಯಾಡ್!
ಜಿಲ್ಲಾ ಕೇಂದ್ರಗಳಲ್ಲಿ ಒಂದೊ ಎರಡೊ ಹೆಲಿಪ್ಯಾಡ್ ಗಳಿದ್ದರೆ ಹೆಚ್ಚು. ಅದ್ರಲ್ಲು ಚಿಕ್ಕ ಜಿಲ್ಲೆಗಳಲ್ಲಿ ತಾತ್ಕಾಲಿಕವಾಗಿ ಹೆಲಿಪ್ಯಾಡ್ ಗಳನ್ನ ನಿರ್ಮಾಣ ಮಾಡಲಾಗುತ್ತೆ. ಆದ್ರೆ ಸೋಮದೇವರಹಟ್ಟಿಯಂತ ಚಿಕ್ಕ ತಾಂಡಾದಲ್ಲಿ ಎರಡು ಖಾಯಂ ಹೆಲಿಪ್ಯಾಡ್ ಗಳನ್ನ ನಿರ್ಮಾಣ ಮಾಡಲಾಗಿದೆ. ಹತ್ತಕ್ಕು ಅಧಿಕ ವರ್ಷಗಳ ಹಿಂದೆಯೇ ಈ ಹೆಲಿಪ್ಯಾಡ್ ಗಳು ನಿರ್ಮಾಣವಾಗಿವೆ. ಜಾತ್ರೆ ಸಮಯ ಅಲ್ಲದೆ ಆಗಾಗ್ಗ ಬೇರೆ ಬೇರೆ ರಾಜ್ಯಗಳ ಸಿಎಂಗಳು, ಸಚಿವರು, ಕೇಂದ್ರ ಸಚಿವರು, ಪ್ರಭಾವಿ ರಾಜಕಾರಣಿಗಳು ದೇಶದ ದೊಡ್ಡದೊಡ್ಡ ಉದ್ಯಮಿಗಳು ಬರೋದ್ರಿಂದ ಇಲ್ಲಿ ಖಾಯಂ ಹೆಲಿಪ್ಯಾಡ್ ಗಳನ್ನ ನಿರ್ಮಿಸಲಾಗಿದೆ..
ನಂಜನಗೂಡು: ತರಕಾರಿ ತುಂಬಿದ ಲಾರಿ ಪಲ್ಟಿ; ಮುಗಿಬಿದ್ದ ಸ್ಥಳೀಯರು!
ಈ ಬಾರಿಯೂ ಅದ್ದೂರಿಯಾಗಿ ನಡೆದ ಜಾತ್ರೆ!
ಇನ್ನೂ ಈ ಬಾರಿಯೂ ಅದ್ದೂರಿಯಾಗಿ ದುರ್ಗಾದೇವಿ ಜಾತ್ರೆ ನಡೆಯಿತು. ಕೇಂದ್ರ ಇಂದನ ಖಾತೆ ಸಚಿವ ಶ್ರೀಪಾದ್ ಪಾಟೀಲ್, ತಾಂಡಾ ಅಭಿವೃದ್ಧಿ ನಿಗಮದ ಜಯದೇವ ನಾಯಕ್, ಮುಂಬೈ ಸಂಸದ ಸಂಜಯ್ ಪಾಟೀಲ್, ಐಎಎಸ್ ಅಧಿಕಾರಿ ಕಪಿಲ್ ಮೋಹನ್, ಗೋವಾ ಮಾಜಿ ಸಚಿವ ದೀಪಕ್ ವಾಪಸ್ಕರ್ ಸೇರಿ ಆಂಧ್ರ, ತೆಲಂಗಾಣ, ರಾಜಸ್ತಾನ, ಮಧ್ಯಪ್ರದೇಶ, ಗೋವಾ ರಾಜ್ಯಗಳ ರಾಜಕೀಯ ನಾಯಕರು ಜಾತ್ರೆಯಲ್ಲಿ ಪಾಲ್ಗೊಂಡು ದೇವಿ ದರ್ಶನ ಪಡೆದರು.