
ಬೆಂಗಳೂರು ಬೊಮ್ಮನಹಳ್ಳಿ (ಅ.29) ಸಿಲಿಕಾನ್ ಸಿಟಿ ಜನರಿಗೆ ಇಷ್ಟು ದಿನ ಮಳೆ, ರಸ್ತೆ ಗುಂಡಿ, ,ಟ್ರಾಫಿಕ್ ಜಾಮ್ ಕಿರಿಕಿರಿಯೇ ದೊಡ್ಡ ಸಮಸ್ಯೆಯಾಗಿತ್ತು. ಇದೀಗ ನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿರೋದು ಬೆಂಗಳೂರಿಗರ ನಿದ್ದೆಗೆಡಿಸಿದೆ.
ಬೆಂಗಳೂರಿನ ಜನದಟ್ಟಣೆಯ ವಸತಿ ಪ್ರದೇಶದಲ್ಲೇ ಚಿರತೆ ಕಾಣಿಸಿಕೊಂಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಹೊಸೂರು ರಸ್ತೆಯ ಕೂಡ್ಲು ಗೇಟ್ ಬಳಿ ಚಿರತೆ ಓಡಾಡುವುದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.
ಸ್ಥಳೀಯ ನಿವಾಸಿಗಳು ಚಿರತೆ ಓಡಾಟ ಕಂಡು ಬೆಚ್ಚಿಬಿದ್ದಿದ್ದಾರೆ. ಕೂಡ್ಲು ಗೇಟ್ ನ ಹೊಸಪಾಳ್ಯದ ಬಳಿ ದಾಮೊದರ್ ರೆಡ್ಡಿ ಎಂಬುವವರ ಮನೆಯ ಬಳಿ ಕಾಣಿಸಿಕೊಂಡ ಚಿರತೆ. ಬೀದಿನಾಯಿಗಳು ಚಿರತೆಯನ್ನು ಅಟ್ಟಿಸಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾಣಿಸಿಕೊಂಡ ಚಿರತೆ.
ಮೈಸೂರು: ತಿ.ನರಸೀಪುರದಲ್ಲಿ ನಿಲ್ಲದ ಚಿರತೆ ಉಪಟಳ, ಆತಂಕದಲ್ಲಿ ಜನತೆ..!
ರಾಜಧಾನಿಗೆ ಹೊಂದಿಕೊಂಡ ಗ್ರಾಮಗಳಲ್ಲಿ ಮಾನವ ಪ್ರಾಣಿ ಸಂಘರ್ಷದಿಂದಾಗಿ ವನ್ಯಜೀವಿಗಳು ಆಹಾರ ಹುಡುಕಿಕೊಂಡು ನಗರದೊಳಗೆ ಪ್ರವೇಶಿಸುವುದು ಹಿಂದಿನಿಂದಲೂ ನಡೆಯುತ್ತಿದೆ. ಅದರಲ್ಲೂ ಕಾಡಂಚಿನ ಗ್ರಾಮದಲ್ಲಿ ಇವೆಲ್ಲ ಮಾಮೂಲು ಎನ್ನವಷ್ಟು ಕಾಣಿಸಿಕೊಳ್ಳುತ್ತಿವೆ. ಇದೇ ವರ್ಷ ನೈಸ್ ರಸ್ತೆ ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಂಗಡಿಪುರದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇದೀಗ ಕೂಡ್ಲುಗೇಟ್ ಬಳಿ ಕಾಣಿಸಿಕೊಂಡಿದೆ.ಚಿರತೆ ಭಯದಿಂದಾಗಿ ಜನರು ರಾತ್ರಿ ವೇಳೆ ಹೊರಗಡೆ ಬರಲು ಹೆದರುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ