ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಗ್ರರ ಜತೆಗೆ ನಂಟು ಹೊಂದಿರುವ ಮೌಲ್ವಿ ಜತೆಗೆ ವೇದಿಕೆ ಹಂಚಿಕೊಂಡಿದ್ದಾರೆಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಕ್ಕೆ ಇದೀಗ ಕಾಂಗ್ರೆಸ್ ಹಾಗೂ ಅಹಿಂದ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಧರ್ಮ ಗುರುಗಳ ಜೊತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಇರುವ ಫೋಟೊ ಸಹ ಹಂಚಿಕೊಂಡು ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕರು.
ಧಾರವಾಡ (ಡಿ.8) : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಗ್ರರ ಜತೆಗೆ ನಂಟು ಹೊಂದಿರುವ ಮೌಲ್ವಿ ಜತೆಗೆ ವೇದಿಕೆ ಹಂಚಿಕೊಂಡಿದ್ದಾರೆಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಕ್ಕೆ ಇದೀಗ ಕಾಂಗ್ರೆಸ್ ಹಾಗೂ ಅಹಿಂದ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಕ್ಕೆ ಗುರಿಯಾಗಿರುವ ಧರ್ಮಗುರು ಜತೆಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇರುವ ಫೋಟೋ ಬಿಡುಗಡೆ ಮಾಡಿದ್ದಲ್ಲದೆ, ಯತ್ನಾಳ ಅವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ಎಂದು ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿಗಳು ಐಸಿಸ್ ಜತೆಗೆ ನಂಟು ಹೊಂದಿರುವ ಮೌಲ್ವಿ ತನ್ವೀರ್ ಪೀರಾ ಅವರ ಜತೆಗೆ ವೇದಿಕೆ ಹಂಚಿಕೊಂಡಿದ್ದರು. ಇವರಿಗೆ ಮಧ್ಯಪ್ರಾಚ್ಯದ ತೀವ್ರಗಾಮಿ ಇಸ್ಲಾಮಿಕ್ ಧರ್ಮಗುರುಗಳ ಜತೆಗೆ ನಂಟಿದೆ ಎಂದು ಯತ್ನಾಳ್ ಆರೋಪಿಸಿದ್ದರು.
ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವಬೆದರಿಕೆ ಪ್ರಕರಣ ಎನ್‌ಐಎ ವಶಕ್ಕೆ ಉಗ್ರ ಅಪ್ಸರ್ ಪಾಷಾ?
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಧಾರವಾಡ ಅಂಜುಮನ್ ಇಸ್ಲಾಂ ಸಂಸ್ಥೆ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ, ಯತ್ನಾಳ ಅವರಿಗೆ ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನ ನೀಡದ ಹಿನ್ನೆಲೆಯಲ್ಲಿ ಹತಾಶೆಗೊಂಡು ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಇರಾಕ್‌ನ ಬಾಗ್ದಾದ್ ಮೆಹಬೂಬ ಸುಬಾನಿ ದರ್ಗಾ ಮುಸ್ಲಿಮರ ಪವಿತ್ರ ಕ್ಷೇತ್ರಗಳಲ್ಲೊಂದು. ಅಲ್ಲಿಯ ಧರ್ಮಗುರು ಖಾಲಿದ್ ಗಿಲಾನಿ ಅವರಿಗೆ ಭಯೋತ್ಪಾದಕರ ಜತೆಗೆ ನಂಟಿದೆ ಎಂಬುದು ಸರಿಯಲ್ಲ. ಅಲ್ಲಿಗೆ ಎಲ್ಲರೂ ಹೋಗುವಂತೆ ತನ್ವೀರ್ ಪೀರಾ ಕೂಡ ಹೋಗಿದ್ದಾರೆ. ಬಿಜೆಪಿಯ ಗಡ್ಕರಿ ಸಹ 12 ವರ್ಷಗಳ ಹಿಂದೆ ತನ್ವೀರ್ ಪೀರಾ ಅವರನ್ನು ಭೇಟಿಯಾಗಿದ್ದಾರೆ. ಆ ಫೋಟೋ ಸಹ ಇದೆ ಎಂದು ತಿರುಗೇಟು ನೀಡಿದ್ದಾರೆ.
ಇನ್ನು ಯತ್ನಾಳ ಹೇಳಿರುವಂತೆ ಮೌಲ್ವಿ ತನ್ವೀರ್ ಪೀರಾ ಅವರು ಅಪರಾಧಿಯಾಗಿದ್ದರೆ ತನಿಖೆಯಿಂದ ಸತ್ಯಾಸತ್ಯತೆ ಬಯಲಿಗೆ ಬರಲಿ. ಆರೋಪ ಸತ್ಯಕ್ಕೆ ದೂರವಾಗಿದ್ದರೆ ಯತ್ನಾಳರ ಮೇಲೂ ಕ್ರಮವಾಗಲಿ ಎಂದು ಅಹಿಂದ ನಾಯಕ ಹಾಗೂ ಕೆಪಿಸಿಸಿ ರಾಜ್ಯ ವಕ್ತಾರ ಎಸ್.ಎಂ.ಪಾಟೀಲ ಗಣೀಹಾರ ಆಗ್ರಹಿಸಿದ್ದಾರೆ.
ಬೆಳಗಾವಿ ಜೈಲಿಂದಲೇ ಕೇಂದ್ರ ಸಚಿವ ಗಡ್ಕರಿಗೆ ಬೆದರಿಕೆ ಕರೆ: ಬೆದರಿಕೆ ಹಿಂದಿದೆ ಲಷ್ಕರ್ ಉಗ್ರರ ನಂಟು!
ವಿಡಿಯೋ ಹರಿಬಿಟ್ಟ ಮೌಲ್ವಿ: ಈ ಎಲ್ಲ ಬೆಳವಣಿಗೆಗಳ ನಡುವೆಯೇ ಮೌಲ್ವಿ ತನ್ವೀರ್ ಪೀರಾ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಾವೇ ಹಾಡಿರುವ ''''ಸಾರೇ ಜಹಾ ಸೆ ಅಚ್ಛಾ ಏ ಹಿಂದುಸ್ತಾನ್ ಹಮಾರ'''' ದೇಶಭಕ್ತಿ ಗೀತೆಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.