ಮೈಸೂರು: ಬಾಯಿಗೆ ಬಟ್ಟೆ ತುರುಕಿ 2ನೇ ತರಗತಿ ಬಾಲಕಿ ಅಪಹರಣ ಯತ್ನ!

By Ravi Janekal  |  First Published Aug 20, 2023, 10:36 AM IST

ದುಷ್ಕರ್ಮಿಗಳು ಎರಡನೇ ತರಗತಿ ಶಾಲಾ ಬಾಲಕಿಯನ್ನು ಅಪಹರಣ ಮಾಡಲು ಯತ್ನಿಸಿದ ಘಟನೆ ನಂಜನಗೂಡಿನ ಹುಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.


ಮೈಸೂರು (ಆ.20): ದುಷ್ಕರ್ಮಿಗಳು ಎರಡನೇ ತರಗತಿ ಶಾಲಾ ಬಾಲಕಿಯನ್ನು ಅಪಹರಣ ಮಾಡಲು ಯತ್ನಿಸಿದ ಘಟನೆ ನಂಜನಗೂಡಿನ ಹುಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹುಲ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಅನುಶ್ರೀ ಅಪಹರಣಕ್ಕೆ ಒಳಗಾಗಿದ್ದ ಬಾಲಕಿ. ನಿನ್ನೆ (ಆ.19) ಶೌಚಾಲಯಕ್ಕೆ ತೆರಳಿದ್ದ ವೇಳೆ ಬಾಲಕಿಯನ್ನು ಹಿಂಬಾಲಿಸಿ ಬಾಲಕಿ ಬಾಯಿಗೆ ಬಟ್ಟೆ ತುರುಕಿ ಅಪಹರಿಸಲು ಯತ್ನ. ಈ ವೇಳೆ ಕಿರುಚಿಕೊಂಡಿರುವ ಅನುಶ್ರೀ. ತಕ್ಷಣ ಬಾಲಕಿಯನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾದ ದುಷ್ಕರ್ಮಿಗಳು. ಈ ಸಂಬಂಧ ಶಾಲೆಯ ಮುಖ್ಯ ಶಿಕ್ಷಕರಿಂದ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲು.

Latest Videos

undefined

ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ!

ಕೋಲಾರ:ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಗ್ರಾಮದ ಹೊರವಲಯದಲ್ಲಿ ಬಾವಿಯಲ್ಲಿ ಅಪರಿಚಿತನ ಶವ ಪತ್ತೆಯಾಗಿದೆ. 40 ವರ್ಷದ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶವ ಕಂಡು ರೈತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸುಮಾರು 4-5 ದಿನಗಳ ಹಿಂದೆ ಮೃತಪಟ್ಟಿರುವ ಅನುಮಾನ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತ ದೇಹ ಹೊರತೆಗೆದು ಕೋಲಾರ ಜಿಲ್ಲಾ ಆಸ್ಪತ್ರೆಗೆ ರವಾನೆ. ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಟ್ಯೂಷನ್‌ಗೆ ಹೊರಟಿದ್ದ ಬಾಲಕಿ ಅಪಹರಣ ಯತ್ನ: ಆರೋಪಿ ಬಂಧನ

ಪ್ರಮಾಣಪತ್ರ ಕೊಡಿಸುವುದಾಗಿ ನಂಬಿಸಿ 9 ಲಕ್ಷ ರೂ. ವಂಚನೆ

ಹುಬ್ಬಳ್ಳಿ: ಐಇಎಲ್‌ಟಿಎಸ್‌ ಪ್ರಮಾಣ ಪತ್ರ ಕೊಡಿಸುವುದಾಗಿ ನಂಬಿಸಿದ ಖದೀಮರೊಬ್ಬರು ಇಲ್ಲಿನ ಮೊರಾರ್ಜಿ ನಗರದ ಸೇಲ್ಸ್‌ಮನ್‌ ಒಬ್ಬರಿಂದ .9.31 ಲಕ್ಷ ಹಣವನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. 56 ವರ್ಷದ ರಮೇಶಗೌಡ ವಂಚನೆಗೊಳಗಾದವರು. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಅಪರಿಚಿತರು, ಐಇಎಲ್‌ಟಿಎಸ್‌ (ಇಂಟರ್‌ನ್ಯಾಷನಲ್‌ ಇಂಗ್ಲಿಷ್‌ ಲಾಂಗ್ವೇಜ್‌ ಟೆಸ್ಟಿಂಗ್‌ ಸಿಸ್ಟಂ) ಪ್ರಮಾಣ ಪತ್ರ ಕೊಡಿಸುವುದಾಗಿ ನಂಬಿಸಿದ್ದಾರೆ. ಮೊದಲು .60 ಸಾವಿರ ಪಡೆದಿದ್ದಾರೆ. ಸರ್ಟಿಫಿಕೆಟ್‌ ಕಳುಹಿಸಲಾಗಿದೆ. ಇನ್ನಷ್ಟುಹಣ ಕಟ್ಟಬೇಕೆಂದು ಹೇಳಿ ವಿವಿಧ ಖಾತೆಗಳಿಂದ .9,31,200 ಹಣವನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ರಮೇಶಗೌಡ ಸಿಇಎನ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: 20 ವರ್ಷ ಜೈಲು ಶಿಕ್ಷೆ ನೀಡಿದ ನ್ಯಾಯಾಲಯ

ಗಾಂಜಾ ಮಾರಾಟಕ್ಕೆ ಯತ್ನ, ಓರ್ವನ ಬಂಧನ

ಹುಬ್ಬಳ್ಳಿ: ಇಲ್ಲಿನ ಗುಡ್‌ಶೆಡ್‌ ರಸ್ತೆಯ ಬುದ್ಧ ವಿಹಾರದ ಹತ್ತಿರ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಾನ್‌ ಶ್ರೀರಾಮ ಎಂಬಾತನು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದನು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!