ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಪತ್ತೆಗಾಗಿ ಸಂಘ ಪರಿವಾರ ಹಾಗೂ ಸಾವಿರಾರು ಜನ ಭಕ್ತಾದಿಗಳು ಕೊರಗಜ್ಜನ ಮೊರೆ ಹೋಗಿದ್ದಾರೆ.
ಮಂಗಳೂರು (ಆ.13): ರಾಜ್ಯದಲ್ಲಿ ಕಳೆದ 11 ವರ್ಷಗಳಿಂದಲೂ ವಿವಾದಾತ್ಮಕ ಸ್ವರೂಪ ಪಡೆದುಕೊಂಡಿರುವ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಪತ್ತೆಗಾಗಿ ಸಾವಿರಾರು ಜನ ಭಕ್ತಾದಿಗಳು ಕೊರಗಜ್ಜನ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಸಂಘಟನೆಗಳು ಹಾಗೂ ನೂರಾರು ಜನರು ಸೇರಿ ಮಂಗಳೂರಿನಿಂದ ಕೊರಗಜ್ಜ ಕ್ಷೇತ್ರಕ್ಕೆ ಪಾದಯಾತ್ರೆಯನ್ನೂ ಹಮ್ಮಿಕೊಳ್ಳಲಾಗಿದೆ.
ಹೌದು, ಸೌಜನ್ಯ ಪ್ರಕರಣದ ಆರೋಪಿಗಳ ಪತ್ತೆಗೆ ಆಗ್ರಹಿಸಿ ಕೊರಗಜ್ಜ ಕ್ಷೇತ್ರಕ್ಕೆ ಪಾದಯಾತ್ರೆ ಮಾಡಲಾಗುತ್ತಿದೆ. ಮಂಗಳೂರಿನ ಪಂಡಿತ್ ಹೌಸ್ ನಿಂದ ಕೊರಗಜ್ಜ ಕ್ಷೇತ್ರಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಸಂಘ ಪರಿವಾರ ಹಾಗೂ ಸ್ಥಳೀಯರಿಂದ ಕಾಲ್ನಡಿಗೆ ಜಾಥ ಮಾಡಲಾಗುತ್ತಿದೆ. ಈ ಪಾದಯಾತ್ರೆ ಮೂಲಕ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಹೋಗಲು ನೂರಾರು ಭಾಗವಹಿಸಲಿದ್ದಾರೆ.
ಜಸ್ಟೀಸ್ ಫಾರ್ ಸೌಜನ್ಯಾ ಕೇಸಿಗೆ ಮಣಿಯುತ್ತಾ ಸರ್ಕಾರ.! ನಾಲ್ವರ ವಿರುದ್ಧ ಮರು ತನಿಖೆ ನಡೆಯುತ್ತಾ.?
ಇನ್ನು ಕೊರಗಜ್ಜ ಸನ್ನಿಧಾನದಲ್ಲಿ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದಲ್ಲಿ ಅರೋಪಿಗಳ ಪತ್ತೆಗಾಗಿ ಕೊರಗಜ್ಜನಿಗೆ ಪ್ರಾರ್ಥನೆ ಮಾಡಲಾಗತದೆ. ನೂರಾರು ಜನರಿಂದ ಕೊರಗಜ್ಜ ದೈವದ ಎದುರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ನಿರ್ಧರಿಸಲಾಗಿದೆ. ಏಳು ಕಲ್ಲಿನಲ್ಲಿ ನೆಲೆಯಾಗಿರುವ ಕೊರಗಜ್ಜನ ಕಾರಣಿಕ ಶಕ್ತಿಯೇ ಪ್ರಧಾನವಾಗಿದೆ. ಹೀಗಾಗಿ, ಅನ್ಯಾಯಕ್ಕೊಳಗಾದ ಸೌಜನ್ಯ ಕುಟುಂಬ ಪರ ಎಲ್ಲರೂ ಇದ್ದೇವೆ. ಮುಂದೆಂದೂ ಇಂತಹ ಘೋರ ಕೃತ್ಯಗಳು ನಡೆಯದಿರಲಿ ಎಂದು ಕೊರಗಜ್ಜನಿಗೆ ಮೊರೆ ಇಡಲಿದ್ದಾರೆ. ಜೊತೆಗೆ, ಶ್ರೀಕ್ಷೇತ್ರವಾಗಿರುವ ಮಂಜುನಾಥ ಸ್ವಾಮಿ ಸನ್ನಿಧಾನ ಧರ್ಮಸ್ಥಳ ಕ್ಷೇತ್ರದ ಹೆಸರು ಹಾಳುಮಾಡಬಾರದು, ಇದಕ್ಕೆ ನೀನೇ ಕಡಿವಾಣ ಹಾಕಬೇಕು. ನ್ಯಾಯ ಸಿಗುವವರೆಗೂ ಹೋರಾಟ ನಿರಂತರ ಎಂದು ಪ್ರಾರ್ಥನೆ ಮಾಡಲಾಗುತ್ತಿದೆ. ದಿವ್ಯಜ್ಯೋತಿ ಕ್ರಿಕೆಟರ್ಸ್, ವಿಎಚ್ಪಿ-ಭಜರಂಗದಳ, ಬಿಜೆಪಿ ಪ್ರಮುಖರು ಭಾಗಿಯಾಗಲಿದ್ದಾರೆ.
ಧರ್ಮಸ್ಥಳ ಸುಳ್ಯದಲ್ಲಿ ದೊಡ್ಡ ಪ್ರತಿಭಟನೆ: ಸೌಜನ್ಯ ಕೇಸ್ ನಲ್ಲಿ ಧರ್ಮಸ್ಥಳದ ಶಕ್ತಿ ಪ್ರದರ್ಶನದ ಬೆನ್ನಲ್ಲೇ ಮತ್ತೊಂದು ಬೃಹತ್ ಹೋರಾಟಕ್ಕೆ ಸುಳ್ಯ ಸಾಕ್ಷಿಯಾಗಲಿದೆ. ನ್ಯಾಯಕ್ಕಾಗಿ ಇಂದು ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದೆ. ಸಿಬಿಐ ಕೋರ್ಟ್ ತೀರ್ಪಿನ ಬಳಿಕ ಇದೇ ಮೊದಲ ಬಾರಿಗೆ ಬೃಹತ್ ಹೋರಾಟ ನಡೆಸಲು ಹಲವು ಸಂಘಟನೆಗಳು ಮುಂದಾಗಿದ್ದವು. ಅದರಂತೆ ಆ.8ರಂದು ಸುಳ್ಯದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯನ್ನೂ ಮಾಡಲಾಗಿತ್ತು. ನಿಂತಿಕಲ್ಲಿನಿಂದ ಸುಳ್ಯದವರೆಗೆ ಸುಮಾರು 22 ಕಿ.ಮೀವರೆಗೆ ಕಾಲ್ನಡಿಗೆ, ಬೃಹತ್ ವಾಹನ ಜಾಥವಾಹನ ಜಾಥದ ಮೂಲಕ ಹೋರಾಟ. ಬಳಿಕ ಸುಳ್ಯದ ಪೈಚಾರಿನಿಂದ ಕಾಲ್ನಡಿಗೆ ಮೂಲಕ ಸಾಗಿ ಸುಳ್ಯದಲ್ಲಿ ಬೃಹತ್ ಸಭೆ ಮಾಡಲಾಯಿತು.
'ಊರು ಎಂದ್ಮೇಲೆ ಹೊಲೆಗೇರಿ ಇರುತ್ತೆ' ಹೇಳಿಕೆಗೆ ಆಕ್ರೋಶ: ಕ್ಷಮೆ ಕೇಳಿದ ಬುದ್ಧಿವಂತ ಉಪೇಂದ್ರ
ಅಂದು ಪ್ರತಿಭಟನೆ ಇಂದು ದೇವರ ಮೊರೆ: ಈ ವೇಳೆ ಸೌಜನ್ಯ ತಾಯಿ ಕುಸುಮಾವತಿ (soujanya mother kusumavati) ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಭಾಗಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು. ಅಂದಿನ ಬೃಹತ್ ಜಾಥಾದಲ್ಲಿ ಪಕ್ಷ, ಜಾತಿ, ಧರ್ಮ ಮರೆತು ಹೋರಾಟ ನಡೆಸಲಾಗುತ್ತಿದೆ. ಸುಳ್ಯದ ಗೌಡರ ಸಂಘ ಸೇರಿ ಹಲವಾರು ಸಂಘ ಸಂಸ್ಥೆಗಳು ಬೆಂಬಲ ನೀಡಿದ್ದವು. ಈಗ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ಕೊರಗಜ್ಜನ ಮೊರೆ ಹೋಗಲಾಗುತ್ತಿದೆ.