
ಬೆಂಗಳೂರು (ಮಾ.18) : ಕಲಾಸಿಪಾಳ್ಯದ ಎಂಎಂ ರಸ್ತೆಯಲ್ಲಿ ಬಿಬಿಎಂಪಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಬಹುಮಹಡಿ ವಸತಿ ಕಟ್ಟಡದ ಮನೆಗಳ ಹಂಚಿಕೆ ಪತ್ರವನ್ನು ಶುಕ್ರವಾರ ಫಲಾನುಭವಿಗಳಿಗೆ ವಿತರಿಸಲಾಯಿತು.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ(Chikkapete assemby constituency) ವ್ಯಾಪ್ತಿಯ ಕಲಾಸಿಪಾಳ್ಯದ ಮೋತಿನಗರ ರಸ್ತೆಯಲ್ಲಿನ ಬಿಬಿಎಂಪಿ(BBMP)ಗೆ ಸೇರಿದ ಕಟ್ಟಡದಲ್ಲಿನ ಬ್ಲಾಕ್ ‘ಎ‘ನಲ್ಲಿ 24 ಮತ್ತು ಬ್ಲಾಕ್ ‘ಬಿ’ನಲ್ಲಿ 64 ಫಲಾನುಭವಿ ಕುಟುಂಬಗಳು ವಾಸ ಮಾಡುತ್ತಿದ್ದವು. ಈ ಕಟ್ಟಡವು ಶಿಥಿಲಗೊಂಡು, ವಾಸಿಸಲು ಯೋಗ್ಯವಾಗಿರಲಿಲ್ಲ. ಹೀಗಾಗಿ 2016-17ನೇ ಸಾಲಿನ ಬಿಬಿಎಂಪಿ ಬಜೆಟ್‌ನಲ್ಲಿ ಅನುದಾನ ನಿಗದಿ ಮಾಡಿ ಬ್ಲಾಕ್ ‘ಎ’ನಲ್ಲಿ 20 ಮನೆ ಹಾಗೂ ಬ್ಲಾಕ್ ‘ಬಿ’ನಲ್ಲಿ 76 ಮನೆಗಳು ಸೇರಿ ಒಟ್ಟು 96 ಮನೆಗಳನ್ನು 9.30 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಆ ಮನೆಗಳಲ್ಲಿ 52 ಮನೆಗಳ ಹಂಚಿಕೆ ಪತ್ರವನ್ನು ಶುಕ್ರವಾರ ಫಲಾನುಭವಿಗಳಿಗೆ ನೀಡಲಾಗಿದೆ. ಉಳಿದ 44 ಮನೆಗಳ ಹಂಚಿಕೆ ಪತ್ರಗಳನ್ನು ಕೂಡ ಶೀಘ್ರದಲ್ಲಿ ಫಲಾನುಭವಿಗಳಿಗೆ ವಿತರಿಸಲು ಬಿಬಿಎಂಪಿ ನಿರ್ಧರಿಸಿದೆ.
ಪರಿಸರ ಕಲುಷಿತಗೊಳಿಸಿ ಪೂಜೆ ಯಾಕೆ: ಬಿಬಿಎಂಪಿಗೆ ಕೋರ್ಟ್ ಪ್ರಶ್ನೆ
ಶಾಸಕ ಡಾ. ಉದಯ್ ಬಿ.ಗರುಡಾಚಾರ್, ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯಪುರ ಇತರರಿದ್ದರು.
ಶಿಕ್ಷಣ ಸಂಸ್ಥೆಗಳಿಂದ 25% ಆಸ್ತಿ ತೆರಿಗೆ ಸಂಗ್ರಹ
ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ಶಿಕ್ಷಣ ಸಂಸ್ಥೆಗಳಿಂದ ಆಸ್ತಿ ತೆರಿಗೆಯ ಶೇ.25ರಷ್ಟುಸಂಗ್ರಹಿಸಲು ಬಿಬಿಎಂಪಿ ಶುಕ್ರವಾರ ಆದೇಶಿಸಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಕೆಎಂಸಿ ಕಾಯ್ದೆ 1976ರ ಪ್ರಕರಣ ಹಾಗೂ ಅದರಡಿಯಲ್ಲಿ ರಚಿಸಲಾದ ನಿಯಮಗಳ ಅನ್ವಯ ಮನ್ನಣೆ ಪಡೆದ ಶೈಕ್ಷಣಿಕ ಸಂಸ್ಥೆಗಳಿಂದ ಶೈಕ್ಷಣಿಕ ಉದ್ದೇಶದ ಸ್ವತ್ತುಗಳಿಗೆ ಆಸ್ತಿ ತೆರಿಗೆಯ ಶೇ.25ರಷ್ಟುಸಂಗ್ರಹಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಬಿಬಿಎಂಪಿ ಕಾಯ್ದೆ 2020 ಜಾರಿಗೆ ಬಂದ ನಂತರ ಸೇವೆಯಡಿ ಕಾರ್ಯನಿರ್ವಹಿಸುವ ಶಿಕ್ಷಣ ಸಂಸ್ಥೆಗಳು ಹೊರತು ಪಡಿಸಿ ಉಳಿದೆಲ್ಲಾ ಶೈಕ್ಷಣಿಕ ಸಂಸ್ಥೆಗಳು ಶೇ.100 ರಷ್ಟುಆಸ್ತಿ ತೆರಿಗೆ ಪಾವತಿ ಮಾಡಬೇಕು ಎಂದು ಸೂಚಿಸಲಾಗಿತ್ತು. ಹೀಗಾಗಿ, 2021-22ರಿಂದ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹ ಮಾಡಲಾಗುತ್ತಿತ್ತು.
ಇದೀಗ ಮಾಚ್‌ರ್ 10 ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ವಿನಾಯಿತಿ ನೀಡಿ ಶೇ.25 ರಷ್ಟುಮಾತ್ರ ಆಸ್ತಿ ತೆರಿಗೆ ಸಂಗ್ರಹಕ್ಕೆ ರಾಜ್ಯಪತ್ರ ಹೊರಡಿಸಿದೆ. ಅಂದರಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಮಾ.10ರ ನಂತರ ಆಸ್ತಿ ತೆರಿಗೆ ಪಾವತಿಸು ಶಿಕ್ಷಣ ಸಂಸ್ಥೆಗಳಿಗೆ ವಿನಾಯಿತಿ ನೀಡುವಂತೆ ಕಂದಾಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸ್ಮಾರ್ಟ್ ವರ್ಚುವಲ್ ಕ್ಲಿನಿಕ್‌ಗೆ ಸಿಎಂ ಚಾಲನೆ: ಅಗತ್ಯವಾದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಫಾರಸ್ಸು
2022-23ನೇ ಸಾಲಿನ ಆಸ್ತಿ ತೆರಿಗೆ ಪಾವತಿಗೆ ಮಾತ್ರ ಈ ವಿನಾಯಿತಿ ಅನ್ವಯವಾಗಲಿದೆ. ಈಗಾಗಲೇ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಪಾವತಿದಾರರಿಗೆ ಮರುಪಾವತಿಯ ಬಗ್ಗೆ ಯಾವುದೇ ಉಲ್ಲೇಖಿಸಿಲ್ಲ. ಜತೆಗೆ, 2021-22ನೇ ಸಾಲಿನ ಆಸ್ತಿ ತೆರಿಗೆ ಪಾವತಿಗೆ ಅನ್ವಯವಾಗುವುದಿಲ್ಲ. ಶಿಕ್ಷಣ ಸಂಸ್ಥೆಗಳು 2021-22ನೇ ಸಾಲಿನ ಆಸ್ತಿ ತೆರಿಗೆಯನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸುವ ಕುರಿತು ಚರ್ಚೆ ನಡೆಸಬೇಕಿದೆ ಎಂದು ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ