ಮಾನವ​-​ವನ್ಯಜೀವಿ ಸಂಘರ್ಷದಲ್ಲಿ ಮನುಷ್ಯ ಸೋಲಲಿ: ರಿಷಬ್‌ ಶೆಟ್ಟಿ

By Kannadaprabha NewsFirst Published Jun 20, 2023, 1:32 PM IST
Highlights

ಮಾನವ-ವನ್ಯಜೀವಿ ಸಂಘರ್ಷದಲ್ಲಿ ಮನುಷ್ಯ ಸೋಲುವ ಮೂಲಕ ಬದುಕನ್ನು ಗೆಲ್ಲಬೇಕಿದೆ. ಕಾಡಿನಲ್ಲಿರುವ ಜೀವವೈವಿಧ್ಯ ಸರಪಳಿ ಮುಂದುವರಿಯಬೇಕಾದರೆ ಮನುಷ್ಯ ತನ್ನ ಅತಿರೇಕದ ವರ್ತನೆ ಕೈಬಿಡಬೇಕು. ವನ್ಯಜೀವಿಗಳಿಗೂ ನೆಮ್ಮದಿಯಿಂದ ಬದುಕುವ ಹಕ್ಕಿದೆ ಎಂಬುದನ್ನು ತಿಳಿಯಬೇಕಿದೆ ಎಂದು ‘ವನ್ಯಜೀವಿ ಸಂರಕ್ಷಣಾ ಅಭಿಯಾನ​​’ದ ರಾಯಭಾರಿ ಹಾಗೂ ನಟ ರಿಷಬ್‌ ಶೆಟ್ಟಿಅಭಿಪ್ರಾಯಪಟ್ಟರು.

ಕೂಡ್ಲಿಗಿ(ವಿಜಯನಗರ) (ಜೂ.20) : ಮಾನವ-ವನ್ಯಜೀವಿ ಸಂಘರ್ಷದಲ್ಲಿ ಮನುಷ್ಯ ಸೋಲುವ ಮೂಲಕ ಬದುಕನ್ನು ಗೆಲ್ಲಬೇಕಿದೆ. ಕಾಡಿನಲ್ಲಿರುವ ಜೀವವೈವಿಧ್ಯ ಸರಪಳಿ ಮುಂದುವರಿಯಬೇಕಾದರೆ ಮನುಷ್ಯ ತನ್ನ ಅತಿರೇಕದ ವರ್ತನೆ ಕೈಬಿಡಬೇಕು. ವನ್ಯಜೀವಿಗಳಿಗೂ ನೆಮ್ಮದಿಯಿಂದ ಬದುಕುವ ಹಕ್ಕಿದೆ ಎಂಬುದನ್ನು ತಿಳಿಯಬೇಕಿದೆ ಎಂದು ‘ವನ್ಯಜೀವಿ ಸಂರಕ್ಷಣಾ ಅಭಿಯಾನ​​’ದ ರಾಯಭಾರಿ ಹಾಗೂ ನಟ ರಿಷಬ್‌ ಶೆಟ್ಟಿಅಭಿಪ್ರಾಯಪಟ್ಟರು.

ಸೋಮವಾರ ತಾಲೂಕಿನ ಗುಡೇಕೋಟೆಯಲ್ಲಿ ‘ಏಷ್ಯಾನೆಟ್‌ ಸುವರ್ಣನ್ಯೂಸ್‌ (Asianet suvarna nenws)’ ಹಾಗೂ‘ ಕನ್ನಡಪ್ರಭ’ (Kannadaprabha)ಆಯೋಜಿಸಿದ್ದ ‘ವನ್ಯಜೀವಿ ಸಂರಕ್ಷಣಾ ಅಭಿಯಾನ​​’ (Wildlife Conservation Campaign)ಸೀಸನ್‌-4ರ ಕಾರ್ಯಕ್ರಮದಲ್ಲಿ ಮಾತನಾಡಿ, ಮಲೆನಾಡಿಗಿಂತಲೂ ಜೀವವೈವಿಧ್ಯ ಇರುವ ಕಾಡು ಇಲ್ಲಿದೆ. 140ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು ಗುಡೇಕೋಟೆ ಕರಡಿಧಾಮ ಅರಣ್ಯವೊಂದರಲ್ಲೇ ಇರುವುದು ನೋಡಿದರೆ ಇಲ್ಲಿನ ಕಾಡಿನ ವೈವಿಧ್ಯತೆ ತಿಳಿಯುತ್ತದೆ ಎಂದರು.

ರಿಷಬ್ ಶೆಟ್ಟಿ 'ಕಾಂತಾರ 2' ಮುಹೂರ್ತಕ್ಕೆ ದಿನಾಂಕ ಫಿಕ್ಸ್: ಎಲ್ಲಿ, ಯಾವಾಗ? ಇಲ್ಲಿದೆ ಸಂಪೂರ್ಣ ವಿವರ

ಮಲೆನಾಡಿನಲ್ಲಿ ಮಳೆ ಇಲ್ಲದ ಕಾಡು ಕಂಗಾಲಾಗಿದೆ. ಅಂತದ್ದರಲ್ಲಿ ಗುಡೇಕೋಟೆಯ ಕಾಡು ಮಳೆ ಬಾರದಿದ್ದರೂ ಹಸಿರು ಇರುವುದನ್ನು ನೋಡಿದರೆ ಇಲ್ಲಿಯ ಮಣ್ಣಿನ ಶಕ್ತಿ ಗೊತ್ತಾಗುತ್ತದೆ. ಗುಡೇಕೋಟೆ ಮುಂದಿನ ದಿನಗಳಲ್ಲಿ ಕುಗ್ರಾಮದ ಬದಲು ಇಡೀ ವಿಶ್ವವೇ ಗುರುತಿಸುವ ಹಾಗೆ ಆಗುತ್ತದೆ. ಈ ನೆಲದಲ್ಲಿ ಧೀಮಂತ ಮಹಿಳೆ ಒನಕೆ ಓಬವ್ವ ಹುಟ್ಟಿದ್ದು, ಇಲ್ಲೇ ಪಾಳೇಗಾರರು ಆಳ್ವಿಕೆ ನಡೆಸಿದ್ದು, ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಕಪ್ಪು ಕರಡಿಗಳು ಇರುವ ಪ್ರದೇಶವೂ ಈ ಪುಣ್ಯಭೂಮಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜಕೀಯ ಸೇರಲ್ಲ: ನಾನು ರಾಜಕೀಯಕ್ಕೆ ಹೋಗುವುದಿಲ್ಲ, ಜನತೆಯ ಋುುಣ ತೀರಿಸುವುದಿದೆ. ಹೀಗಾಗಿ ಜನರ ಸೇವೆ ಮಾಡುವುದಷ್ಟೇ ನನ್ನ ಕೆಲಸ. ಇಲ್ಲಿಯ ಶಾಸಕರು ಪ್ರತಿವಾರ 100 ಸಸಿಗಳನ್ನು ನೆಡುವ ಸಂಕಲ್ಪ ಮಾಡಿದ್ದಾರೆ. ಅಲ್ಲದೆ ಜನಸಾಮಾನ್ಯರ ಜತೆ ಬೆರೆಯುತ್ತಾರೆ. ಅಗಾಧ ಜ್ಞಾನ ಹೊಂದಿರುವ ಇವರು ಮಾದರಿ ಶಾಸಕರಾಗಿದ್ದಾರೆ. ಇಂಥ ಶಾಸಕರನ್ನು ಪಡೆದಿರುವವರು ನೀವೇ ಧನ್ಯ. ಈ ಕಾರ್ಯಕ್ರಮ 7ನೇ ಕಾರ್ಯಕ್ರಮ. ಇದು ಈ ಅಭಿಯಾನದ ಕೊನೆಯ ಕಾರ್ಯಕ್ರಮ ಎಂದರು.

ನೆಪಮಾತ್ರದ ಕಾರ್ಯಕ್ರಮ ಅಲ್ಲ: ಈ ಕಾರ್ಯಕ್ರಮ ನೆಪಮಾತ್ರದ ಕಾರ್ಯಕ್ರಮ ಅಲ್ಲ. ಫಲಿತಾಂಶ ಆಧರಿತ ಕಾರ್ಯಕ್ರಮವಾಗಿದೆ. ಇಲ್ಲಿಯ ವನ್ಯಜೀವಿಗಳಿಂದ ರೈತರಿಗೆ ಆಗುವ ತೊಂದರೆಗಳನ್ನು ಕೂಲಂಕಷವಾಗಿ ತಿಳಿದು ಜನರಿಂದ ವನ್ಯಜೀವಿಗಳಿಗೆ ಆಗುವ ತೊಂದರೆಗಳಿಗೂ ಪರಿಹಾರ ಕಲ್ಪಿಸುವ ಮಹತ್ತರ ಕಾರ್ಯ ಮಾಡುತ್ತಿದ್ದು, ಇದಕ್ಕೆ ಜನತೆ ಸಹಕರಿಸಬೇಕಾಗಿದೆ. ಸಮುದಾಯದ ಸಹಕಾರ ಇಲ್ಲದೇ ಕಾರ್ಯಕ್ರಮ ಯಶಸ್ವಿಯಾಗುವುದಿಲ್ಲ ಎಂದರು.

ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಹಿಡಿದು ಹಗಲು-ರಾತ್ರಿ ಕಾಡು ಕಾಯುವ ಸಿಬ್ಬಂದಿ ಜತೆಗೂ ಮುಕ್ತವಾಗಿ ಚರ್ಚಿಸಿ ಕಾಡು ಉಳಿಸಲು, ವನ್ಯಜೀವಿಗಳು ನೆಮ್ಮದಿಯಿಂದ ಜೀವನ ನಡೆಸಲು ಮುಕ್ತ ವಾತಾವರಣ ನಿರ್ಮಿಸುವ ರೈತರಿಗೂ ತೊಂದರೆಗಳನ್ನು ತಪ್ಪಿಸುವ ಕಾರ್ಯ ಮಾಡುತ್ತಿರುವುದು ಈ ಮಾಧ್ಯಮ ಸಂಸ್ಥೆಯ ದೊಡ್ಡ ಕಳಕಳಿಯಾಗಿದೆ ಎಂದರು.

ಶಾಸಕ ಡಾ. ಎನ್‌.ಟಿ. ಶ್ರೀನಿವಾಸ್‌ ಮಾತನಾಡಿ, ‘ಏಷ್ಯಾನೆಟ್‌ ಸುವರ್ಣನ್ಯೂಸ್‌’, ‘ಕನ್ನಡಪ್ರಭ’ ಮಹತ್ತರ ಕಾರ್ಯಕ್ರಮಕ್ಕೆ ಕೈ ಹಾಕಿವೆ. ರಿಷಬ್‌ ಶೆಟ್ಟಿಯಂಥ ನಾಯಕನಟನನ್ನು ಗುಡೇಕೋಟೆಯಂಥÜ ಮೂಲೆಕಟ್ಟಿನ ಕಾಡಿಗೆ ಕರೆತರುವ ಮೂಲಕ ಇಲ್ಲಿಯ ರೈತರ, ಅರಣ್ಯ ಇಲಾಖೆಯ ಸಿಬ್ಬಂದಿಯ ಸಮಸ್ಯೆಗಳಿಗೆ ಧ್ವನಿಯಾಗಿರುವುದು ಶ್ಲಾಘನೀಯ ಎಂದರು.

ನಾನು ಓದುವಾಗ ವಾರಕ್ಕೆ ಮೂರು ಸಿನಿಮಾ ನೋಡುತ್ತಿದ್ದೆ. ಸಿನಿಮಾ ನೋಡಿಕೊಂಡು, ಸರ್ಕಾರಿ ಶಾಲೆಯಲ್ಲಿಯೇ ಬೆಳೆದಿದ್ದು ಸಾಮಾನ್ಯ ರೈತರ ಬದುಕಿನ ಬಗ್ಗೆ ಅರಿವಿದೆ ಎಂದರು.

ಕಾಡು ಉಳಿದರೆ ನಾವೆಲ್ಲ ಉಳಿಯುತ್ತೇವೆ ಎನ್ನುವುದು ತಿಳಿದುಕೊಳ್ಳಬೇಕು. ಗುಡೇಕೋಟೆ ಅರಣ್ಯದಲ್ಲಿರುವ ಕಪ್ಪು ಕರಡಿಗಳು ಏಷ್ಯಾ ಖಂಡದಲ್ಲಿಯೇ ಅಪರೂಪವಾಗಿದ್ದು, ಕರಡಿಗಳ ಸಂತತಿ ಉಳಿಯಬೇಕು. ರೈತರು ಕರಡಿಗಳು, ಕಾಡುಪ್ರಾಣಿಗಳು ವಾಸಿಸಲು ತೊಂದರೆ ಕೊಡಬಾರದು. ಈ ಮೂಲಕ ಕಾಡನ್ನು ಉಳಿಸುವ ಬೆಳೆಸುವ ಕೆಲಸ ಎಲ್ಲರೂ ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ಗುಡೇಕೋಟೆ ಗ್ರಾಪಂಗೆ ಅತ್ಯುತ್ತಮ ಅರಣ್ಯಸ್ನೇಹಿ ಗ್ರಾಪಂ ಪ್ರಶಸ್ತಿಯನ್ನು ನಟ ರಿಷಬ್‌ ಶೆಟ್ಟಿಹಾಗೂ ಶಾಸಕ ಡಾ.ಎನ್‌.ಟಿ.ಶ್ರೀನಿವಾಸ್‌ ಗ್ರಾಪಂ ಅಧ್ಯಕ್ಷೆ ಲಲಿತಮ್ಮ ಗೋವಿಂದಪ್ಪ ಹಾಗೂ ಉಪಾಧ್ಯಕ್ಷರು, ಸದಸ್ಯರಿಗೆ ನೀಡಿ ಗೌರವಿಸಿದರು.

‘ಕನ್ನಡಪ್ರಭ’ ಪುರವಣಿ ಸಂಪಾದಕ ಜೋಗಿ ಉಪಸ್ಥಿತರಿದ್ದರು. ವಿಶೇಷ ಅತಿಥಿಗಳಾಗಿ ಬಳ್ಳಾರಿ ಅರಣ್ಯ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಲಾಲ…, ವಿಜಯನಗರ ಜಿಲ್ಲೆ ಉಪಅರಣ್ಯ ಸಂರಕ್ಷಣಾಧಿಕಾರಿ ಅರಸಾಳನ್‌, ಏಷ್ಯಾನೆಟ್‌ ಸುವರ್ಣನ್ಯೂಸ್‌ನ ಶ್ರೀನಿವಾಸ್‌, ಕಾರ್ತಿಕ್‌, ಸ್ವರೂಪ್‌ ಉಪಸ್ಥಿತರಿದ್ದರು.

 

ಪ್ರಕೃತಿ ನಡುವಿನ ಸಂಘರ್ಷದಲ್ಲಿ ನಾವು ಸೋತರೆ ಬದುಕುತ್ತೇವೆ: ರಿಷಬ್‌ ಶೆಟ್ಟಿ

ಡಾ. ಪುಷ್ಪಾ, ಗುಡೇಕೋಟೆ ವಲಯ ಅರಣ್ಯಾಧಿಕಾರಿ ಎ.ರೇಣುಕಾ, ಕೂಡ್ಲಿಗಿ ಸಿಪಿಐ ವಸಂತ ವಿ. ಅಸೋದೆ, ಗ್ರಾಪಂ ಉಪಾಧ್ಯಕ್ಷರು, ಸದಸ್ಯರು ಇದ್ದರು. ಸುವರ್ಣನ್ಯೂಸ್‌ನ ವಿನೋದ್‌ಕುಮಾರ್‌ ನಾಯ್‌್ಕ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮಕ್ಕೂ ಮುಂಚೆ ಗುಡೇಕೋಟೆ ಸುತ್ತಮುತ್ತಲ ಶಾಲೆ ಮಕ್ಕಳಿಂದ ವಿವಿಧ ನೃತ್ಯಗಳು ನೋಡುಗರ ಮನ ಸೆಳೆದವು. ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಶಾಲೆಯ ಮಕ್ಕಳಿಗೆ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

click me!