ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಬಗ್ಗೆ ಎನೆನೋ ಮಾತಾಡಿದ್ರು. 5 ಸಾವಿರ ರೂಪಾಯಿ ಕೊಟ್ಟು ಮತ ಪಡೆತೀನಿ ಅಂತಾ ಹೇಳಿದ್ರು. ಅವರೆಲ್ಲಾ ಮಾತುಗಳಿಗೆ ನಾನು ತಲೆಕೆಡಿಸಿಕೊಳ್ಳದೆ ಚುನಾವಣೆ ಎದುರಿಸಿದೆ. ಜನ ತಕ್ಕ ಉತ್ತರ ಕೊಟ್ಟು ನನ್ನ ಗೆಲ್ಲಿಸಿದ್ರು ಎಂದು ರಮೇಶ್ ಜಾರಕಿಹೊಳಿ ಹೆಸರು ಹೇಳದೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ಕೊಟ್ಟರು.
ಹಾವೇರಿ (ಅ.29): ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಬಗ್ಗೆ ಎನೆನೋ ಮಾತಾಡಿದ್ರು. 5 ಸಾವಿರ ರೂಪಾಯಿ ಕೊಟ್ಟು ಮತ ಪಡೆತೀನಿ ಅಂತಾ ಹೇಳಿದ್ರು. ಅವರೆಲ್ಲಾ ಮಾತುಗಳಿಗೆ ನಾನು ತಲೆಕೆಡಿಸಿಕೊಳ್ಳದೆ ಚುನಾವಣೆ ಎದುರಿಸಿದೆ. ಜನ ತಕ್ಕ ಉತ್ತರ ಕೊಟ್ಟು ನನ್ನ ಗೆಲ್ಲಿಸಿದ್ರು ಎಂದು ರಮೇಶ್ ಜಾರಕಿಹೊಳಿ ಹೆಸರು ಹೇಳದೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ಕೊಟ್ಟರು.
ಇಂದು ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಸಾಂವಸಗಿ ಗ್ರಾಮದ ವೀರರಾಣಿ ಚೆನ್ನಮ್ಮ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವೆ, ಈಗ ಆ ವಿಚಾರದ ಬಗ್ಗೆ ಹೆಚ್ಚಿಗೆ ನಾನು ಮಾತಾಡೊಕೆ ಹೋಗಲ್ಲ. ನನ್ನ ಸೋಲಿಸಬೇಕು ಅಂತಾ ಎನೆನೋ ಪ್ರಯತ್ನ ಮಾಡಿದ್ರು. ಆದರೆ ಯಾರು ಎಷ್ಟೇ ಅಪಪ್ರಚಾರ ಮಾಡಿದ್ರೂ, ಇಂದು ರಾಜ್ಯದಲ್ಲಿ ನಮ್ಮ ಸರ್ಕಾರ ಇದೆ. ನಾನು ಮಂತ್ರಿ ಆಗಿದ್ದೇನೆ. ಜನರು ನಮ್ಮ ಜೊತೆಗೆ ಇದ್ರೆ ಯಾರೂ ಏನೂ ಮಾಡೋಕೆ ಆಗಲ್ಲ ಅನ್ನೋದಕ್ಕೆ ಬೆಳಗಾವಿ ಗ್ರಾಮೀಣ ಚುನಾವಣೆ ಸಾಕ್ಷಿ ಎಂದರು.
undefined
ಬಿಜೆಪಿ ಸೋತು ಚಿಂದಿ ಚಿತ್ರಾನ್ನ ಆಗಿಬಿಟ್ಟಿದೆ, ಮತ್ತೆ ಹಳೇ ಚಾಳಿ ಮುಂದುವರಿಸಿದ್ದಾರೆ; ರಾಮಲಿಂಗಾರೆಡ್ಡಿ
ನಾನು ಹಿಂದೆ ಚೆನ್ನಮ್ಮನ ವಂಶದವರು ಎಂದು ಹೇಳಿದ್ದೆ. ನೀವು ಹೇಗೆ ಚೆನ್ನಮ್ಮನ ವಂಶದವರು ಅಂತ ಮಾಧ್ಯಮದವರ ಬಳಿಯಿಂದ ಒಬ್ರು ಕೇಳೋಕೆ ಹೇಳಿದ್ರು. ಆದರೆ ಅದಕ್ಕೆ ನಾನು ಇಲ್ಲಿರುವ ಎಲ್ಲರೂ ಚೆನ್ನಮ್ಮನ ವಂಶದವರು ಎಂದು ಹೇಳಿದ್ದೆ ಎಂದರು.
ಇನ್ನು ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಬ್ಬಾಳ್ಕರ್, ನಾನು ಅದರ ಬಗ್ಗೆ ಮಾತಾಡಲ್ಲ. ನಮ್ಮ ಅಧ್ಯಕ್ಷರ ಅಪ್ಪಣೆ ಏನಿದೆ ಅದನ್ನು ಚಾಚೂ ತಪ್ಪದೆ ಪಾಲಿಸಬೇಕು. ಅವರು ನಮ್ಮ ಪಕ್ಷದ ಅಧ್ಯಕ್ಷರು. ಯಾರೇ ಆಗಲಿ ಮಾಧ್ಯಮಗಳಿಗೆ ಹೇಳಿಕೆ ಕೊಡುವುದರ ಬಗ್ಗೆ ನಮಗೆ ಗೊತ್ತಿದೆ. ಆದರೆ ಈ ವಿಚಾರವಾಗಿ ಜಾಸ್ತಿ ಮಾತಾಡದೆ ಅಧ್ಯಕ್ಷರ ಅಪ್ಪಣೆಯಂತೆ ನಡೆದುಕೊಳ್ಳುತ್ತೇವೆ. ಅಧ್ಯಕ್ಷರು ಏನು ಅಪ್ಪಣೆ ಕೊಡ್ತಾರೋ ಅದರಂತೆ ನಡೆದುಕೊಳ್ತೇವೆ ಎಂದು ಸತೀಶ್ ಜಾರಕಿಹೊಳಿ ಭಿನ್ನಮತದ ಹೇಳಿಕೆ ವಿಚಾರಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದರು.
ಎರಡೂವರೆ ವರ್ಷದ ಬಳಿಕ ಸಿಎಂ ಖುರ್ಚಿ ಬದಲಾವಣೆ ಬಗ್ಗೆ ವೀರಪ್ಪ ಮೊಯ್ಲಿ ಹೇಳಿಕೆ ಸಂಬಂಧ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ, ಈ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು, ಆದರೆ ಯಾರೇ ಮುಖ್ಯಮಂತ್ರಿಯಾದರು ಕೂಡಾ ನಾವು ಕೆಲಸ ಮಾಡ್ತೇವೆ. ಯಾರು ಸಿಎಂ ಆದರೂ ನಮಗೆ ಅಭ್ಯಂತರ ಇಲ್ಲ. ಸಿದ್ದರಾಮಯ್ಯ ಸಾಹೇಬರು ಒಳ್ಳೆಯ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಹೈಕಮಾಂಡ್ ತೀರ್ಮಾನ ಏನಿದೆಯೋ ಅದಕ್ಕೆ 136 ಶಾಸಕರು ಸಚಿವರು ಬದ್ಧರಾಗಿದ್ದೇವೆ. ನಮ್ಮ ಅಧ್ಯಕ್ಷರು ಈ ವಿಚಾರವಾಗಿ ಕಟ್ಟಪ್ಪಣೆ ಮಾಡಿದಾರೆ. ಹೈಕಮಾಂಡ್ ಏನೇ ತಿರ್ಮಾನ ಮಾಡಿದರೂ, ನಾನು ಶಿಸ್ತಿನ ಸಿಪಾಯಿ ಅಂತೆ ಇರ್ತೆನೆ ಎಂದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ವಿಚಾರಣೆ ಬೆನ್ನಲ್ಲೇ ಮಾಜಿ ಡಿಸಿಎಂ ಸವದಿ ಪುತ್ರನಿಗೂ ಹುಲಿ ಉಗುರಿನ ಕಂಟಕ!
ಇನ್ನು ಹುಲಿ ಉಗುರಿನ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಈಗಾಗಲೇ ಹೇಳಿಕೆ ನೀಡಿದ್ದೇನೆ ಅದು ಒರಿಜಿನಲ್ ಅಲ್ಲ, ಪ್ಲಾಸ್ಟಿಕ್ ಉಗುರು. ಇದರಲ್ಲಿ ರಾಜಕೀಯ ಮಾಡುವುದೇನೂ ಇಲ್ಲ ಎಂದರು.