ಹತ್ತು ಕೆಜಿ ಅಕ್ಕಿ ನೀಡಲು ನಾವು ಈಗಲೂ ಬದ್ದರಿದ್ದೇವೆ ಆದರೆ ಕೇಂದ್ರದ ಅಸಹಕಾರ ನೀತಿಯಿಂದ ಕೊಡಲು ಆಗುತ್ತಿಲ್ಲ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅಸಮಾಧಾನ ವ್ಯಕ್ತಪಡಿಸಿದರು.
ವರದಿ : ವರದರಾಜ್
ದಾವಣಗೆರೆ.(ಜೂ.22) : ಹತ್ತು ಕೆಜಿ ಅಕ್ಕಿ ನೀಡಲು ನಾವು ಈಗಲೂ ಬದ್ದರಿದ್ದೇವೆ ಆದರೆ ಕೇಂದ್ರದ ಅಸಹಕಾರ ನೀತಿಯಿಂದ ಕೊಡಲು ಆಗುತ್ತಿಲ್ಲ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅಸಮಾಧಾನ ವ್ಯಕ್ತಪಡಿಸಿದರು.
undefined
ದಾವಣಗೆರೆಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಚಿವ ಹೆಚ್ ಮುನಿಯಪ್ಪಗೆ ಪ್ರಧಾನಿ ಭೇಟಿಗೆ ಅವಕಾಶ ನೀಡದಿರುವುದನ್ನು ನಾನು ಖಂಡಿಸುತ್ತೇನೆ ಎಂದರು.
ರಾಜ್ಯದಲ್ಲಿ ತೊಂದರೆಯಾಗಿದೆ, ಅಕ್ಕಿ ಸ್ಟಾಕ್ ಇದ್ದರೂ ಕೊಡುತ್ತಿಲ್ಲ.ನಾವು ಪುಕ್ಕಟೆ ಕೇಳುತ್ತಿಲ್ಲ, ದುಡ್ಡು ಕೊಡುತ್ತೇವೆ ಎಂದರೂ ಕೇಳುತ್ತಿಲ್ಲ. ಬಡವರ ಅನ್ನದ ಜೊತೆ ಆಟವಾಡುತ್ತಿರುವ ಈ ಪ್ರವೃತ್ತಿಯನ್ನು ಖಂಡಿಸುತ್ತೇನೆ. ನಮ್ಮ ಸರ್ಕಾರ ಹೇಗೆ ನಡೆಸಿಕೊಳ್ಳಬೇಕು ಎನ್ನುವುದು ನಮಗೆ ಗೊತ್ತಿದೆ.ಈಗ ಅಕ್ಕಿ ಕೊಡುತ್ತಿರುವುದು ನಮ್ಮ ಪಾಲು. ಕೇಂದ್ರದವರು ಕೊಡ್ತಾರೆ ನಾವು ಸೇರಿಸಿ ಹತ್ತು ಕೆಜಿ ಕೊಡ್ತಿವಿ. ಆದರೆ
ಕೇಂದ್ರ ಸರ್ಕಾರ ಪುಕ್ಕಟೆ ಕೊಡುವ ರೀತಿ ಮಾಡ್ತಾ ಇರುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ಆಕ್ರೊಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಸಚಿವರುಗಳು ಅದಾನಿ, ಅಂಬಾನಿ ಜೊತೆ ಬೆಳೆದವರು, ಬಡವರ ಕಷ್ಟ ಗೊತ್ತಾಗುತ್ತಿಲ್ಲ ಎಂದರು. ಹಾಲಿನ ದರ ಹೆಚ್ಚಳಕ್ಕೆ ಪ್ರಸ್ತಾವನೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ದರ ಏರಿಕೆ ಬಗ್ಗೆ ಅದು ಏರಿಕೆಯಾದ ನಂತರ ಮಾತನಾಡೋಣ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದಾರೆ ಅದು ಚರ್ಚೆಯಾಗುತ್ತದೆ.ಮುಂಚಿತವಾಗಿಯೇ ನಾವು ಏನನ್ನು ಹೇಳುವುದಿಲ್ಲ. ಕೈಗಾರಿಕಾ ಗಳ ಬಂದ್ ಘೋಷಣೆ ವಿಚಾರದ ಬಗ್ಗೆ ಮಾತನಾಡಿದ ಸಚಿವರು ಸಹಜವಾಗಿ ತೆರಿಗೆ ತೆಗೆದುಕೊಳ್ಳಲೇಬೇಕು.ಕೆಲವು ವಿಚಾರವಾಗಿ ಟ್ಯಾಕ್ಸ್ ಕಡಿಮೆ ಮಾಡುವುದು ಜಾಸ್ತಿ ಇದ್ದೇ ಇರುತ್ತೆ.ಒಂದು ಕೈಯಲ್ಲಿ ಕೊಟ್ಟು ಒಂದು ಕೈಯಲ್ಲಿ ಕಿತ್ತುಕೊಳ್ಳುತ್ತಾರೆ ಎಂದು ಅವರರವ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.
ರಾಜ್ಯಾದ್ಯಂತ ಇಂದು ಕಾಂಗ್ರೆಸ್, ಬಿಜೆಪಿ ‘ಉಚಿತ ಅಕ್ಕಿ ಹೋರಾಟ’
ನಾವು ಮದ್ಯ ದರ ಏರಿಕೆ ಮಾಡಿಲ್ಲ ಎಂದರು. ಸಿಎಂ ಸಿದ್ದರಾಮಯ್ಯ ನವರು ಪೂರ್ಣವಧಿ ಅಧಿಕಾರ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಶಾಸಕಾಂಗ ಸಭೆ ಇದೆ, ಹೈಕಮಾಂಡ್ ಇದೆ ಅಲ್ಲಿ ನಿರ್ಧಾರವಾಗುತ್ತದೆ
ಈಗ ಏನು ಹೇಳ್ತಾ ಇದರೋ ಅದು ಅವರ ವೈಯಕ್ತಿಕ.ನಾನು ವೈಯಕ್ತಿಕ ಅಭಿಪ್ರಾಯ ನಾನು ಹೇಳೋದಿಲ್ಲ ಎಂದರು.
ಬಿಜೆಪಿ ವಿರೋಧ ಪಕ್ಷ ಆಯ್ಕೆ ಮಾಡದ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿಯವರು ಗೊಂದಲದಲ್ಲಿ ಇದ್ದಾರೆ ಸೋಲಿನಿಂದ ಹತಾಶರಾಗಿದ್ದಾರೆ. ಯಡಿಯೂರಪ್ಪ ನವರು ಒತ್ತಡದಲ್ಲಿ ಇದ್ದಾರೆ, ಈ ವಯಸ್ಸಿನಲ್ಲಿ ಅವರಿಗೆ ಒತ್ತಡ ಇದೆ ಬಿಜೆಪಿ ಪಕ್ಷದಲ್ಲಿ ಬಹಳ ಜನರನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ.ಯಡಿಯೂರಪ್ಪ ನವರನ್ನು ಏಕೆ ತೆಗೆದರು ಈಗ ಏಕೆ ಪ್ರವಾಸ ಮಾಡು ಅಂತ ಹೇಳ್ತಾ ಇದಾರೆ ಗೊತ್ತಾಗುತ್ತಿಲ್ಲ.ಯಡಿಯೂರಪ್ಪ ನವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಪ್ರಯತ್ನ ಮಾಡ್ತಾ ಇದ್ದಾರೆ ಎಂದರು.
ಕನ್ನಡಿಗರ ಮೇಲೆ ಕೇಂದ್ರ ಸರ್ಕಾರಕ್ಕೆ ಯಾಕಿಷ್ಟುದ್ವೇಷ: ಪ್ರಿಯಾಂಕ್ ಖರ್ಗೆ
ಬಿಜೆಪಿಯವರು 600 ಭರವಸೆಗಳಲ್ಲಿ 50 ಕೂಡ ಈಡೇರಿಕೆ ಮಾಡಿಲ್ಲ.ಯೋಗ್ಯತೆ ಇಲ್ಲದವರು ಈಗ ಮಾತನಾಡುತ್ತಿದ್ದಾರೆ. ಅವರು ಎಷ್ಟು ಭರವಸೆಗಳನ್ನು ಈಡೇರಿಕೆ ಮಾಡಿದ್ದಾರೆ ಹೇಳಿ ಎಂದರು.