ಬಿಜೆಪಿ ಸೋತು ಚಿಂದಿ ಚಿತ್ರಾನ್ನ ಆಗಿಬಿಟ್ಟಿದೆ, ಮತ್ತೆ ಹಳೇ ಚಾಳಿ ಮುಂದುವರಿಸಿದ್ದಾರೆ; ರಾಮಲಿಂಗಾರೆಡ್ಡಿ

Published : Oct 29, 2023, 02:55 PM IST
ಬಿಜೆಪಿ ಸೋತು ಚಿಂದಿ ಚಿತ್ರಾನ್ನ ಆಗಿಬಿಟ್ಟಿದೆ, ಮತ್ತೆ ಹಳೇ ಚಾಳಿ ಮುಂದುವರಿಸಿದ್ದಾರೆ; ರಾಮಲಿಂಗಾರೆಡ್ಡಿ

ಸಾರಾಂಶ

ನಮಗೆ ಮನೆಗೆಲ್ಲ ಎರಡು ಮೂರು ಬಾಗಿಲು ಇರುತ್ತವೆ. ಬಿಜೆಪಿಯವರು ಕಾಂಗ್ರೆಸ್ ನಲ್ಲಿ ಮೂರು ಬಾಗಿಲು ಇದೇ ಅಂತ ಹೇಳ್ತಾರೆ. ಆದ್ರೆ ಬಿಜೆಪಿ ಮನೆಯಲ್ಲಿ ಬಾಗಿಲೇ ಇಲ್ಲ, ಬಿಜೆಪಿ ಮನೆಗೆ ಎಲ್ಲಿದೆ ಬಾಗಿಲು? ಕಳೆದು ಚುನಾವಣೆಯಲ್ಲಿ ಸೋತು ಚಿಂದಿ ಚಿತ್ರಾನ್ನ ಆಗಿಬಿಟ್ಟಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.

ಬೆಂಗಳೂರು (ಅ.29): ಬಿಜೆಪಿಯವರು ತಮ್ಮ ಹಳೆ ಚಾಳಿಯನ್ನು ಮುಂದುವರಿಸಿದ್ದಾರೆ. ಬೆಂಕಿ ಇಲ್ಲದೆ ಹೊಗೆ ಆಡೋದಿಲ್ಲ ಎಂದು ಬಿಜೆಪಿ ಆಪರೇಷನ್ ಕಮಲಕ್ಕೆ ಯತ್ನಿಸುತ್ತಿರುವುದಕ್ಕೆ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಆನೇಕಲ್ ತಾಲೂಕಿನ ಹಂದೇನಹಳ್ಳಿ ಸಮೀಪ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು,  ಈ ಹಿಂದೆ ಬಿಜೆಪಿಯವರು ಮಾಡಿರೋದನ್ನ ಮತ್ತೆ ಮುಂದುವರಿಸಿದ್ದಾರೆ. ಇದನ್ನು ನಮ್ಮ ಪಕ್ಷದ ಹಲವು ಶಾಸಕರು ಹೇಳುತ್ತಿದ್ದಾರೆ. ಬಿಜೆಪಿಯವರಿಗೆ ತಮ್ಮ ಕೈನಲ್ಲಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಕೊಳ್ಳೋಕೆ ಆಗ್ತಿಲ್ಲ. ನಾಲ್ಕು ವರ್ಷಗಳ ಕಾಲ ಸರಿಯಾದ ಆಡಳಿತ ಕೋಡೋಕೆ ಆಗಲಿಲ್ಲ. ಬಿಜೆಪಿಯವರನ್ನು ನಂಬಿ ಯಾರೂ ಯಾವ ಶಾಸಕರೂ ಹೋಗೋದಿಲ್ಲ. ಹಾಗೇನಾದರೂ ನಂಬಿ  ಹೋದರೆ ಹೋದವರಿಗೆ ಮೂರು ನಾಮ ಗ್ಯಾರಂಟಿ ಎಂದು ವ್ಯಂಗ್ಯ ಮಾಡಿದರು.

ಬಿಜೆಪಿ ಶಾಸಕರಿಂದ ಬ್ಲಾಕ್‌ಮೇಲ್‌ ತಂತ್ರ: ಸಚಿವ ಸತೀಶ ಜಾರಕಿಹೊಳಿ

ಇನ್ನು ಕಾಂಗ್ರೆಸ್‌ ಒಡೆದ ಮನೆ, ಮೂರು ಬಾಗಿಲು ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಮಗೆ ಮನೆಗೆಲ್ಲ ಎರಡು ಮೂರು ಬಾಗಿಲು ಇರುತ್ತವೆ. ಬಿಜೆಪಿಯವರು ಕಾಂಗ್ರೆಸ್ ನಲ್ಲಿ ಮೂರು ಬಾಗಿಲು ಇದೇ ಅಂತ ಹೇಳ್ತಾರೆ. ಆದ್ರೆ ಬಿಜೆಪಿ ಮನೆಯಲ್ಲಿ ಬಾಗಿಲೇ ಇಲ್ಲ, ಬಿಜೆಪಿ ಮನೆಗೆ ಎಲ್ಲಿದೆ ಬಾಗಿಲು? ಕಳೆದು ಚುನಾವಣೆಯಲ್ಲಿ ಸೋತು ಚಿಂದಿ ಚಿತ್ರಾನ್ನ ಆಗಿಬಿಟ್ಟಿದೆ. ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ   ಈಗ ಮತ್ತೆ ಅಧಿಕಾರ ಹಿಡಿಯುವ ಹಗಲುಗನಸು ಕಾಣುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನನ್ನ ಮೌನವೂ ವೀಕ್ನೆಸ್‌ ಅಲ್ಲ: ಜಾರಕಿಹೊಳಿಗೆ ತಿರುಗೇಟು ಕೊಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಇನ್ನು ಡಿಸಿಎಂರನ್ನು ಹೊರಗಿಟ್ಟು ರಾಜಕೀಯ ಮಾಡಲಾಗುತ್ತಿದೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ,  ಯಾರೋ ನಾಲ್ಕು ಜನ ಊಟಕ್ಕೆ ಸೇರಿಕೊಂಡ್ರೆ ಹೊರಗಿಟ್ಟಂತೆ ಅಲ್ಲ ಎಂದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ
ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್