ಮರಳು ಮಾಫಿಯಾಗೆ ಬಲಿಯಾದ ಪೊಲೀಸ್ ಪೇದೆ‌ ಮನೆಗೆ‌ ಸಚಿವ ಪ್ರಿಯಾಂಕ ಖರ್ಗೆ ಭೇಟಿ

By Ravi Janekal  |  First Published Jun 20, 2023, 2:17 PM IST

ಇತ್ತೀಚೆಗೆ ಅಕ್ರಮ‌ ಮರಳು ತಪಾಸಣೆ ಸಂದರ್ಭದಲ್ಲಿ ಟ್ರಾಕ್ಟರ್ ಗೆ ಸಿಲುಕಿ ಸಾವನಪ್ಪಿದ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಮಯೂರ್ ಚವ್ಹಾಣ ಅವರ ಚೌಡಾಪೂರ್ ತಾಂಡಾ ನಿವಾಸಕ್ಕೆ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.


ಕಲಬುರಗಿ,ಜೂ.20:-  ಇತ್ತೀಚೆಗೆ ಅಕ್ರಮ‌ ಮರಳು ತಪಾಸಣೆ ಸಂದರ್ಭದಲ್ಲಿ ಟ್ರಾಕ್ಟರ್ ಗೆ ಸಿಲುಕಿ ಸಾವನಪ್ಪಿದ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಮಯೂರ್ ಚವ್ಹಾಣ ಅವರ ಚೌಡಾಪೂರ್ ತಾಂಡಾ ನಿವಾಸಕ್ಕೆ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಎಂ.ವೈ.ಪಾಟೀಲ(MY Patil MLA) ಜೊತೆ ಸೇರಿ ತಮ್ಮ ಪಕ್ಷದ ವತಿಯಿಂದ 1 ಲಕ್ಷ‌ ರೂ. ಚೆಕ್ ಮೃತ ಮಯೂರ್ ಚವ್ಹಾಣ(Mayur Chavan PC) ಅವರ ಪತ್ನಿ ನಿರ್ಮಲಾ ಅವರಿಗೆ ವಿತರಿಸಿದರು.

Latest Videos

undefined

ಕಾನ್‌ಸ್ಟೇಬಲ್ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆ: ಮಯೂರ್ ಸಾವಿನಲ್ಲೂ ರಾಜಕೀಯ ..!

ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯ ಕಲ್ಪಿಸಲಾಗುವುದು. ಧೈರ್ಯದಿಂದಿರಿ, ಆತ್ಮ ವಿಶ್ವಾಸ ಕಳೆದುಕೊಳ್ಳಬೇಡಿ. ಸರ್ಕಾರ ನಿಮ್ಮೊಂದಿಗಿದೆ ಎಂದು ಕುಟುಂಬಸ್ಥರಿಗೆ ಸಚಿವರು ಮತ್ತು ಶಾಸಕರು ಸಾಂತ್ವನ ನುಡಿಗಳನ್ನಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ(Priyanka kharge ITBT Minister), ಮೃತ ಮಯೂರ್ ಚವ್ಹಾಣ ಕುಟುಂಬಕ್ಕೆ ಪೊಲೀಸ್ ಇಲಾಖೆ(Police depertment)ಯಿಂದ 30 ಲಕ್ಷ ರೂ. ಪರಿಹಾರ ನೀಡಲಾಗುವುದು. ಜೊತೆಗೆ ಸೇವಾ ವಿಮೆ, ಗ್ರಾಜುಟಿ ಸೇರಿದಂತೆ ಇತರೆ 10 ಲಕ್ಷ ರೂ. ಕುಟುಂಬಕ್ಕೆ ಸಿಗಲಿದೆ. ಸರ್ಕಾರದ ನಿಯಮಾವಳಿಯಂತೆ ಕುಟುಂಬದ‌ ಓರ್ವ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಲಾಗುವುದು. ಮಕ್ಕಳ ವಿಧ್ಯಾಬ್ಯಾಸದ ಬಗ್ಗೆಯೂ ಸರ್ಕಾರ ಗಮನಹರಿಸಲಿದೆ ಎಂದರು.

ಮರಳು ಮಾಫಿಯಾಗೆ ಕಡಿವಾಣ:

ಜಿಲ್ಲೆಯಲ್ಲಿ ಅಕ್ರಮ ಮರಳು ಮಾಫಿಯಾ(Illegal sand mafiya kalaburagi)ಗೆ ಕಡಿವಾಣ ಹಾಕಲಾಗುವುದು. ನಮ್ಮ ಸರ್ಕಾರ ಬಂದು 1 ತಿಂಗಳಾಗಿದೆ. ಜಿಲ್ಲೆಯಲ್ಲಿನ ಅಕ್ರಮ ಮರಳುಗಾರಿಕೆ, ಗಣಿಗಾರಿಕೆ, ಜೂಜು ಅಡ್ಡೆ ತಡೆಯಲು ಈಗಾಗಲೆ ಹೆಜ್ಜೆ ಇಟ್ಟಿದ್ದೇವೆ. ಈ ಪ್ರಕರಣ ಸ್ಟಾಕ್ ಯಾರ್ಡ್ ನಿಂದ ಮರಳು ತರುವಾಗ ಘಟಿಸಿದೆ. ಇದರಲ್ಲಿ ಯಾರೇ ತಪ್ಪಿತಸ್ಥರಿದ್ದರು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಮರಳು ಮಾಫಿಯಾ: ರಾತ್ರಿ ಗಸ್ತು ಮುಗ್ಸಿ ಬರ್ತೀನಿ ಅಂದಾಂವ ಹಾದಿ ಹೆಣವಾದ!

ಶಾಸಕರಾದ ಎಂ.ವೈ.ಪಾಟೀಲ, ಎಸ್.ಪಿ. ಇಶಾ ಪಂತ್, ತಹಶೀಲ್ದಾರ ಸಂಜೀವಕುಮಾರ ದಾಸರ್ ಮತ್ತಿತರು ಇದ್ದರು.

click me!